Wednesday, October 21, 2026

ಅ. 25 ರಂದು ಕೆಮ್ಮಣ್ಣುವಿನಲ್ಲಿ ನವೀಕೃತ ಲಿಟಲ್ ಫ್ಲವರ್ ಸಭಾಭವನ ಉದ್ಘಾಟನೆ

ಉಡುಪಿ: ಕೆಮ್ಮಣ್ಣು ಸಂತ ತೆರೆಸಾ ಚರ್ಚಿನ ಆಡಳಿತಕ್ಕೆ ಒಳಪಟ್ಟ ನವೀಕೃತ ಲಿಟಲ್ ಫ್ಲವರ್ ಸಭಾಭವನ ಉದ್ಘಾಟನೆ ಮತ್ತು ಆಶೀರ್ವಚನ ಕಾರ್ಯಕ್ರಮ ಅಕ್ಟೋಬರ್ 25 ರಂದು ಭಾನುವಾರ 9.30 ಕ್ಕೆ ಜರುಗಲಿದೆ. ಬೆಳಿಗ್ಗೆ ಸಭಾಭವನ ಉದ್ಘಾಟನೆಯೊಂದಿಗೆ ಪವಿತ್ರ ಕೃತಜ್ಞಾತ ಬಲಿಪೂಜೆ ನೆರವೇರಲಿದೆ. ನವೀಕೃತ ಸಭಾಂಗಣವನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಆಶೀರ್ವಚನ ನೆರವೇರಿಸಲಿದ್ದಾರೆ.

ಪವಿತ್ರ ಬಲಿಫೂಜೆಯ ಬಳಿಕ ಕಿರು ಸಭಾ ಕಾರ್ಯಕ್ರಮ ನಡೆಯಲಿದ್ದು ಸಭಾಭವನ ದ ನವೀಕರಣಕ್ಕೆ ಸಹಕರಿಸಿದವರನ್ನು ಗುರುತಿಸಿ ಗೌರವಿಸಲಾಗುವುದು.


ನವೀಕೃತ ಸಭಾಭವನ ದಲ್ಲಿ 600 ಮಂದಿಯ ಆಸನ ವ್ಯವಸ್ಥೆ ಇದ್ದು 200 ಮಂದಿಯ ಪ್ರತ್ಯೇಕವಾದ ಆಸನದ ಮಿನಿ ಸಭಾಂಗಣವೂ ಹೊಂದಿದೆ. ಅಲ್ಲದೆ 300 ಮಂದಿ ಕುಳಿತುಕೊಳ್ಳಬಹುದಾದ ಡೈನಿಂಗ್ ಹಾಲ್ ಕೂಡ ಹೊಂದಿದೆ ಎಂದು ಚರ್ಚಿನ ಧರ್ಮಗುರುಗಳಾದ ವಂ|ಫಿಲಿಪ್ ನೆರಿ ಆರಾನ್ಹಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಭಾಭವನದ ಎದುರು ವಿಸ್ತಾರವಾದ ಪಾರ್ಕಿಂಗ್ ವ್ಯವಸ್ಥೆ ಕೂಡ ಇದೆ

More like this
Related

ಸಮಾಜದಲ್ಲಿ ಶಾಂತಿ ನೆಮ್ಮದಿಗಾಗಿ ಶ್ರಮಿಸುವ ಪೊಲೀಸರ ಕಾರ್ಯ ಶ್ಲಾಘನೀಯ – ಕಿರಣ್ ಎಸ್ ಗಂಗಣ್ಣನವರ್

ಉಡುಪಿ: ಸಮಾಜದಲ್ಲಿ ಶಾಂತಿ ನೆಮ್ಮದಿಗಾಗಿ ಕಾರ್ಯ ನಿರ್ವಹಿಸುವ ಪೊಲೀಸ್ ಇಲಾಖೆಯ ಕಾರ್ಯ...

ಸೆಂಗೋಲ್ ಶಿಲ್ಪಿ ವುಮ್ಮಿಡಿ ಎಥಿರಾಜ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ; ದೇಶದ ಪರಂಪರೆಗೆ ಅವರ ಕೊಡುಗೆ ಸ್ಮರಣೆ

ಚೆನ್ನೈ: ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ 1947ರಲ್ಲಿ ಹಸ್ತಾಂತರಿಸಲಾಗಿದ್ದ...

ಟೈಗರ್ ಶ್ರಾಫ್‌ಗೆ ಬೆದರಿಕೆ ಆಡಿಯೊ ಪರಿಶೀಲನೆ: ಬಿಷ್ಣೋಯ್ ಗ್ಯಾಂಗ್ ಧ್ವನಿ ಬ್ಯಾಂಕ್‌ಗಳ ಮೊರೆ ಹೋದ ಪೊಲೀಸರು

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್‌ಗೆ ಬೆದರಿಕೆ ಹಾಕಲಾಗಿದೆ ಎನ್ನಲಾದ ಆಡಿಯೊ...

CJP ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ತಮಿಳುನಾಡು ಮಾಜಿ ಬಿಜೆಪಿ ನಾಯಕ : ಕೆ. ಅಣ್ಣಾಮಲೈ

ಚೆನ್ನೈ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ...

Copying is disabled on Udupi Digital News.