ಕುಂದಾಪುರ: ಮುತ್ತೂಟ್ ಪೈನಾನ್ಸ್ ಸಂಸ್ಥೆಯಿಂದ ಕೊಡ ಮಾಡಿದ ಡಿಜಿಟಲ್ ಕಲಿಕಾ ಸೌಲಭ್ಯವನ್ನು ಉಪ್ಪುಂದ ಸರ್ಕಾರಿ ಪಿಯು ಕಾಲೇಜಿನಲ್ಲಿ ಎಪ್ರಿಲ್ 8 ಬುಧವಾರ ಉದ್ಘಾಟಿಸಲಾಯಿತು.
ಈ ಸಂದರ್ಭ ಮಾತನಾಡಿದ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಿ. ಎಸ್. ಸುರೇಶ್ ಶೆಟ್ಟಿ, ಗ್ರಾಮೀಣ ಭಾಗದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿದ್ದು, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಂಘ ಸಂಸ್ಥೆಗಳು ಕೈಜೋಡಿಸಿದಾಗ ಯಶಸ್ಸು ಸಾಧ್ಯ. ಆ ನಿಟ್ಟಿನಲ್ಲಿ ಮುತ್ತೂಟ್ ಫೈನಾನ್ಸ್ ಚಿಂತನೆ ಶ್ಲಾಘನೀಯ. ವಿದ್ಯಾರ್ಥಿಗಳು ಡಿಜಿಟಲ್ ಕಲಿಕಾ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳುವಂತಾಗಬೇಕು ಎಂದರು
ಈ ಸಂದರ್ಭ ಮುತ್ತೂಟ್ ಫೈನಾನ್ಸ್ ಮಂಗಳೂರು ಇದರ ರೀಜನಲ್ ಮ್ಯಾನೇಜರ್ ಪ್ರಶಾಂತ್ ನಾಯ್ಕ್, ಮಂಗಳೂರು ವಲಯದ ಸಿಎಸ್ಆರ್ ಮ್ಯಾನೇಜರ್ ಪ್ರಸಾದ್ ಕುಮಾರ್, ಅನುಷ್ಠಾನ ಸಂಸ್ಥೆ ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ಇದರ ಅಧ್ಯಕ್ಷ ಗೋವಿಂದ ಬಾಬು ಪೂಜಾರಿಯವರನ್ನು ಗೌರವಿಸಿ ಸಮ್ಮಾನಿಸಲಾಯಿತು.
ಮುತ್ತೂಟ್ ಫೈನಾನ್ಸ್ ಉಡುಪಿ ಕ್ಲಸ್ಟರ್ ಕ್ಲಸ್ಟರ್ ಮ್ಯಾನೇಜರ್ ಸಾಗರ್ ಭಾಸ್ಕರ್, ಬೈಂದೂರು ಶಾಖಾ ವ್ಯವಸ್ಥಾಪಕ ಸಂದೀಪ್ ಖಾರ್ವಿ, ಸಮಾಜ ಸೇವಕ ಇನ್ಫೋಸಿಸ್ ನ ಸಾಗರ್ ಸಾಬೋಜಿ, ಸಾಮಾಜಿಕ ಕಾರ್ಯಕರ್ತೆ ಯುನೈಟೆಡ್ ನೆಕ್ಸ್ಟ್ ಮೆಥಡ್ಸ್ ನ ಶಾಲಿನಿ ಮೊಗವೀರ, ಸರಕಾರಿ ಪಿಯು ಕಾಲೇಜು ಉಪ್ಪುಂದ ಸುಶೀಲಾ, ಉಪಸ್ಥಿತರಿದ್ದರು.




