ಬೆಂಗಳೂರು: ರಾಜ್ಯದ ಗೃಹಬಳಕೆ ವಿದ್ಯುತ್ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ಎದುರಾಗಿದ್ದು, KERC ಪ್ರತಿ ಯೂನಿಟ್‍ಗೆ 56 ಪೈಸೆ ವಿದ್ಯುತ್ ದರವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ.
ಮೇ 1ರಿಂದಲೇ ಪರಿಷ್ಕೃತ ವಿದ್ಯುತ್ ದರ ಏರಿಕೆ ಜಾರಿಯಾಗಿದ್ದು, ಪ್ರತಿ ಯೂನಿಟ್‍ಗೆ 56 ಪೈಸೆ ಹೆಚ್ಚಳ ಮಾಡಲಾಗಿದೆ. ಮೇ ತಿಂಗಳ ಬಿಲ್‍ನಿಂದ ಈ ಹೊಸ ದರ ಅನ್ವಯವಾಗಲಿದೆ. ಎಸ್ಕಾಂಗಳು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪರಿಗಣಿಸಿದ KERC, ಈ ದರ ಏರಿಕೆಗೆ ಮಂಜೂರಾತಿ ನೀಡಿದೆ.
2024-25ನೇ ಆರ್ಥಿಕ ವರ್ಷದಲ್ಲಿ ವಿದ್ಯುತ್ ಮಾರಾಟದಿಂದ 34,084 ಕೋಟಿ ರೂ.ಆದಾಯ ನಿರೀಕ್ಷಿಸಲಾಗಿತ್ತು. ಆದರೆ, ಕೇವಲ 32,019 ಕೋಟಿ ರೂ.ಆದಾಯ ಮಾತ್ರ ಬಂದಿದ್ದು, ಸುಮಾರು 2,068 ಕೋಟಿ ರೂ.ಕೊರತೆ ಉಂಟಾಗಿದೆ. ಈ ಕೊರತೆಯನ್ನು ಪೂರೈಸಲು ಗ್ರಾಹಕರಿಂದಲೇ ಸಂಗ್ರಹಿಸುವಂತೆ ಕೆಇಆರ್‍ಸಿ ಆದೇಶಿಸಿದೆ.




