Tuesday, November 10, 2026

ಸಾಸ್ತಾನ : ಚರ್ಚಿಗೆ ತೆರಳುತ್ತಿದ್ದ ವೇಳೆ ಸ್ಕೂಟರ್ ಢಿಕ್ಕಿ ಹೊಡೆದು ಪಾದಚಾರಿ ಮೃತ್ಯು

ಕೋಟ: ಸ್ಕೂಟರ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬ್ರಹ್ಮಾವರ ತಾಲೂಕು ಗುಂಡ್ಮಿ ಗ್ರಾಮದ ಸಾಸ್ತಾನ ಸರಕಾರಿ ಆಸ್ಪತ್ರೆ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನ.9ರಂದು ನಡೆದಿದೆ.

ಮೃತರನ್ನು ಐರೋಡಿ ಗ್ರಾಮದ ಟೆಲಿಫೋನ್ ಎಕ್ಸಚೇಂಜ್ ಬಿಲ್ಡಿಂಗ್ ನಿವಾಸಿ ಹೆನ್ರಿ ಫೆರ್ನಾಂಡಿಸ್ (75) ಎಂದು ಗುರುತಿಸಲಾಗಿದೆ. ಇವರು ಬೆಳಗ್ಗೆ ಮನೆಯಿಂದ ಸಾಸ್ತಾನ ಸಂತ ಅಂತೋನಿ ಚರ್ಚಿನಲ್ಲಿ ನಡೆಯುವ ಬೆಳಗ್ಗಿನ ಪೂಜೆಗೆ ನಡೆದುಕೊಂಡು ಹೊರಟಿದ್ದರು. ಈ ವೇಳೆ ಬ್ರಹ್ಮಾವರದಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಸ್ಕೂಟರ್ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಹೆನ್ರಿ ಫೆರ್ನಾಂಡಿಸ್‌ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.

ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅವರು, ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ ವೇಳೆ ಮೃತಪಟ್ಟರು ಎಂದು ತಿಳಿದುಬಂದಿದೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

More like this
Related

ಎಡ್ಮೇರು: ರಸ್ತೆ ಬದಿಯ ಗೋಡೆಗೆ ಬೈಕ್ ಡಿಕ್ಕಿ ಹೊಡೆದು ಯುವಕ ಮೃತ್ಯು

ಉಡುಪಿ: ಕಾರ್ಕಳ- ಮೂಡುಬೆಳ್ಳೆ-ಉಡುಪಿ ರಾಜ್ಯ ಹೆದ್ದಾರಿಯ ಎಡೇರು ಬಳಿ ಬೈಕೊಂದು ವಾಹನ...

ಉರ್ದು ಅಕಾಡೆಮಿಗೆ ಅನುದಾನ ಹೆಚ್ಚಳ; ಅಲ್ಪಸಂಖ್ಯಾತ ಧರ್ಮಗಳ ಸಮಸ್ಯೆ ಆಲಿಕೆಗೆ ಪ್ರತ್ಯೇಕ ಸಭೆ: ಸಿಎಂ ಡಿ ಕೆ ಶಿವಕುಮಾರ್ ಭರವಸೆ

ಬೆಂಗಳೂರು, ನ.9: "ಉರ್ದು ಅಕಾಡೆಮಿಯ ಚಟುವಟಿಕೆಗಳಿಗೆ ಹೆಚ್ಚಿನ ಅನುದಾನ ಒದಗಿಸುವ ಜತೆಗೆ, ಅಲ್ಪಸಂಖ್ಯಾತ...

ನಿರಂತರ ಕಲಿಕೆ ಅಭಿವೃದ್ಧಿಗೆ ಅಗತ್ಯ, ಸದಾ ಬದಲಾವಣೆಗೆ ಹೊಂದಿಕೊಳ್ಳಿ: ಶಶಿ ಶೇಖರ್ ವೆಂಪತಿ ಅಭಿಪ್ರಾಯ

ನಿಟ್ಟೆ ವಿವಿ 16ನೇ ಘಟಿಕೋತ್ಸವ ಮೂರನೇ ಅಧಿವೇಶನ | 839 ವಿದ್ಯಾರ್ಥಿಗಳಿಗೆ...

ಪೆರ್ಡೂರು ಪ್ರದೀಪ್ ಪೂಜಾರಿ ಸಾವಿನ ಮೂರು ಪ್ರಕರಣಗಳ ತನಿಖೆ ಸಿಐಡಿಗೆ ವರ್ಗಾವಣೆ

ಉಡುಪಿ: ಪೆರ್ಡೂರು ಮೂಲದ ಪ್ರದೀಪ್ ಪೂಜಾರಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ...

Copying is disabled on Udupi Digital News.