Tuesday, July 28, 2026

ವಾರಾಹಿ ಕಾಲುವೆಯಲ್ಲಿ ನೀರು ಹರಿಸಲು ಕುಂದಾಪುರ ತಾಲ್ಲೂಕು ರೈತ ಸಂಘ ಆಗ್ರಹ


ಕುಂದಾಪುರ: ಈ ಭಾರಿ ವಾಡಿಕೆಗಿಂತ ಮಳೆ ಹೆಚ್ಚಾಗಿ ರೈತರಿಗೆ ಹರುಷವನ್ನೂ ತಂದರೂ ಮಳೆಗಾಲ ಮುಗಿದು ಹಲವು ತಿಂಗಳು ಕಳೆದರೂ ವಾರಾಹಿ ನೀರಾವರಿ ಯೋಜನೆಯವರು ಇಲ್ಲಿಯ ತನಕ ವರಾಹಿ ನೀರಾವರಿ ಕಾಲುವೆಗಳಲ್ಲಿ ಇಲ್ಲಿಯ ತನಕ ನೀರು ಹಾಯಿಸದೆ ಇರುವುದು ರೈತ ವಿರೋಧಿ ನಿಲುವಾಗಿದೆ ಎಂದು ಕುಂದಾಪುರ ತಾಲ್ಲೂಕು ರೈತ ಸಂಘದ ಮುಖಂಡ ಕೆ. ವಿಕಾಸ್ ಹೆಗ್ಡೆ ಹೇಳಿದ್ದಾರೆ
ಪ್ರತಿ ವರ್ಷ ಕಾಲುವೆಯಲ್ಲಿ ನೀರು ಹರಿಸಬೇಕಾದ ಜವಾಬ್ದಾರಿ ಹೊಂದಿರುವ ಇಲಾಖೆಯವರು ಕಾಲುವೆ ದುರಸ್ಥಿ ಕಾರ್ಯವನ್ನು ಮಳೆಗಾಲ ಮುಗಿದ ಕೂಡಲೇ ಮಾಡುವುದನ್ನು ಬಿಟ್ಟು ಅನವಶ್ಯಕ ಕಾಲಹರಣ ಮಾಡಿ ಈಗ ರೈತರು ನೀರಿಗಾಗಿ ಬೇಡಿಕೆ ಇಡುವಾಗ ವರಾಹಿ ನೀರಾವರಿ ಇಲಾಖೆಯವರು ಕಾಲುವೆಯಲ್ಲಿ ನೀರು ಹರಿಸಲು ಇಲ್ಲಸಲ್ಲದ ಸಬೂಬು ಹೇಳುವುದು ಅವರ ಬೇಜವಾಬ್ದಾರಿ ತನವಾಗಿದೆ. ವರಾಹಿ ನೀರಾವರಿ ಇಲಾಖೆಯವರು ಕಾಗಕ್ಕೆ ಗುಬ್ಬಕ್ಕ ಕತೆ ಹೇಳುವುದನ್ನು ಬಿಟ್ಟು ಕೂಡಲೇ ರೈತರ ಹೊಲಗಳಿಗೆ ನೀರು ಹಾಯಿಸಬೇಕು ಎಂದು ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.

More like this
Related

ದೇಶದಲ್ಲಿ ಚಳುವಳಿ ಹೆಸರಿನಲ್ಲಿ ಅರಾಜಕತೆ ಸೃಷ್ಟಿಸುವವರ ವಿರುದ್ದ ಜಿಲ್ಲಾ ಬಿಜೆಪಿ ಪ್ರತಿಭಟನೆ

ಉಡುಪಿ: ಚಳುವಳಿಯ ಹೆಸರಿನಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕೆಲವರು ಪ್ರಯತ್ನಿಸುತ್ತಿದ್ದು, ಕಾಕ್ರೋಚ್...

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ತಪ್ಪಲ್ಲವೇ? ಬಿಜೆಪಿಗರು ಉತ್ತರಿಸಲಿ: ಕೋಳ್ಕೆರೆ ವಿಕಾಸ್ ಹೆಗ್ಡೆ

ಉಡುಪಿ: ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಿಂದ ದೇಶದ ಲಕ್ಷಾಂತರ...

ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರತಿಭಟನೆ: ವಿದ್ಯಾರ್ಥಿಗಳ ವಿರುದ್ಧ ಬಲವಂತದ ಕ್ರಮ ಬೇಡ – ಸುಪ್ರೀಂ ಕೋರ್ಟ್ ಸೂಚನೆ

ನವದೆಹಲಿ: ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ದೇಶಾದ್ಯಂತ ನಡೆದ...

ರಾಜ್ಯದ ಬಾಕಿ ಯೋಜನೆಗಳ ನಿರ್ವಹಣೆಗೆ ದಿಲ್ಲಿಯ ಕರ್ನಾಟಕ ಭವನದಲ್ಲಿ ಹೊಸ ವ್ಯವಸ್ಥೆ ಜಾರಿ : ಸಿಎಂ ಡಿ.ಕೆ.ಶಿವಕುಮಾರ್

ಹೊಸದಿಲ್ಲಿ : ರಾಜ್ಯದ ಮೇಕೆದಾಟು ಅಣೆಕಟ್ಟು ಸೇರಿದಂತೆ ಬಾಕಿ ಯೋಜನೆಗಳ ನಿರ್ವಹಣೆಗೆ...

Copying is disabled on Udupi Digital News.