Friday, October 2, 2026

ಅ. 2: ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ 125 ನೇ ವರ್ಷದ ಆಚರಣೆಗೆ ಚಾಲನೆ

ಉಡುಪಿ: ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ತಾಂಗದಗಡಿ ಪ್ರಸಕ್ತ ವರ್ಷ 125ನೇ ವರ್ಷದ ಐತಿಹಾಸಿಕ ಸಂಭ್ರಮಾಚರಣೆಗೆ ಕರಸೇವೆಯ ಮೂಲಕಅಕ್ಟೋಬರ್ 2 ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ನೀಡಲಾಗುವುದು

ಶಾಲೆಯ 125 ನೇ ವರ್ಷದ ಆಚರಣೆ ಸಂದರ್ಭದಲ್ಲಿ ಹಲವು ರಚನಾತ್ಮಕ ಹಾಗೂ ಶಾಶ್ವತ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಈ ಯೋಜನೆಗಳಲ್ಲಿ ಪ್ರಮುಖವಾದದ್ದು ನಮ್ಮ ಶಾಲೆಯ ಹಳೆಯ ಕಟ್ಟಡದ ದುರಸ್ತಿ ಹಾಗೂ ನವೀಕರಣ ಕಾರ್ಯ. ಹಲವು ವರ್ಷಗಳ ಇತಿಹಾಸವನ್ನು ತನ್ನೊಳಗೆ ಉಳಿಸಿಕೊಂಡಿರುವ ಈ ಕಟ್ಟಡವನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗಳಿಗೂ ಸುರಕ್ಷಿತವಾಗಿ ಉಳಿಸುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಅಕ್ಟೊಬರ್ 2 ಶುಕ್ರವಾರದಂದು ಶಾಲಾ ಕಟ್ಟಡ ನವೀಕರಣ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಕರಸೇವಾ ಕಾರ್ಯಕ್ರಮವು ಅಕ್ಟೋಬರ್ 4, ಭಾನುವಾರದವರೆಗೆ ಮುಂದುವರಿಯಲಿದೆ.

ಈ ಕರಸೇವೆ ವೇಳೆ ಹಳೆಯ ಮಾಡಿನ ಹಂಚುಗಳನ್ನು ತೆಗೆದು, ಅವುಗಳನ್ನು ವ್ಯವಸ್ಥಿತವಾಗಿ ನಿಗದಿತ ಸ್ಥಳಕ್ಕೆ ವರ್ಗಾಯಿಸುವ ಕಾರ್ಯ ನಡೆಯಲಿದ್ದು, ಹಳೆ ವಿದ್ಯಾರ್ಥಿಗಳು, ಪೋಷಕರು, ಸಂಘ-ಸಂಸ್ಥೆಗಳು, ದಾನಿಗಳು ಹಾಗೂ ಶಾಲಾ ಹಿತೈಷಿಗಳು ಭಾಗವಹಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ವಿಶೇಷ ಸಮಿತಿಯ ಕಾರ್ಯಾಧ್ಯಕ್ಷರಾದ ನಿಕಟ ಪೂರ್ವ ಶಾಸಕರಾದ ರಘುಪತಿ ಭಟ್ ಮತ್ತು ಶಾಲೆಯ ಮುಖ್ಯೋಪಾಧ್ಯಾಯರಾದ ಸಂತೋಷ್ ಕರ್ನೇಲೀಯೋ ಮನವಿ ಮಾಡಿದ್ದಾರೆ.

More like this
Related

ಉಡುಪಿ ಕಾಂಗ್ರೆಸ್ ಭವನದಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ

ಉಡುಪಿ: ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರ...

ಹಿರೇಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸುತ್ತುಪೌಳಿ ಕಾಮಗಾರಿಗೆ ಶಿಲಾ ಮುಹೂರ್ತ

 ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಾಮಗಾರಿಗೆ ಚಾಲನೆ; ಜೀರ್ಣೋದ್ಧಾರದ ವಿನ್ಯಾಸ ಪರಿಚಯಿಸುವ ವಾಕ್‌ಥ್ರೂ ವೀಡಿಯೊ...

ಪ್ರವಾಹದ ನಡುವೆಯೂ ನೇಪಾಳಕ್ಕೆ ಪ್ರವಾಸಿಗರ ಭೇಟಿ ಶೇ.12.1ರಷ್ಟು ಏರಿಕೆ

ಕಠ್ಮಂಡು: ಭೀಕರ ಪ್ರವಾಹದಿಂದ ಅಪಾರ ಹಾನಿ ಸಂಭವಿಸಿದ್ದರೂ ನೇಪಾಳಕ್ಕೆ ವಿದೇಶಿ ಪ್ರವಾಸಿಗರ...

ಏಷ್ಯನ್ ಗೇಮ್ಸ್: ದಕ್ಷಿಣ ಕೊರಿಯಾ ವಿರುದ್ಧ ಸೋಲು, ಭಾರತಕ್ಕೆ ಬೆಳ್ಳಿ ಪದಕ

ಒಕಝಾಕಿ: ಏಷ್ಯನ್ ಗೇಮ್ಸ್‌ನ ಪುರುಷರ ರಿಕರ್ವ್ ಆರ್ಚರಿ ತಂಡ ವಿಭಾಗದ ಫೈನಲ್‌ನಲ್ಲಿ...

Copying is disabled on Udupi Digital News.