ಉಡುಪಿ: ಜನಪ್ರಿಯ ಜನಸೇವಕರಾಗಿರುವ, ಅನೇಕ ದೈವ–ದೇವಸ್ಥಾನಗಳ ಜೀರ್ಣೋದ್ಧಾರದ ರೂವಾರಿಗಳು ಹಾಗೂ ಜಲದುರ್ಗ ಪರಮೇಶ್ವರಿ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಕೆ. ಕೃಷ್ಣಮೂರ್ತಿ ಆಚಾರ್ಯ ಅವರ ಸಾರಥ್ಯದಲ್ಲಿ, ಶಕ್ತಿ ಇವೆಂಟ್ಸ್ (Shakthi Events) ಆಶ್ರಯದಲ್ಲಿ ಜುಲೈ 31, ಅಗಸ್ಟ್ 1 ಮತ್ತು 2 ರವರೆಗೆ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ‘ಸ್ವದೇಶಿ ಖಾದ್ಯ ಮೇಳ’ ಆಯೋಜಿಸಲಾಗುತ್ತಿದೆ.

ಮೂರು ದಿನಗಳ ಕಾಲ ನಡೆಯಲಿರುವ ಈ ಮೇಳಕ್ಕೆ ಸ್ಟಾಲ್ ಬುಕ್ಕಿಂಗ್ ಪ್ರಾರಂಭವಾಗಿದ್ದು, ವ್ಯಾಪಾರಿಗಳು ಹಾಗೂ ಸ್ಥಳೀಯ ಉದ್ಯಮಿಗಳಿಗೆ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಲು ಸುವರ್ಣಾವಕಾಶ ಕಲ್ಪಿಸಲಾಗಿದೆ.
ಲಭ್ಯವಿರುವ ಸ್ಟಾಲ್‌ಗಳು
🍘 ಸ್ವದೇಶಿ ತಿಂಡಿ-ತಿನಿಸುಗಳು
🧵 ಕರಕುಶಲ ವಸ್ತುಗಳು
🎁 ಫ್ಯಾನ್ಸಿ ವಸ್ತುಗಳು
🏺 ಗೃಹೋಪಯೋಗಿ ವಸ್ತುಗಳು
🌿 ಮಸಾಲೆ ಹಾಗೂ ಇತರೆ ಸ್ವದೇಶಿ ಉತ್ಪನ್ನಗಳು
ಸಾವಿರಾರು ಮಂದಿ ಭೇಟಿ ನೀಡಲಿರುವ ಈ ಮೇಳದಲ್ಲಿ ಭಾಗವಹಿಸುವ ಮೂಲಕ ತಮ್ಮ ಉತ್ಪನ್ನಗಳನ್ನು ಹೆಚ್ಚಿನ ಜನರಿಗೆ ಪರಿಚಯಿಸಿ, ವ್ಯಾಪಾರವನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ವ್ಯಾಪಾರಿಗಳು ಸದ್ಬಳಕೆ ಮಾಡಿಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಸ್ಟಾಲ್ ಬುಕ್ಕಿಂಗ್ ಗಾಗಿ ಆಸಕ್ತರು 80734 97446 ಹಾಗೂ 63668 61816 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.
“ಸ್ವದೇಶಿ ಉತ್ಪನ್ನಗಳನ್ನು ಬೆಂಬಲಿಸಿ – ಸ್ಥಳೀಯ ಉದ್ಯಮಿಗಳನ್ನು ಪ್ರೋತ್ಸಾಹಿಸಿ!”




