Wednesday, June 17, 2026

ಕೆ. ಜಯಪ್ರಕಾಶ್ ಹೆಗ್ಡೆಯವರು ಸಚಿವರಾಗಲಿ :  ಕೆ. ವಿಕಾಸ್ ಹೆಗ್ಡೆ

ಕುಂದಾಪುರ:  ಚುನಾವಣೆಯಲ್ಲಿ ಸೋಲಲಿ ಗೆಲ್ಲಲಿ ನಿರಂತರ ಜನಸಾಮಾನ್ಯರ ಜೊತೆ ಬೆರೆತು ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಶ್ರಮಿಸುತ್ತಿರುವ ಮಾಜಿ ಸಚಿವರಾದ ಕೆ. ಜಯಪ್ರಕಾಶ್ ಹೆಗ್ಡೆಯರಿಗೆ ಈ ಭಾರಿ ಸಚಿವ ಸ್ಥಾನದಲ್ಲಿ ಅವಕಾಶ ನೀಡಿ ಅವರನ್ನು ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ   ಆಗ್ರಹಿಸಿದ್ದಾರೆ.

ಕಾರ್ಯಕರ್ತರುಗಳ ನಂಬುಗೆಯ ನಾಯಕರು, ಸದಾ ಅಭಿವೃದ್ಧಿಯ ಯೋಚನೆಯ ಕನಸುಗಾರರು ಆ ಯೋಚನೆಯನ್ನು ಯೋಜನೆಯಾಗಿ ಕಾರ್ಯರೂಪಕ್ಕೆ ತರುವ ಭಗೀರಥರೂ, ಹಗಲು ರಾತ್ರಿ ಎನ್ನದೇ ಸದಾ ಜನಸಾಮಾನ್ಯರ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುವ ಮಾತ್ರವಲ್ಲಾ ಅದಕ್ಕೊಂದು ಪರಿಹಾರ ನೀಡುವ ಜನನಾಯಕರೂ, ಉಡುಪಿ ಜಿಲ್ಲೆಯ ನಿರ್ಮಾಣಕಾರರೂ, ಕರಾವಳಿ ಅಭಿವೃದ್ಧಿಯ ಹರಿಕಾರರು, ಅಧಿಕಾರ ಇರಲಿ ಇಲ್ಲದೆ ಇರಲಿ ಸದಾ ಜನಸಾಮಾನ್ಯರ ನೋವು, ನಲಿವುಗಳಿಗೆ ಸದಾ ಸ್ಪಂದಿಸುವ, ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ, ಸಮರ್ಪಕವಾಗಿ, ಜನಪರವಾಗಿ ನಿರ್ವಹಿಸುವ ಮಾಜಿ ಸಚಿವರು, ಮಾಜಿ ಸಂಸದರೂ ಆದ ಕೆ. ಜಯಪ್ರಕಾಶ್ ಹೆಗ್ಡೆಯವರಿಗೆ ಈ ಭಾರಿ ಮಂತ್ರಿ ಮಂಡಲದಲ್ಲಿ ಅವಕಾಶ ನೀಡಿ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕೆಂದು ಅವರು ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.

More like this
Related

ಕೋಟ : ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಐರೋಡಿಯ ಯುತಿಗೆ 10.83 ಲಕ್ಷ ರೂ. ವಂಚನೆ: ಪ್ರಕರಣ ದಾಖಲು

ಕೋಟ : ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಯೊಬ್ಬಳಿಗೆ ಲಕ್ಷಾಂತರ ರೂ....

ಒಪ್ಪಿಗೆಯಿಲ್ಲದ ಖಾಸಗಿ ವೀಡಿಯೊ-ಫೋಟೊ ಪ್ರಸಾರಕ್ಕೆ ಕಡಿವಾಣ: ಪೊಲೀಸ್ ಇಲಾಖೆ ಹೊಸ ಮಾರ್ಗಸೂಚಿ

ಬೆಂಗಳೂರು: ಅನುಮತಿಯಿಲ್ಲದೇ ಯಾವುದೇ ವ್ಯಕ್ತಿಯ ಖಾಸಗಿ ವಿಡಿಯೋ ಮತ್ತು ಫೋಟೊ ಪ್ರಕಟಿಸುವುದು...

ಗುಜರಾತ್: ನಿಲ್ಲಿಸಿದ್ದ ಲಾರಿಗೆ ಬಸ್ ಡಿಕ್ಕಿ; 6 ಮಂದಿ ಸಾವು, 26 ಮಂದಿಗೆ ಗಾಯ

ವಡೋದರಾ: ರಾಜಸ್ಥಾನದಿಂದ ಗುಜರಾತ್‌ನ ಸೂರತ್‌ಗೆ ತೆರಳುತ್ತಿದ್ದ ಐಷಾರಾಮಿ ಬಸ್‌ವೊಂದು ರಸ್ತೆ ಬದಿಯಲ್ಲಿ...

SIR ಪ್ರಕ್ರಿಯೆಯಲ್ಲಿ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಮನೆ ಮನೆಗೆ ತೆರಳಿ ಜಾಗೃತಿ – ಜೆಪಿ ಹೆಗ್ಡೆ

ಉಡುಪಿ: SIR ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು...

Copying is disabled on Udupi Digital News.