Thursday, May 21, 2026

ಕುಂದಾಪುರ: ಮೇ.23 ಕ್ಕೆ ಕೋಟೇಶ್ವರದಲ್ಲಿ ‘ ಒಡ್ಡೋಲಗ ‘ ಕಾರ್ಯಕ್ರಮ

ಕುಂದಾಪುರ : ದ್ಯುತಿ ಪರ್ವ ಯಕ್ಷ ಟ್ರಸ್ಟ್ ವತಿಯಿಂದ ಮೇ.23 ರ ಸಂಜೆ 6 ರಿಂದ ಕೋಟೇಶ್ವರದ ಸಹನಾ ಕನ್ವೆನ್ಷನ್ ಹಾಲ್‌ನಲ್ಲಿ ಸ್ಪಂದನೆ – ಸಹಕಾರ- ಸಹಾಯ ಉದ್ದೇಶದಿಂದ ‘ ಒಡ್ಡೋಲಗ ‘ ಕಾರ್ಯಕ್ರಮ ನಡೆಯಲಿದೆ ಎಂದು ದ್ಯುತಿ ಪರ್ವ ಯಕ್ಷ ಟ್ರಸ್ಟ್ ಅಧ್ಯಕ್ಷ ರಂಜಿತ್ ಕುಮಾರ್ ಶೆಟ್ಟಿ ವಕ್ವಾಡಿ ತಿಳಿಸಿದ್ದಾರೆ

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಂಜೆ 5 ರಿಂದ ಭಜನೆ, ಕೀರ್ತನೆ, ದೇವರ ಸ್ಮರಣೆ, ಸಂಜೆ 6 ಕ್ಕೆ ಹವ್ಯಾಸಿ ಕಲಾವಿದರಿಂದ ಸುರನದಿಸುತ ಯಕ್ಷಗಾನ ಪ್ರದರ್ಶನ ಹಾಗೂ ಸಂಜೆ 8 ರಿಂದ ಸಭಾ ಕಾರ್ಯಕ್ರಮ ಆರಂಭಗೊಳ್ಳಲಿದೆ. ಹಟ್ಟಿಯಂಗಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಧರ್ಮದರ್ಶಿ ಹೆಚ್.ಬಾಲಚಂದ್ರ ಭಟ್ ಉದ್ಘಾಟಿಸಲಿದ್ದು, ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ, ಕರ್ನಾಟಕ ಬ್ಯಾಂಕ್ ಪ್ರಾದೇಶಿಕ ಪ್ರಬಂಧಕ ರಮೇಶ್ ವೈದ್ಯ, ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ 25 ಸಾಧಕರಿಗೆ ಯಕ್ಷ ಗೌರವ ನೀಡಿ ಗೌರವಿಸಲಾಗುವುದು. ಕಲಾ ಪೋಷಕರಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಮಂಜುನಾಥ ಭಟ್, ಪ್ರಕಾಶ್ ಶೆಟ್ಟಿ ದಾಂಡೇಲಿ, ಡಾ.ಆದರ್ಶ ಹೆಬ್ಬಾರ್, ಡಾ.ಜಗದೀಶ್ ಶೆಟ್ಟಿ ಅವರಿಗೆ ಯಕ್ಷ ಗೌರವ. ಕಲಾಕ್ಷೇತ್ರದ ಬಿ.ಕಿಶೋರ ಕುಮಾರ್, ಯಕ್ಷಗಾನ ಪೋಷಕರಾದ ಮಲ್ಯಾಡಿ ಪ್ರಭಾಕರ ಶೆಟ್ಟಿ ದಾವಣಗೆರೆ, ಮಹೇಶ ಶೆಟ್ಟಿ ಧಾರವಾಡ, ರಮಾನಂದ ಶೆಟ್ಟಿ ಸೂಡ, ಜಯಕರ ಶೆಟ್ಟಿ ಕೊಂಡಳ್ಳಿ, ಸುರೇಶ್ ಬರ್ಕಳಮಕ್ಕಿ, ಡಾ.ನಿತ್ಯಾನಂದ ಶೆಟ್ಟಿ ಅಂಪಾರು, ವಿಜಯ ಕುಮಾರ್ ಶೆಟ್ಟಿ ಯಳಂತೂರು, ರಾಘವೇಂದ್ರ ಭಟ್ ವಾಜಗದ್ದೆ, ಗಜೇಂದ್ರ ಆಚಾರ್ಯ ಕೋಣಿ, ಪ್ರಶಾಂತ್ ಆಚಾರ್ಯ ಅಂಕೋಲ ಅವರಿಗೆ ಸಾಧಕ ಸಂಘಟನಾ ಗೌರವ ನಡೆಯಲಿದೆ.


ಕಲಾವಿದರಾದ ಜಮದಗ್ನಿ ಶೀನ ಮೊಗವೀರ, ಗುಡ್ರಿ ಗಣೇಶ ಭಟ್, ಮಹಮ್ಮದ್ ಗೌಸ್ ಕಾವ್ರಾಡಿ, ಶ್ರೀಧರ ಭಟ್ ಕಾಸರಕೋಡು, ನರಸಿಂಹ ಗಾಂವ್ಕರ್, ಎನ್.ಜಿ.ಹೆಗಡೆ ಯಲ್ಲಾಪುರ, ಪಂಜು ಪೂಜಾರಿ ಬಗ್ವಾಡಿ, ಪ್ರಸನ್ನ ಶೆಟ್ಟಿಗಾರ್, ರಾಕೇಶ ಮಲ್ಯ ಹಳ್ಳಾಡಿ, ದಿ.ರಂಜಿತ್ ದೇವಾಡಿಗ ಬನ್ನಾಡಿ ಅವರ ಮನೆಯವರಿಗೆ ಯಕ್ಷ ಪುರಸ್ಕಾರದಡಿ ನೆರವು ನೀಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ರಾತ್ರಿ 9 ರಿಂದ ಬಡಗುತಿಟ್ಟಿನ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು

ಸುದ್ದಿ ಗೋಷ್ಠಿಯಲ್ಲಿ ದ್ಯುತಿ ಪರ್ವ ಯಕ್ಷ ಟ್ರಸ್ಟ್ ನಿರ್ದೇಶಕ ರವಿರಾಜ ಶೆಟ್ಟಿ, ಸದಸ್ಯರಾದ ಉದಯ ಕುಮಾರ್ ಶೆಟ್ಟಿ ಪಡುಕೆರೆ, ಕಂಡ್ಲೂರು ಸುಧಾಕರ ಆಚಾರ್ಯ ಇದ್ದರು.

More like this
Related

ಅತಿ ವೇಗಕ್ಕೆ ಕಡಿವಾಣ ಹಾಕಲು ಜಿಲ್ಲೆಯಲ್ಲಿ ಸ್ಪೀಡ್ ರಾಡಾರ್ ಕ್ಯಾಮೆರಾ ಕಾರ್ಯಾರಂಭ

ಉಡುಪಿ: ಜಿಲ್ಲೆಯಲ್ಲಿ ವಾಹನಗಳನ್ನು ಅತೀ ವೇಗವಾಗಿ ಚಾಲನೆ ಮಾಡಿದರೆ ಜೋಕೆ! ಇನ್ನುಂದೆ...

ಧರೆ ಕುಸಿದು ಮಣ್ಣಿನಡಿ ಸಿಲುಕಿದ ವ್ಯಕ್ತಿ ನಿಧನ

ಮಂಗಳೂರು : ಕುಂಟಿಕಾನ ಬಳಿಯ ಲೋಹಿತ್ ನಗರದಲ್ಲಿ ಧರೆ ಕುಸಿದು ಮಣ್ಣಿನಡಿ...

ದೇಶದಲ್ಲಿ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಕೊರತೆ ಇಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

ನವದೆಹಲಿ: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಎಲ್‌ಪಿಜಿ ಪೂರೈಕೆಯಲ್ಲಿ ಯಾವುದೇ ಕೊರತೆ...

ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ; ತನಿಖೆ ಆರಂಭ

ಬೆಂಗಳೂರು: ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಾ ಭಾಗಕಾಲಿಕವಾಗಿ ಕೆಲಸ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳ ಮೇಲೆ...

Copying is disabled on Udupi Digital News.