Saturday, April 4, 2026

ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್ ದಾಳಿ: ನಾಲ್ವರಿಗೆ ಗಾಯ

ಯುಡಿ ನ್ಯೂಸ್ ಡಾಟ್ ಕಾಮ್

ದುಬೈ: ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ಜಂಟಿ ದಾಳಿ ನಡೆಸಿದ ಬೆನ್ನಲ್ಲೇ ಇರಾನ್ ಪ್ರತಿದಾಳಿ ಆರಂಭಿಸಿದ್ದು, ಗಲ್ಫ್‌ನಲ್ಲಿರುವ ಅಮೆರಿಕದ ಮಿಲಿಟರಿ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇದೀಗ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೂ ಇರಾನ್ ದಾಳಿ ನಡೆಸಿದೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಹರಿದಾಡುತ್ತಿದ್ದು, ದಾಳಿಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ದುಬೈ ವಿಮಾನ ನಿಲ್ದಾಣವನ್ನು ನೇರವಾಗಿ ಗುರಿಯಾಗಿಸಿಕೊಂಡು ದಾಳಿ ನಡೆದಿದೆ ಎಂಬ ಕುರಿತು ಯಾವುದೇ ಅಧಿಕೃತ ಹೇಳಿಕೆಗಳು ಬಂದಿಲ್ಲ.

ದಾಳಿಯ ನಂತರ ವಿಮಾನ ನಿಲ್ದಾಣದ ಪ್ರಯಾಣಿಕರ ಲಾಂಜ್ ಭಾಗಕ್ಕೆ ಹಾನಿಯಾಗಿದೆ ಎಂದು ವರದಿಗಳು ಹೇಳಿವೆ. ವೀಡಿಯೋದಲ್ಲಿ ಸ್ಫೋಟದ ಶಬ್ದ ಕೇಳಿಬಂದಿದ್ದು, ದಟ್ಟಹೊಗೆ ಕಾಣಿಸಿಕೊಂಡ ಹಿನ್ನೆಲೆ ಪ್ರಯಾಣಿಕರು ಹೆದರಿ ಓಡುವ ದೃಶ್ಯಗಳು ಕಂಡುಬಂದಿದೆ. 

ಸದ್ಯ ಯುನೈಟೆಡ್ ಅರಬ್ ಎಮಿರೇಟ್ಸ್‌ನ ವಿವಿಧ ಪ್ರದೇಶಗಳಲ್ಲಿ ತುರ್ತು ಎಚ್ಚರಿಕೆ ಸಂದೇಶಗಳನ್ನು ರವಾನಿಸಿದ್ದು, ನಿವಾಸಿಗಳು ಹಾಗೂ ಪ್ರವಾಸಿಗರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಕ್ಷಿಪಣಿ ದಾಳಿ ಹಿನ್ನೆಲೆ ಭದ್ರತೆಗಳನ್ನು ಹೆಚ್ಚಿಸಲಾಗಿದೆ ಎಂದು ತಿಳಿದು ಬಂದಿದೆ.

More like this
Related

ಚೀನಾ ಬೆದರಿಕೆಗೆ ತೈವಾನ್ ‘ಸ್ವಯಂ ತಡೆ ಸಾಮರ್ಥ್ಯ’ ಬೆಳೆಸಬೇಕು: ವರದಿ

ವಾಷಿಂಗ್ಟನ್: ಚೀನಾ ಕಮ್ಯುನಿಸ್ಟ್ ಪಕ್ಷ (CCP) ನೀಡುತ್ತಿರುವ ನಿರಂತರ ಬೆದರಿಕೆಗಳ ನಡುವೆ...

ಭಜನಾ ಗುರು ಪ್ರಕಾಶ್ ಕುಲಾಲ್ ಕುಟುಂಬಕ್ಕೆ ಜನಸೇವಾ ಟ್ರಸ್ಟ್ ಹಾಗೂ ಟೀಂ ಅಭಿಮತದಿಂದ ಒಂದು ಲಕ್ಷ ರೂ ಸಹಾಯಧನ

ಕೋಟ, ಎ.4: ಭಜನಾ ಕ್ಷೇತ್ರಕ್ಕೆ ದೊಡ್ಡ ಸೇವೆ ಸಲ್ಲಿಸಿದ ಉಡುಪಿ ಜಿಲ್ಲಾ...

ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆ ಹೋರ್ಮುಜ್ ಜಲಸಂಧಿ ದಾಟಿದ ಭಾರತಕ್ಕೆ ಬರುತ್ತಿರುವ LPG ಟ್ಯಾಂಕರ್

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ ಭಾರತಕ್ಕೆ ಬರುತ್ತಿರುವ ಮತ್ತೊಂದು...

ಎರಡು ಪಂದ್ಯಗಳಿಂದ ಆಟಗಾರನ ಸಾಮರ್ಥ್ಯವನ್ನು ಅಳೆಯಲು ಸಾಧ್ಯವಿಲ್ಲ: ಸ್ಯಾಮ್ಸನ್ ಪರ ಸ್ಟೀಫನ್ ಫ್ಲೆಮಿಂಗ್ ಬೆಂಬಲ

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್...

Copying is disabled on Udupi Digital News.