Saturday, July 4, 2026

ಮೂಡುಬಿದಿರೆಯಲ್ಲಿ ನಾಪತ್ತೆಯಾಗಿದ್ದ ಕಾರ್ತಿಕ್ ಶೆಟ್ಟಿ ಮೃತದೇಹ ಪತ್ತೆ; ಹೃದಯಾಘಾತ ಶಂಕೆ

ಮೂಡುಬಿದಿರೆ: ಗುರುವಾರದಿಂದ ನಾಪತ್ತೆಯಾಗಿದ್ದ ಅಲಂಗಾರು ಆಶ್ರಯ ಕಾಲನಿ ಸಮೀಪದ ಬಂಗೇರಬೆಟ್ಟು ನಿವಾಸಿ ಕಾರ್ತಿಕ್ ಶೆಟ್ಟಿ (34) ಅವರ ಮೃತದೇಹ ಶನಿವಾರ ಬೆಳಗ್ಗೆ ಮನೆಯ ಸಮೀಪದ ಶೆಡ್ ಹೊರಭಾಗದಲ್ಲಿ ಪತ್ತೆಯಾಗಿದೆ.

ಕಾರ್ತಿಕ್ ಶೆಟ್ಟಿ ಅವಿವಾಹಿತರಾಗಿದ್ದು, ಹಿಟಾಚಿ ಮತ್ತು ಜೆಸಿಬಿ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಸ್ಥಳೀಯರು ಹುಡುಕಾಟ ನಡೆಸುತ್ತಿದ್ದರು.

ಮೃತದೇಹ ಪತ್ತೆಯಾದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಆದರೆ, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವೇ ಸಾವಿನ ನಿಖರ ಕಾರಣ ತಿಳಿದುಬರಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕ್ಯಾಪ್ಷನ್: ಮೂಡುಬಿದಿರೆಯಲ್ಲಿ ನಾಪತ್ತೆಯಾಗಿದ್ದ ಕಾರ್ತಿಕ್ ಶೆಟ್ಟಿ ಮೃತದೇಹ ಮನೆಯ ಸಮೀಪ ಪತ್ತೆ; ಹೃದಯಾಘಾತ ಶಂಕೆ.

More like this
Related

ಮಣಿಪಾಲದ ಶಾಲಾಬಸ್ಅಪಘಾತಪ್ರಕರಣ: ಡ್ರೈವಿಂಗ್ ಲೈಸನ್ಸ್ ಹೊಂದಿರದೆ ಬಸ್ ಚಲಾಯಿಸಿದ  ಕಂಡಕ್ಟರ್ ಬಂಧನ

ಉಡುಪಿ: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾಲಾ ಬಸ್ ಅಪಘಾತ ಪ್ರಕರಣದ...

ಕೆ.ಆರ್. ವೃತ್ತದಲ್ಲಿ ಬಿಎಂಟಿಸಿ ಬಸ್‌ಗಳ ಭೀಕರ ಡಿಕ್ಕಿ: ಚಾಲಕ ಸೇರಿ 16 ಮಂದಿಗೆ ಗಾಯ

ಬೆಂಗಳೂರು: ನಗರದ ಹೃದಯಭಾಗವಾದ ಕೆ.ಆರ್. ವೃತ್ತದಲ್ಲಿ ಶನಿವಾರ ಬೆಳಗ್ಗೆ ಎರಡು ಬಿಎಂಟಿಸಿ...

ಕೇರಳ ಕಾಂಗ್ರೆಸ್‌ನಲ್ಲಿ ಮತ್ತೆ ಬಣ ರಾಜಕೀಯ ಕಾವು: ಸತೀಶನ್ ಆಡಳಿತ ಶೈಲಿಗೆ ವೇಣುಗೋಪಾಲ್ ಬಣ ಅಸಮಾಧಾನ

ತಿರುವನಂತಪುರಂ: ಕೇರಳದ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಮತ್ತೆ ಬಣ ರಾಜಕೀಯ ತೀವ್ರಗೊಂಡಿದ್ದು, ಮುಖ್ಯಮಂತ್ರಿ...

ಫಿಫಾ ವಿಶ್ವಕಪ್: ‘ತಿದ್ದಿಕೊಳ್ಳಬೇಕಾದ ಅನೇಕ ತಪ್ಪುಗಳಿವೆ’ – ಕೇಪ್ ವರ್ಡೆ ವಿರುದ್ಧದ ಗೆಲುವಿನ ಬಳಿಕ ಮೆಸ್ಸಿ

ಮಿಯಾಮಿ: 2026ರ ಫಿಫಾ ವಿಶ್ವಕಪ್‌ನ 16ರ ಸುತ್ತಿಗೆ ಅರ್ಜೆಂಟೀನಾ ಪ್ರವೇಶಿಸಿದರೂ, ತಂಡದ...

Copying is disabled on Udupi Digital News.