Wednesday, April 15, 2026

ರಾಜ್ಯದಲ್ಲಿ ಮತ್ತೊಂದು ಮರ್ಯಾದಾ ಹತ್ಯೆ: ತಂಗಿಗೆ ವಿಷವುಣಿಸಿ ಕೊಂದ ಸಹೋದರ

ಯುಡಿ ನ್ಯೂಸ್ ಡಾಟ್ ಕಾಮ್

ಬೆಳಗಾವಿ: ತಿಂಗಳ ಹಿಂದಷ್ಟೇ ರಾಜ್ಯದಲ್ಲಿ ತೀವ್ರ ಸಂಚಲನವನ್ನುಂಟು ಮಾಡಿದ್ದ ಹುಬ್ಬಳ್ಳಿ ಮರ್ಯಾದಾ ಹತ್ಯೆ ಪ್ರಕರಣ ನೆನಪು ಮಾಸುವ ಮುನ್ನವೇ ಇದೀಗ ಬೆಳಗಾವಿಯಲ್ಲಿ ಮತ್ತೊಂದು ಅಂಥಹುದೇ ಪ್ರಕರಣ ಬೆಳಕಿಗೆ ಬಂದಿದೆ. ಪ್ರಿಯಕರನ ಜೊತೆ ಹೋಗಿದ್ದಕ್ಕೆ ಸಂಬಂಧಿಕರೇ ಯುವತಿಗೆ ವಿಷ ಕುಡಿಸಿ ಕೊಂದು ಹಾಕಿರುವ ಆಘಾತಕಾರಿ ಘಟನೆಯೊಂದು ಬೆಳಗಾವಿ ಜಿಲ್ಲೆಯ ಸೌದತ್ತಿ ತಾಲೂಕಿನಲ್ಲಿ ನಡೆದಿದೆ.

ಸತ್ಯವ್ವ ಎಂಬಾಕೆ ಫೆಬ್ರವರಿ 17ರಂದು ಪ್ರಿಯಕರ ಕೃಷ್ಣನ ಜೊತೆಗೆ ಹೋಗಿದ್ದು, ಸೌದತ್ತಿ ತಾಲೂಕಿನ ಬೆಳವಡಿಯಲ್ಲಿ ಬಾಡಿಗೆ ಮನೆಯಲ್ಲಿ ಇಬ್ಬರು ವಾಸಿಸುತ್ತಿದ್ದರು. 15 ದಿನಗಳ ಬಳಿಕ ಇಬ್ಬರನ್ನೂ ಕುಟುಂಬದ ಸದಸ್ಯರು ಕರೆ ತಂದು ಎರಡು ಕುಟುಂಬಸ್ಥರ ನಡುವೆ ರಾಜಿ ಸಂಧಾನ ನಡೆದಿತ್ತು. ಬಳಿಕ ಸತ್ಯವ್ವಳ ಅಣ್ಣ ಆಕೆಯನ್ನು ಕರೆದುಕೊಂಡು ಬಂದು ಮಹಾರಾಷ್ಟ್ರದ ಶಿರೋಳದಲ್ಲಿರುವ ಸತ್ಯವ್ವನ ಅಕ್ಕನ ಮನೆಗೆ ಕಳುಹಿಸಿದ್ದಾರೆ.

ಕೃಷ್ಣ ಪಾಟೀಲ್‌ನನ್ನು ಮರೆತು ಬಿಡುವಂತೆ ಸತ್ಯವ್ವಳಿಗೆ ಕುಟುಂಬದವರು ಒತ್ತಡ ಹೇರಿದ್ದು, ಇದಕ್ಕೆ ಆಕೆ ಒಪ್ಪದಿದ್ದಾಗ ಅರಗ ಗ್ರಾಮಕ್ಕೆ ಕರೆದುಕೊಂಡು ಬಂದು ಕೊಲೆ ಮಾಡಿದ್ದಾರೆ. ಮಾರ್ಚ್ 21ರಂದು ವಿಷ ಕುಡಿಸಿ ಸತ್ಯವ್ವನ ಕೊಲೆಗೈದು, ದೇಹವನ್ನು ಸುಟ್ಟು ಹಾಕಿದ್ದಾರೆ. ಸತ್ಯವ್ವನ ಅಣ್ಣ ಶಾನೂರ, ಚಿಕ್ಕಪ್ಪ ಪ್ರಕಾಶ, ಭಾವ ಕಲ್ಲಪ್ಪ ಸೇರಿ ಈ ಕೃತ್ಯ ನಡೆಸಿದ್ದು, ಬಳಿಕ ಗ್ರಾಮದ ಸ್ಮಶಾನದಲ್ಲಿ ಶವವನ್ನು ಸುಟ್ಟು ಹಾಕಿದ್ದಾರೆ. ಸಾಕ್ಷಿ ನಾಶಕ್ಕಾಗಿ ಆಕೆಯ ಹಾಸಿಗೆ ಬಟ್ಟೆ ಸಮೇತ ಶವವನ್ನು ಸುಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿಯೇ ಶವ ಸುಟ್ಟು ಮೂವರೂ ವಾಪಸ್ ಊರಿಗೆ ಬಂದಿದ್ದಾರೆ.

ಸತ್ಯವ್ವ ಸಂಪರ್ಕಕ್ಕೆ ಸಿಗದಿದ್ದಾಗ ಪ್ರಿಯಕರ ಕೃಷ್ಣ ಸಂಶಯಗೊಂಡಿದ್ದು, ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಕೃಷ್ಣನ ದೂರಿನ ಅನ್ವಯ ಸಿಪಿಐ ಜಾವೇದ್ ಮುಶಪೂರಿ ತನಿಖೆ ಕೈಗೊಂಡಿದ್ದರು. ಶಾನೂರನನ್ನು ಕರೆದುಕೊಂಡು ಬಂದು ವಿಚಾರಣೆ ನಡೆಸಿದಾಗ, ತಂಗಿ ಮರ್ಯಾದೆ ತೆಗೆಯುವ ಕೆಲಸ ಮಾಡಿದ್ದಕ್ಕೆ ಕೊಲೆ ಮಾಡಿದ್ದೇವೆ ಎಂದು ಆಕೆಯ ಅಣ್ಣ ತಪ್ಪು ಒಪ್ಪಿಕೊಂಡಿದ್ದಾನೆ. ಘಟನೆ ಸಂಬಂಧ ಶಾನೂರ ಪ್ರಕಾಶ ಮತ್ತು ಕಲ್ಲಪ್ಪನನ್ನು ಪೊಲೀಸರು ಆರೆಸ್ಟ್ ಮಾಡಿದ್ದಾರೆ.

ರಾಜ್ಯ ಸರ್ಕಾರ ಮರ್ಯಾದಾ ಹತ್ಯೆ ತಡೆ ಕಾನೂನು ಜಾರಿ ಮಾಡಿದ್ದರೂ ಇದೀಗ ಬೆಳಗಾವಿಯಲ್ಲಿ ಮರ್ಯಾದಾ ಹತ್ಯೆ ನಡೆದಿರುವುದು ಆತಂಕಕ್ಕೆಡೆಮಾಡಿಕೊಟ್ಟಿದೆ.

More like this
Related

ಕೆಕೆಆರ್ ಸೋಲಿನ ಜೊತೆ ನಾಯಕ ಅಜಿಂಕ್ಯ ರಹಾನೆಗೆ ಮತ್ತೊಂದು ಶಾಕ್: 12 ಲಕ್ಷ ರೂ. ದಂಡ

ಯುಡಿ ನ್ಯೂಸ್ ಡಾಟ್ ಕಾಮ್ಚೆನ್ನೈ: 2026ರ ಐಪಿಎಲ್ ಆವೃತ್ತಿಯಲ್ಲಿ ಇನ್ನೂ ಖಾತೆ ತೆರೆಯದ...

ಏಪ್ರಿಲ್ 20ರಂದು ಉಡುಪಿಯ ನೂತನ ಧರ್ಮಾಧ್ಯಕ್ಷರ ಪೀಠಾರೋಹಣ ಹಾಗೂ ಅಭಿಷೇಕ ಸಮಾರಂಭ

ಉಡುಪಿ: ಉಡುಪಿ ಧರ್ಮಕ್ಷೇತ್ರದ ದ್ವಿತೀಯ ಧರ್ಮಾಧ್ಯಕ್ಷರಾಗಿ ಅತಿ ಗೌರವಾನ್ವಿತ ಡಾ. ಲೆಸ್ಲಿ...

ಮಂಡ್ಯದಲ್ಲಿ ನರೇಂದ್ರ ಮೋದಿ: ಆದಿಚುಂಚನಗಿರಿ ಮಠದ ಗುರುಭೈರವೈಕ್ಯ ಮಂದಿರ ಉದ್ಘಾಟಿಸಿದ ಪ್ರಧಾನಿ

ಯುಡಿ ನ್ಯೂಸ್ ಡಾಟ್ ಕಾಮ್ಮಂಡ್ಯ: ಆದಿಚುಂಚನಗಿರಿ ಮಠದಲ್ಲಿ ದ್ರಾವಿಡ-ಹೊಯ್ಸಳ ಶೈಲಿಯ ಶಿಲ್ಪಕಲೆಯಿಂದ ನಿರ್ಮಿಸಿರುವ...

ಅಪ್ರಾಪ್ತೆಯರಿಗೆ ಲೈಂಗಿಕ ದೌರ್ಜನ್ಯ: 350 ಅಶ್ಲೀಲ ವೀಡಿಯೋ ಇಟ್ಟುಕೊಂಡಿದ್ದ ಆರೋಪಿ ಅಂದರ್

ಯುಡಿ ನ್ಯೂಸ್ ಡಾಟ್ ಕಾಮ್ಮುಂಬೈ: ಹುಡುಗಿಯರನ್ನು ಪ್ರೀತಿಯ ಬಲೆಗೆ ಬೀಳಿಸಿ 180 ಅಪ್ರಾಪ್ತ...

Copying is disabled on Udupi Digital News.