Monday, June 29, 2026

ದೇರಳಕಟ್ಟೆಯಲ್ಲಿ ಎಂಸಿಸಿ ಬ್ಯಾಂಕಿನ 22ನೇ ಶಾಖೆ, ಎಟಿಎಂ ಉದ್ಘಾಟನೆ

ಮಂಗಳೂರು : ಗ್ರಾಹಕರ ಸರ್ವತೋಮುಖ ಬೆಳವಣಿಗೆ, ಸಮುದಾಯದ ಅಭಿವೃದ್ಧಿ ಎಂಸಿಸಿ ಬ್ಯಾಂಕ್ ನ ಮುಖ್ಯ ಗುರಿ ಯಾಗಿದೆ. ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಂಸಿಸಿ ಬ್ಯಾಂಕ್ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ತಿಳಿಸಿದ್ದಾರೆ.

ಅವರು ದೇರಳ ಕಟ್ಟೆ ಫಾದರ್ ಮುಲ್ಲರ್ ಕಟ್ಟಡ ಸಂಕೀರ್ಣದಲ್ಲಿ ರವಿವಾರ ಎಂಸಿಸಿ ಬ್ಯಾಂಕ್ ನ 22 ಶಾಖೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಎಂಸಿಸಿ ಬ್ಯಾಂಕ್ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಾ ಬಂದಿದೆ. ಬ್ಯಾಂಕ್ ಎರಡನೇ ಶತಕದತ್ತ ಸಾಗುತ್ತಿದೆ. ಆಡಳಿತ ಮಂಡಳಿ ಕೊಟ್ಟ ಭರವಸೆ ಈಡೇರಿಸಿದೆ. 114 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿರುವ ಎಂಸಿಸಿ ಬ್ಯಾಂಕ್ ಲಿಮಿಟೆಡ್, 31 ಮಾರ್ಚ್ 2026ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ 22.89% ಬೆಳವಣಿಗೆಯೊಂದಿಗೆ 1535 ಕೋಟಿ ರೂ. ಮೈಲಿಗಲ್ಲನ್ನು ತಲುಪಿದೆ. ಬ್ಯಾಂಕಿನ ನಿವ್ವಳ ಮೌಲ್ಯ 83.76 ಕೋಟಿ ರೂ.ನಿಂದ 91.80 ಕೋಟಿ ರೂ.ಗೆ ಏರಿಕೆಯಾಗಿದೆ. NRI ಗ್ರಾಹಕರ ಬೆಂಬಲ ಬ್ಯಾಂಕಿನ ಬೆಳವಣಿಗೆಗೆ ಪ್ರಮುಖ ಶಕ್ತಿಯಾಗಿದೆ. ಪ್ರಸಕ್ತ ಆಡಳಿತ ಮಂಡಳಿಯ ನೇತೃತ್ವದಲ್ಲಿ ಎಂಸಿಸಿ ಬ್ಯಾಂಕಿನ ಕಾರ್ಯವ್ಯಾಪ್ತಿ ಸಂಪೂರ್ಣ ಕರ್ನಾಟಕ ರಾಜ್ಯಕ್ಕೆ ವಿಸ್ತರಿಸಿ ಕಾರ್ಯ ನಿರ್ವಹಿಸುತ್ತಿದೆ. ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಸಮಾನವಾಗಿ ವಿವಿಧ ಹಣಕಾಸು ಉತ್ಪನ್ನಗಳು ಹಾಗೂ ಸೇವೆಗಳನ್ನು ಒದಗಿಸುತ್ತಿದೆ ಎಂದರು.

2018 ಆಡಳಿತ ವಹಿಸಿಕೊಂಡ ನಂತರ ಬ್ಯಾಂಕ್ ಗಮನಾರ್ಹ ಬೆಳವಣಿಗೆ ಯನ್ನು ಕಂಡಿದೆ. ದಕ್ಷ ಆಡಳಿತ ಮಂಡಳಿ, ಸಮರ್ಪಿತ ಸಿಬ್ಬಂದಿ ಮತ್ತು ಸಮರ್ಥ ಕಾರ್ಯತಂತ್ರದ ಯೋಜನೆ ಯಿಂದ ಬ್ಯಾಂಕ್ ಕಾರ್ಯನಿರ್ವ ಹಿಸುತ್ತಿದೆ ಎಂದು ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ತಿಳಿಸಿದರು.

ಪಾನೀರ್ ಅವರ್ ಲೇಡಿ ಆಫ್ ಮರ್ಸಿ ಚರ್ಚಿನ ಧರ್ಮಗುರು ಫಾ.ವಿಕ್ಟರ್ ಡಿಮೆಲ್ಲೊ ಉದ್ಘಾಟನೆ ನೆರವೇರಿಸಿ ಆಶೀರ್ವದಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಹಕರು ದೇವರು, ಗ್ರಾಹಕರ ಬಟ್ಟೆ, ಮುಖ ನೋಡದೆ ಎಲ್ಲರಿಗೂ ಉತ್ತಮ ಸೇವೆ ನೀಡಿ, ಅವಿದ್ಯಾವಂತರಿಗೆ ಬ್ಯಾಂಕಿಗೆ ಬಂದಾಗ ಸಹಾಯ ನೀಡುವಂತಾಗಲಿ. ಎಂಸಿಸಿ ಬ್ಯಾಂಕ್ ಶಾಖೆಯ ಆರಂಭ ಮಹತ್ವದ ಮೈಲಿಗಲ್ಲು ಬ್ಯಾಂಕ್ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಲಿ ಮಾದರಿ ಶಾಖೆಯಾಗಿ ಬೆಳೆಯಲಿ ಎಂದು ಹಾರೈಸಿದರು.

ಆರ್ಸುಲಾಯ್ನ್ ಫ್ರಾನ್ಸಿಸ್ಕನ್ ಸಭೆಯ ಸುಪೀರಿಯರ್ ಜನರಲ್ ಸಿಸ್ಟರ್ ಮಿಲ್ಲಿ ಫೆರ್ನಾಂಡಿಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ, ಎಂಸಿಸಿ ಬ್ಯಾಂಕ್ 114 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿರುವ ಎಂಸಿಸಿ ಬ್ಯಾಂಕ್ ಲಿಮಿಟೆಡ್ ಎಲ್ಲ ಪ್ರಮುಖ ವ್ಯವಹಾರ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಬ್ಯಾಂಕ್ ಹಣದ ವ್ಯವಹಾರಕ್ಕೆ ಸೀಮಿತವಾಗದೆ ಗ್ರಾಹಕರ ಸಮಗ್ರ ಅಭಿವೃದ್ಧಿ ಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

ಅತಿಥಿಯಾಗಿ ಭಾಗವಹಿಸಿದ ಫಾದರ್ ಮುಲ್ಲರ್ ಹೋಮಿಯೋಪತಿ ಕಾಲೇಜು ಆಡಳಿತಾಧಿಕಾರಿ ಫಾ.ನಿಲೇಶ್ ಕ್ರಾಸ್ತಾ ಮಾತನಾಡಿ, ಉತ್ತಮ ಪರಿಸರದಲ್ಲಿ ಬ್ಯಾಂಕ್ ಶಾಖೆ ಆರಂಭವಾದ ಕಾರಣ, ಜನರ ಆರ್ಥಿಕ ಅಭಿವೃದ್ಧಿ ಗೆ ಸಹಕಾರ ನೀಡಲು ಅನುಕೂಲವಾಗಿದೆ ಎಂದರು.

ಕೋಟೆಕಾರ್ ಪಟ್ಟಣ ಪಂಚಾಯತ್ ಅಧ್ಯಕ್ಷೆ ದಿವ್ಯಾ ಸತೀಶ್ ಶೆಟ್ಟಿ, ಬೆಳ್ಮ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಿ.ಎಂ. ಸತ್ತಾರ್ ಅತಿಥಿಗಳಾಗಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ದೇರಳಕಟ್ಟೆಯಲ್ಲಿ ಬ್ಯಾಂಕಿನ 16ನೇ ಎಟಿಎಂ ಕೂಡ ಉದ್ಘಾಟನೆಗೊಂಡಿತು.

ಸಮಾರಂಭದಲ್ಲಿ ಎಂಸಿಸಿ ಬ್ಯಾಂಕಿನ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ, ನಿರ್ದೇಶಕರಾದ ಆ್ಯಂಡ್ರೂ ಡಿಸೋಜ, ಡಾ. ಜೆರಾಲ್ಡ್ ಪಿಂಟೊ, ಅನಿಲ್ ಪತ್ರಾವೊ, ಜೆ.ಪಿ.ರೊಡ್ರಿಗಸ್, ಡೇವಿಡ್ ಡಿಸೋಜ, ಎಲ್ರಾಯ್ ಕಿರಣ್ ಕ್ರಾಸ್ಟೊ, ಹೆರಾಲ್ಡ್ ಮೊಂತೇರೊ, ರೋಶನ್ ಡಿಸೋಜ, ಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ಸಿ.ಜಿ.ಪಿಂಟೊ, ಸುಶಾಂತ್ ಸಲ್ಡಾನ, ಐರಿನ್ ರೆಬೆಲ್ಲೊ, ಡಾ.ಫ್ರೀಡಾ ಡಿಸೋಜ, ಆಲ್ವಿನ್ ಮೊಂತೇರೊ, ಫೆಲಿಕ್ಸ್ ಡಿಕ್ರೂಜ್, ಶರ್ಮಿಳಾ ಮಿನೇಜಸ್ ಹಾಗೂ ಪ್ರಧಾನ ವ್ಯವಸ್ಥಾಪಕ ಸುನೀಲ್ ಮಿನೇಜಸ್ ಉಪಸ್ಥಿತರಿದ್ದರು.

ನಿರ್ದೇಶಕ ರೋಶನ್ ಡಿಸೋಜ ಸ್ವಾಗತಿಸಿದರು. ಜುಲೆಟ್ ಡಿಸೋಜ ವಂದಿಸಿದರು. ಶೈನಿ ವಿಭಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು

ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರದ ಸಮಾಜ ಸೇವಕರಾದ ಫ್ರಾನ್ಸಿಸ್ ಕುಟಿನ್ಹಾ, ಅಲ್ವಿನ್ ಜೊರಾಮ್ ಡಿಸೋಜ, ಸಿ.ಎ.ಮ್ಯಾಕ್ಸಿಮ್ ಫೆರ್ನಾಂಡಿಸ್, ಉಗ್ಗಪ್ಪ ಪೂಜಾರಿ, ಶಫಿ ಬಬ್ಬುಕಟ್ಟೆ ಅವರನ್ನು ಗೌರವಿಸಲಾಯಿತು. ಪ್ರತಿಭಾವಂತ ಎಸೆಸೆಲ್ಸಿ, ಪಿಯುಸಿ ವಿದ್ಯಾರ್ಥಿ ಗಳನ್ನು ಗೌರವಿಸಲಾಯಿತು. ವಿವಿಧ ಸಂಸ್ಥೆ ಗಳಿಗೆ ಬ್ಯಾಂಕ್ ವತಿಯಿಂದ ಆರ್ಥಿಕ ನೆರವು ವಿತರಿಸಲಾಯಿತು.

More like this
Related

ಸರಕು ಸಾಗಾಣಿಕೆ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಕೆ ಕಡ್ಡಾಯ : ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಉಡುಪಿ: ಸಾರ್ವಜನಿಕ ವಾಹನಗಳು ಸುರಕ್ಷಿತ ಹಾಗೂ ಸುಗಮವಾಗಿ ರಸ್ತೆಗಳಲ್ಲಿ ಸಂಚರಿಸಲು ಅಗತ್ಯವಿರುವ...

ಜುಲೈ 6 ರ ವರೆಗೆ ಕರಾವಳಿ ಭಾಗದಲ್ಲಿ ಆರೆಂಜ್ ಅಲರ್ಟ್ ಘೋಷಣೆ; ಭಾರೀ ಗಾಳಿ ಮಳೆ ಸಾಧ್ಯತೆ

ಉಡುಪಿ: ಭಾರತೀಯ ಹವಾಮಾನ ಇಲಾಖೆ / ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ...

ಗೆಳತಿಯನ್ನು ಊಟಕ್ಕೆ ಕರೆದು ಬರ್ಬರವಾಗಿ ಕೊಲೆ ಮಾಡಿದ ಪ್ರಿಯಕರ!

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಯುವಕನೊಬ್ಬ ತನ್ನ 23 ವರ್ಷದ ಗೆಳತಿಯನ್ನು ಊಟಕ್ಕೆ...

ವಿಜಯ ವೀರ ಸಂಘದಿಂದ ಉಚಿತ ರೇಬಿಸ್ ಲಸಿಕಾ ಶಿಬಿರ; 100ಕ್ಕೂ ಅಧಿಕ ಪ್ರಾಣಿ-ಪಕ್ಷಿಗಳಿಗೆ ಲಸಿಕೆ

ಉಡುಪಿ: ವಿಜಯ ವೀರ ಸಂಘ, ಚಿಟ್ಪಾಡಿ-ಬೈಲೂರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ...

Copying is disabled on Udupi Digital News.