ಬಂಟ್ವಾಳ : ಬಾಳೆಕುದ್ರು ಮಠದ ವಾಸುದೇವ ಸದಾಶಿವ ಸ್ವಾಮೀಜಿ ವಿರುದ್ಧ ಕಳ್ಳತನದ ಆರೋಪ ಕೇಳಿಬಂದಿರುವ ಬೆನ್ನಲ್ಲೇ ಬಂಟ್ವಾಳದ ಪೊಳಲಿ ದೇವರಗುಡ್ಡೆಯಲ್ಲಿ ಪೂಜೆ ಮಾಡುತ್ತಿದ್ದ ಸಂದರ್ಭ ಮಧುಸೂದನ್ ಭಟ್ಟ ಯಾನೆ ವಾಸುದೇವ ಸದಾಶಿವ ಎಂಬಾತನ ವಿರುದ್ಧ ಪುರಾತನ ಚರ ವಿಗ್ರಹ ಮತ್ತು ಪೂಜಾ ಸಾಮಾಗ್ರಿ ಕೊಂಡು ಹೋಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ.
ರಕ್ಷಿತ್ ಕುಡುಪು, ಅಕ್ಷಯ್ ನಾವೂರು, ಹಿತೇಶ್ ಪೊಳಲಿ ಎಂಬುವರು ದೂರು ನೀಡಿದ್ದು, ಹಿತೇಶ್ ಪೂಜಾರಿ ಅವರಿಗೆ ಪರಿಚಯವಾದ ಮಧುಸೂಧನ್ ಭಟ್ಟ 2024ರಿಂದ ದೇವರಗುಡ್ಡೆಯಲ್ಲಿ ಪೂಜೆ ಪ್ರಾರಂಭಿಸಿದ ನಂತರ ದೇವರಗುಡ್ಡೆ ದೇವರಿಗೆ ಸಂಬಂಧಪಟ್ಟ ಶಿವನ ವಿಗ್ರಹ ಹಾಗೂ ತ್ರಿಶೂಲ ಕಾಣೆಯಾಗಿದೆ.
ರಕ್ಷಿತ್ ಕುಡುಪು ಹಾಗೂ ಅಕ್ಷಯ್ ಕೊಟ್ಟ ಪಂಚಲೋಹದದಾರಪಾತ್ರ ಹಾಗೂ ತಾಮ್ರದ ಮೂರು ಬಿಂದಿಗೆ ಹಾಗೂ ಪಂಚಪಾತ್ರೆ ಹಾಗೂ ದೇವರ ಬೆಳ್ಳಿದೃಷ್ಟಿ ಕಾಣೆಯಾಗಿದೆ.
ಹಲವಾರು ಶತಮಾನಗಳಿಂದ ಪೂಜಿಸಿಕೊಂಡು ಬಂದ ಶಿವನ ಮೂರ್ತಿಗಳು, ತ್ರಿಶೂಲ ಹಾಗೂ ಇತರ ಪೂಜಾ ವಸ್ತು ಮಾರಾಟ ತಡವಾಗಿ ಬೆಳಕಿಗೆ ಬಂದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಸ್ವಾಮೀಜಿ ವಿರುದ್ಧ ಬೆಂಗಳೂರು ವಿಜಯನಗರದ ಸಬ್ ಪಿಎಸ್ ಬಸವೇಶ್ವರ ನಗರದಲ್ಲಿ ಮೊಕದ್ದಮೆ ದಾಖಲೆಯಾಗಿದ್ದು, ಕಳವಾದ ವಿಗ್ರಹಗಳ ತನಿಖೆ ನಡೆಸಿ ಪತ್ತೆ ಹಚ್ಚಿಕೊಡುವಂತೆ ವಿನಂತಿಸಿದ್ದಾರೆ.




