Thursday, April 30, 2026

ಪ್ರೀ ವೆಡ್ಡಿಂಗ್ ಫೋಟೋ ಶೂಟ್; ವಧು ಕರೆದುಕೊಂಡು ಬರಲು ತೆರಳುತ್ತಿದ್ದ ವೇಳೆ ಅಪಘಾತದಲ್ಲಿ ವರ ಸಾವು!

ಹಾಸನ: ಮದುವೆ ಸಿದ್ಧತೆಯಲ್ಲಿದ್ದ ವರ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಗಾಗಿ ವಧುವನ್ನು ಕರೆತರಲು ಹೋಗುತ್ತಿದ್ದ ವೇಳೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮೂಗಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮನು.ಎಲ್‌.ಎನ್. (29) ಮೃತ ವರ. ಬೇಲೂರು ತಾಲ್ಲೂಕಿನ, ಲಕ್ಕುಂದ ಗ್ರಾಮದ, ದರ್ಬಾರ್ ಪೇಟೆ ನಿವಾಸಿ.

ಮೇ 10 ರಂದು ಆಲೂರು ತಾಲೂಕು ತೊಗರನಹಳ್ಳಿ ಗ್ರಾಮದ ಕಾಂಚನ ಜೊತೆ ಮನು ಅವರ ಮದುವೆ ಆಲೂರು ಬೈರಾಪುರ ರಸ್ತೆಯಲ್ಲಿರುವ ಶ್ರೀ ವೀರಶೈವ ಕಲ್ಯಾಣ ಮಂಟಪದಲ್ಲಿ ನಿಗದಿಯಾಗಿತ್ತು.

ಎರಡೂ ಕುಟುಂಬಗಳಲ್ಲಿಯೂ ಮದುವೆ ಸಂಭ್ರಮಕ್ಕೆ ಭರದಿಂದ ಸಿದ್ಧತೆಗಳು ನಡೆಯುತ್ತಿದ್ದವು. ಆದರೆ ಇಂದು ಬೆಳಿಗ್ಗೆ ಮನು ಪ್ರೀವೆಡ್ಡಿಂಗ್ ಶೂಟಿಂಗ್‌ಗಾಗಿ ವಧುವನ್ನು ಕರೆತರಲು ಕಾರಿನಲ್ಲಿ ಹೊರಟಿದ್ದರು. ಮೂಗಲಿ ಗ್ರಾಮದ ಬಳಿ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಮನು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮದುವೆಗೆ ಎರಡೂ ಕುಟುಂಬಗಳಲ್ಲಿ ಭರದಿಂದ ಸಿದ್ಧತೆಗಳು ನಡೆಯುತ್ತಿದ್ದವು. ಈ ನಡುವೆ ಮನು ಅವರು ಪ್ರೀವೆಡ್ಡಿಂಗ್ ಶೂಟಿಂಗ್‌ಗಾಗಿ ವಧುವನ್ನು ಕರೆತರಲು ತಮ್ಮ ವಿಟಾರಾ ಬ್ರೆಝಾ ಕಾರಿನಲ್ಲಿ ಒಬ್ಬರೇ ಹೊರಟಿದ್ದರು. ಘಟನಾ ಸ್ಥಳಕ್ಕೆ ಸಕಲೇಶಪುರ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

More like this
Related

ಹಣಕಾಸು ವ್ಯವಹಾರ: ಮಲ್ಪೆ ಬಂದರು ದಕ್ಕೆಯಲ್ಲಿ ಹಲ್ಲೆ ಪ್ರಕರಣ: ಎರಡು ಪ್ರತ್ಯೇಕ ಪ್ರಕರಣ ದಾಖಲು

ಉಡುಪಿ: ಮೀನುಗಾರಿಕಾ ವ್ಯವಹಾರ ಸಂಬಂಧ ಹಣಕಾಸು ವಿವಾದದ ಹಿನ್ನೆಲೆ ಮಲ್ಪೆ ಬಂದರಿನ...

ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಯತ್ನ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಉಡುಪಿ: ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ...

ವಿಶ್ವ ತಂಡ ಟೇಬಲ್ ಟೆನ್ನಿಸ್ ಚಾಂಪಿಯನ್‌ಶಿಪ್: ಸ್ಲೋವಾಕಿಯಾ ವಿರುದ್ಧ ಭಾರತಕ್ಕೆ ರೋಚಕ ಜಯ

ಲಂಡನ್, ಏ.30: ಐಟಿಟಿಎಫ್ ವಿಶ್ವ ತಂಡ ಟೇಬಲ್ ಟೆನ್ನಿಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ...

ಥಾಮಸ್ ಕಪ್ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತಕ್ಕೆ ಚೈನೀಸ್ ತೈಪೆ ಸವಾಲು

ಹೋರ್ಸೆನ್ಸ್ (ಡೆನ್ಮಾರ್ಕ್),: ಬಿಎಡಬ್ಲ್ಯುಎಫ್ ಥಾಮಸ್ ಕಪ್ ಫೈನಲ್ಸ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತೀಯ ಪುರುಷರ...

Copying is disabled on Udupi Digital News.