Monday, November 2, 2026

ಬೆಂಗಳೂರಿನ ಬಿ ಖಾತಾದಾರರಿಗೆ ಗುಡ್ ನ್ಯೂಸ್: ಲಕ್ಷಾಂತರ ಅಪಾರ್ಟ್‌ಮೆಂಟ್‌ಗಳಿಗೆ ಸಿಗಲಿದೆ ಎ ಖಾತಾ!

ಉಡುಪಿ ಡಿಜಿಟಲ್ ನ್ಯೂಸ್ ಡಾಟ್ ಕಾಮ್
ಬೆಂಗಳೂರು:
ನಗರದ ಬಡಾವಣೆಗಳಲ್ಲಿನ ಬಿ-ಖಾತಾ ನಿವೇಶನ, ಕಟ್ಟಡಗಳಿಗೆ ಮತ್ತು ನಗರ ಪಾಲಿಕೆಗಳ ವ್ಯಾಪ್ತಿಯ ಅಧಿಕೃತ ಅಪಾರ್ಟ್‌ಮೆಂಟ್‌ಗಳಲ್ಲಿನ ಫ್ಲಾಟ್ ಗಳಿಗೆ ಎ-ಖಾತಾ ಸೌಲಭ್ಯ ಸಿಗಲಿದೆ.

ಕಾಯ್ದೆ 1961 ಅನ್ನು ಉಲ್ಲಂಘಿಸಿ ನಿರ್ಮಿಸಿರುವ ಅಧಿಕೃತ ನಿವೇಶನ, ಕಟ್ಟಡ, ಅಪಾರ್ಟ್ ಮೆಂಟ್ ಗಳಲ್ಲಿನ ಫ್ಲಾಟ್ ಗಳಿಗೆ ಮಾತ್ರ ಖಾತಾ ಪರಿವರ್ತನೆಗೆ ಅವಕಾಶ ನೀಡಲಾಗುತ್ತದೆ. ಜೊತೆಗೆ ಸುಮಾರು 10 ಲಕ್ಷ ಬಿ ಖಾತಾ ಆಸ್ತಿಗಳಿವೆ. ಜಿಬಿಎ ವ್ಯಾಪ್ತಿಯಲ್ಲಿ ವಿಧಿಸಲಾಗಿದ್ದ ನಿಯಮಗಳನ್ನೇ ಉಳಿದ ಕಡೆಗಳಿಗೂ ಅನ್ವಯಿಸಲಾಗುವುದು ಎನ್ನಲಾಗಿದೆ. ಒತ್ತುವರಿ ಮತ್ತು ಉಲ್ಲಂಘನೆಯ ಪ್ರಮಾಣಕ್ಕೆ ಅನುಗುಣವಾಗಿ ದಂಡದ ಪ್ರಮಾಣವನ್ನು ನಿಗದಿ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಎ ಖಾತಾ ನೀಡಲು ಮಾನದಂಡವೇನು?
ಅಪಾರ್ಟ್ಮೆಂಟ್ ಈ ವರ್ಷದ ಅಸ್ತಿ ತೆರಿಗೆ ಪಾವತಿ ಮಾಡಿರಬೇಕು.
ಅಪಾರ್ಟ್ಮೆಂಟ್ ಗೆ ನಕ್ಷೆ ಇರಬೇಕು.
ಸರ್ಕಾರ ಸೂಚಿಸಿದ ಮಾರ್ಗಸೂಚಿ ದರದ ಶೇಕಡಾ 5ರಷ್ಟು ಹಣ ಪಾವತಿ ಮಾಡಬೇಕು.
ಅಪಾರ್ಟ್ಮೆಂಟ್ ಲ್ಯಾಂಡ್ ಗೆ ಬಿ ಖಾತಾ ಇರಬೇಕು.
ಅಪಾರ್ಟಮೆಂಟ್ ಮಾಲೀಕರು ವೈಯಕ್ತಿಕವಾಗಿ ಇ ಖಾತಾಗೆ ಅಪ್ಲೈ ಮಾಡಬೇಕು.
ನಕ್ಷೆ ಮೀರಿ ಕಟ್ಟಡ ನಿರ್ಮಾಣ ಮಾಡಿದ್ರೆ ಮಾರ್ಗಸೂಚಿ ಬೆಲೆಯ ಶೇಕಡಾ 50 ರಷ್ಟು ಹಣ ಪಾವತಿ ಮಾಡಬೇಕು.
ಅನ್ಲೈನ್ ಮುಖಾಂತರ ಇ ಖಾತಾಗೆ ಅರ್ಜಿ ಸಲ್ಲಿಸಬಹುದು.
ಸಲ್ಲಿಕೆ ಮಾಡಿದ ದಾಖಲೆಯನ್ನು ಅಧಿಕಾರಿಗಳು ಪರಿಶೀಲನೆ ನಡೆಸಿ ಖಾತಾ ವಿತರಣೆ ಮಾಡುತ್ತಾರೆ.

ಮತ್ತೊಂದೆಡೆ, ಎ ಖಾತಾಗೆ ಪರಿವರ್ತನೆ ಮಾಡಿಕೊಡುವ ಈ ಪ್ರಕ್ರಿಯೆಯನ್ನು ಕೇವಲ ಸರ್ಕಾರದ ಆದಾಯ ಹೆಚ್ಚಿಸುವ ಉದ್ದೇಶದಿಂದ ಮಾಡುತ್ತಿದ್ದಾರೆ. ಇದು ಕಾನೂನು ಪ್ರಕಾರ ಸರಿಯಾಗುವುದಿಲ್ಲ. ಜನರನ್ನು ದಾರಿ ತಪ್ಪಿಸುವಂತಹ ಕೆಲಸ ಮಾಡುತ್ತಿದಾರೆ ಎಂಬ ಆರೋಪಗಳೂ ಹಲವೆಡೆ ಕೇಳಿಬರುತ್ತಿವೆ.

ಒಟ್ಟಿನಲ್ಲಿ ರಾಜ್ಯದಲ್ಲಿ ಇ ಖಾತಾ ಅಡಿಯಲ್ಲಿ ಇರುವ ಅನೇಕ ಸ್ವತ್ತುಗಳಿಗೆ ಎ ಖಾತಾದ ಭಾಗ್ಯ ಸಿಕಿಲ್ಲ. ಆದರೆ ಅಪಾರ್ಟ್‌ಮೆಂಟ್ ಗಳಿಗೆಮಾತ್ರ ಎ ಖಾತಾ ನೀಡುವ ಭರವಸೆ ನೀಡಿರುವ ಸರ್ಕಾರ ಆ ಮೂಲಕ ಆದಾಯ ಹೆಚ್ಚಳಕ್ಕೆ ಮುಂದಾಗಿದೆ.

More like this
Related

ನ. 3-7 ರ ವರೆಗೆ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ

ಉಡುಪಿ: ಜಿಲ್ಲೆಯ ಪ್ರಸಕ್ತ ವಿದ್ಯಮಾನಗಳನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ...

ಕುಂದಾಪುರ ಪತ್ರಕರ್ತನ ಮೇಲಿನ ಹಲ್ಲೆ ಪ್ರಕರಣ: ವೈದ್ಯರ ವರ್ಗಾವಣೆಗೆ ಆಗ್ರಹಿಸಿ ಉಸ್ತುವಾರಿ ಸಚಿವರಿಗೆ ಮನವಿ

ಉಡುಪಿ: ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯ...

 ಉಡುಪಿ ಜಿಲ್ಲಾ ಆಸ್ಪತ್ರೆ ಶೀಘ್ರ ಕಾರ್ಯಾರಂಭಕ್ಕೆ ಕ್ರಮ: ಯು.ಟಿ. ಖಾದರ್

ಉಡುಪಿ: ನೂತನ ಉಡುಪಿ ಜಿಲ್ಲಾ ಆಸ್ಪತ್ರೆಯ ಕಾರ್ಯಾರಂಭಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದ್ದು,...

ಡಾ. ಜಿ. ರಾಮಕೃಷ್ಣ ಆಚಾರ್ ಅವರ ಜೀವನ ಚರಿತ್ರೆ ಅನಾವರಣ 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಲೋಕಾರ್ಪಣೆ. ನವೆಂಬರ್ 2ರಂದು ಮುಂಬೈನಲ್ಲಿ...

Copying is disabled on Udupi Digital News.