Saturday, May 9, 2026

ಉಡುಪಿ ಅಗ್ನಿ ದುರಂತ: ತುರ್ತು ಸಂದರ್ಭದಲ್ಲಿ ಸ್ಪಂದಿಸಿದ ಶೂ ಬಜಾರ್ ಸಿಬ್ಬಂದಿಗೆ ಗೌರವ

ಉಡುಪಿ: ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಕಟ್ಟಡದಲ್ಲಿ ಇತ್ತೀಚೆಗೆ ಸಂಭವಿಸಿದ ಬೆಂಕಿ ದುರಂತದ ತುರ್ತು ಸಂದರ್ಭದಲ್ಲಿ ಸ್ಪಂದಿಸಿದ ಉಡುಪಿ ಶೂ ಬಜಾರ್ ಸಿಬ್ಬಂದಿ ಅಲ್ತಾಫ್ ಪಡುಬಿದ್ರಿ ಅವರಿಗೆ ಶೂ ಬಜಾರ್ ವತಿಯಿಂದ ಶುಕ್ರವಾರ ಸನ್ಮಾನಿಸಲಾಯಿತು.

ಅಗ್ನಿ ಶಾಮಕದಳದ ನಿರಂತರ ಪ್ರಯತ್ನದ ಮಧ್ಯೆಯೂ ಬೆಂಕಿ ಹತೋಟಿ ಬಾರದ ಸಂದರ್ಭ ಅಲ್ತಾಫ್ ಕೂಡಲೇ ಯುಪಿಸಿಎಲ್‌ಗೆ ಕರೆ ಮಾಡಿ ತಕ್ಷಣವೇ ಅಲ್ಲಿನ ಅಗ್ನಿಶಾಮಕ ವಾಹನ ಸ್ಥಳಕ್ಕೆ ಬರುವಂತೆ ಶ್ರಮಿಸಿದ್ದರು. ಈ ಹಿನ್ನಲೆಯಲ್ಲಿ ಅವರನ್ನು ಶೂ ಬಜಾರ್‌ನಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಮಾಜ ಸೇವಕ ಮುನೀರ್ ಕಲ್ಮಾಡಿ, ಶೂ ಬಜಾರ್‌ನ ಪ್ರಮುಖರಾದ ಶಾಹೀದ್ ಕಾಪು, ಸಂಶುದ್ದೀನ್, ಶಮೀಮ್ ಮೊದಲಾದ ವರು ಉಪಸ್ಥಿತರಿದ್ದರು. ಅಬೂಬಕ್ಕರ್ ಮೂಳೂರು ಕಾರ್ಯಕ್ರಮ ನಿರೂಪಿಸಿದರು.

More like this
Related

ಬಹುಮತ ಸಾಬೀತುಪಡಿಸಲು ವಿಫಲ: ವಿಜಯ್‌ಗೆ ಸರ್ಕಾರ ರಚನೆಗೆ ರಾಜ್ಯಪಾಲರಿಂದ ಇನ್ನೂ ಆಹ್ವಾನವಿಲ್ಲ

ಚೆನ್ನೈ: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಧ್ಯಕ್ಷ ಸಿ. ಜೋಸೆಫ್ ವಿಜಯ್...

ಪರಿಷತ್ ಸದಸ್ಯ ಸಲೀಂ ಅಹಮ್ಮದ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಹಬೀಬ್ ಆಲಿ ಆಗ್ರಹ

ಉಡುಪಿ: ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಹಾಗೂ ಮುಖ್ಯ ಸಚೇತಕರಾದ ಸಲೀಂ...

ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಆಯ್ಕೆ

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಐತಿಹಾಸಿಕ ಗೆಲುವಿನ ನಂತರ,...

ತಮಿಳುನಾಡಿನಲ್ಲಿ ಇನ್ಮುಂದೆ ವಿಜಯ್ ‘ಸರ್ಕಾರ್’; ಕೊನೆಗೂ ಟಿವಿಕೆಗೆ ಸಿಕ್ಕಿತು ಮ್ಯಾಜಿಕ್ ನಂಬರ್

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಪಡೆದು ಅತಿ ದೊಡ್ಡ...

Copying is disabled on Udupi Digital News.