Friday, October 30, 2026

ರಾಜ್ಯ ಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ : ವಿವಿಧ ಕ್ಷೇತ್ರಗಳ 71 ಸಾಧಕರ ಆಯ್ಕೆ

ಬೆಂಗಳೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ–2026ಕ್ಕೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ 71 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಜಾನಪದ, ಸಂಗೀತ, ನೃತ್ಯ, ಚಲನಚಿತ್ರ ಮತ್ತು ಕಿರುತೆರೆ, ಯಕ್ಷಗಾನ, ಬಯಲಾಟ, ರಂಗಭೂಮಿ, ಶಿಲ್ಪಕಲೆ, ಚಿತ್ರಕಲೆ, ಕರಕುಶಲ, ಕೃಷಿ, ಪರಿಸರ, ವಿಜ್ಞಾನ ಮತ್ತು ತಂತ್ರಜ್ಞಾನ, ಮಾಧ್ಯಮ, ಸಮಾಜಸೇವೆ, ವೈದ್ಯಕೀಯ, ಆಡಳಿತ, ಇಂಜಿನಿಯರಿಂಗ್, ಸಾಹಿತ್ಯ, ಶಿಕ್ಷಣ, ನ್ಯಾಯಾಂಗ, ಹೊರನಾಡು ಹಾಗೂ ಕ್ರೀಡಾ ಕ್ಷೇತ್ರಗಳ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಆಯ್ಕೆಯಾದವರಲ್ಲಿ ಉಡುಪಿ ಜಿಲ್ಲೆಯ ಯಕ್ಷಗಾನ ಕ್ಷೇತ್ರದ ಗೋಪಾಲ ಗಾಣಿಗ, ನ್ಯಾಯಾಂಗ ಕ್ಷೇತ್ರದ ಬಿ.ವಿ. ಆಚಾರ್ಯ, ಮಾಧ್ಯಮ ಮತ್ತು ಛಾಯಾಚಿತ್ರ ಕ್ಷೇತ್ರದ ವಿಶ್ವನಾಥ್ ಸುವರ್ಣ, ಸಾಹಿತ್ಯ ಕ್ಷೇತ್ರದ ಡಾ. ಇಂದಿರಾ ಹೆಗ್ಗಡೆ ಹಾಗೂ ಶಿಕ್ಷಣ ಕ್ಷೇತ್ರದ ಡಾ. ಫಾ. ಜೋಸೆಫ್ ಸಿ.ಸಿ. ಸೇರಿದ್ದಾರೆ.

ಜಾನಪದ ಕ್ಷೇತ್ರ: ದಾವಲಸಾಬ ಅತ್ತಾರ (ಕೊಪ್ಪಳ), ಗೌರಮ್ಮ (ಚಾಮರಾಜನಗರ), ಪಾಂಡಪ್ಪ ದೇವಲಪ್ಪ ಲಮಾಣಿ (ಗದಗ), ಎ.ಆರ್. ಸತ್ಯನಾರಾಯಣ (ಬೆಂಗಳೂರು ದಕ್ಷಿಣ), ಈರಣ್ಣ ರುದ್ರಾಕ್ಷಿ (ರಾಯಚೂರು), ಶಿವಲಿಂಗಪ್ಪ ಎಂ. (ಕೊಪ್ಪಳ) ಮತ್ತು ಸುರೇಶ್ ರಾಮಚಂದ್ರ ಜೋಶಿ (ವಿಜಯಪುರ).

ನೃತ್ಯ ಕ್ಷೇತ್ರ: ಡಾ. ಸತ್ಯನಾರಾಯಣ ರಾಜು (ಬೆಂಗಳೂರು ನಗರ).

ಚಲನಚಿತ್ರ/ಕಿರುತೆರೆ ಕ್ಷೇತ್ರ: ಕೆ. ವೆಂಕಟರಮಣ (ಬಾಬಜೀ) (ಧಾರವಾಡ), ಅಶೋಕ್ (ಬೆಂಗಳೂರು) ಮತ್ತು ಕೆ.ಎಸ್. ರವೀಂದ್ರನಾಥ್ (ಬೆಂಗಳೂರು ಗ್ರಾಮಾಂತರ).

ಯಕ್ಷಗಾನ ಕ್ಷೇತ್ರ: ಗೋಪಾಲ ಗಾಣಿಗ (ಉಡುಪಿ).

ಬಯಲಾಟ ಕ್ಷೇತ್ರ: ಹುಲಿಗೆಮ್ಮ.

ರಂಗಭೂಮಿ ಕ್ಷೇತ್ರ: ಡಿ. ಕೆಂಪಣ್ಣ (ಬೆಂಗಳೂರು ಗ್ರಾಮಾಂತರ), ಕೆ. ಜಯಲಕ್ಷ್ಮಿ ಪಾಟೀಲ್ (ಧಾರವಾಡ), ಜಿ.ಡಿ. ತಿಮ್ಮಯ್ಯ (ಚಿತ್ರದುರ್ಗ), ಕೆ.ಆರ್. ಸುಮತಿ (ಮೈಸೂರು), ಹೆಚ್.ವಿ. ಪುಟ್ಟವೀರಪ್ಪ (ಬೆಂಗಳೂರು ದಕ್ಷಿಣ) ಮತ್ತು ಹೊನ್ನ ನಾಯಕ (ಮೈಸೂರು).

ಶಿಲ್ಪಕಲೆ ಕ್ಷೇತ್ರ: ಜಿ.ಬಿ. ಹಂಸಾನಂದ ಆಚಾರ್ಯ (ವಿಜಯನಗರ) ಮತ್ತು ಕಾಡಪ್ಪ ಪರಶುರಾಮ ಗಾಡಿವಡ್ಡರ್ (ಬೆಳಗಾವಿ).

ಚಿತ್ರಕಲೆ ಕ್ಷೇತ್ರ: ಸಿ.ಬಿ. ಸೋಮಶೆಟ್ಟಿ (ಬೀದರ್).

ಕರಕುಶಲ ಕ್ಷೇತ್ರ: ಶಾಂತಾಬಾಯಿ (ಬೀದರ್).

ಕೃಷಿ ಕ್ಷೇತ್ರ: ಹೆಚ್.ಕೆ. ಶ್ರೀಕಂಠು (ಬೆಂಗಳೂರು ದಕ್ಷಿಣ) ಮತ್ತು ಬಿ.ಎ. ಚನ್ನಪ್ಪಗೌಡ (ಬೆಂಗಳೂರು).

ಪರಿಸರ ಕ್ಷೇತ್ರ: ಡಾ. ಸ್ವಾಮಿ ಆನಂದ್ (ಮೈಸೂರು).

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ: ಪ್ರೊ. ರಾಜಾಸಾಬ್ ಎ.ಎಚ್. (ಕಲಬುರಗಿ) ಮತ್ತು ಡಾ. ರಾಜಶೇಖರ ಮೂರ್ತಿ (ಕೆನಡಾ).

ಮಾಧ್ಯಮ ಕ್ಷೇತ್ರ: ಡಿ. ಉಮಾಪತಿ (ಚಿತ್ರದುರ್ಗ) ಮತ್ತು ಎಂ.ಪಿ. ಸುಶೀಲ (ಬೆಂಗಳೂರು ನಗರ).

ಮಾಧ್ಯಮ/ಛಾಯಾಚಿತ್ರ ಕ್ಷೇತ್ರ: ವಿಶ್ವನಾಥ್ ಸುವರ್ಣ (ದಕ್ಷಿಣ ಕನ್ನಡ).

ಸಂಕೀರ್ಣ ಕ್ಷೇತ್ರ: ರುಕ್ಕಿಣಿ ಬಾಯಿ ನಾಗಪ್ಪ ವಾಷ್ (ಬಾಗಲಕೋಟೆ), ಡಾ. ಡಿ.ಎಸ್. ಚೌಗಲೆ (ಬೆಳಗಾವಿ), ಬೆಳ್ಳೂರು ಶಂಕರನಾರಾಯಣ ದ್ವಾರಕನಾಥ್ (ಬೆಂಗಳೂರು), ರವಿ ಪ್ರವೀಣ್ ನೊರೋನಾ (ಬೆಂಗಳೂರು), ಎಂ.ಆರ್. ಜೈಶಂಕರ್ (ಚಿಕ್ಕಮಗಳೂರು), ಪ್ರಸಾದ್ ಬಿಡ್ಡಪ್ಪ (ಕೊಡಗು) ಮತ್ತು ವಾಸಪ್ಪ ಯಲ್ಲಪ್ಪ ಕುಸಗೂರ (ಹಾವೇರಿ).

ವಾಸ್ತುಶಾಸ್ತ್ರ ಕ್ಷೇತ್ರ: ಬಿ.ಪಿ. ಆರಾಧ್ಯ (ಬೆಂಗಳೂರು ದಕ್ಷಿಣ).

ಸಮಾಜಸೇವೆ ಕ್ಷೇತ್ರ: ಜಗದ್ಗುರು ಡಾ. ಅನ್ನದಾನೇಶ್ವರ ಮಹಾಶಿವಯೋಗಿ (ಗದಗ), ಬಸವರಾಜು (ಮಂಡ್ಯ), ಕಾಗೋಡು ತಿಮ್ಮಪ್ಪ (ಶಿವಮೊಗ್ಗ), ಡಾ. ಎಸ್.ಎಂ. ಎಲಿ (ದಾವಣಗೆರೆ), ಡಾ. ಜಿ.ಎಸ್. ಚಂದ್ರಶೇಖರ್ (ಉತ್ತರ ಕನ್ನಡ), ಡಾ. ಶಿವಾನಂದ ಮಹಾಸ್ವಾಮಿ (ಕಲಬುರಗಿ), ಕೃಷ್ಣಗೌಡ (ಚಿಕ್ಕಬಳ್ಳಾಪುರ), ಎ.ಸಿ. ಭಂಡಾರಿ (ದಕ್ಷಿಣ ಕನ್ನಡ) ಮತ್ತು ಗುರಮ್ಮ ಹಂಪಯ್ಯ ಸಂಕಿನಮಠ (ಬಾಗಲಕೋಟೆ).

ವೈದ್ಯಕೀಯ ಕ್ಷೇತ್ರ: ಡಾ. ವಿಜಯೇಂದ್ರ ಹೊನ್ನೂರಪ್ಪ (ಬೆಂಗಳೂರು) ಮತ್ತು ಡಾ. ಸುಜಾತ ಮಲ್ಲಿಕಾರ್ಜುನ ಜಾಲಿ (ಬೆಳಗಾವಿ).

ಆಡಳಿತ ಕ್ಷೇತ್ರ: ತೆರೆಸಾ ಭಟ್ಯಾಚಾರ್ಯ (ಬೆಂಗಳೂರು ನಗರ) ಮತ್ತು ಡಾ. ಕೆ.ಎಸ್. ಸೋಮಶೇಖರ್ (ನವದೆಹಲಿ).

ಇಂಜಿನಿಯರಿಂಗ್ ಕ್ಷೇತ್ರ: ಡಾ. ಕೆ.ಎನ್. ವೆಂಕಟ ಕೃಷ್ಣರಾವ್ (ಚಿಕ್ಕಬಳ್ಳಾಪುರ).

ಸಾಹಿತ್ಯ ಕ್ಷೇತ್ರ: ಡಾ. ಇಂದಿರಾ ಹೆಗ್ಗಡೆ (ದಕ್ಷಿಣ ಕನ್ನಡ), ವೀರಹನುಮಾನ್ (ರಾಯಚೂರು), ಪ್ರೊ. ನಾರಾಯಣಘಟ್ಟ (ನಾಹೋ) (ತುಮಕೂರು), ಸಿ.ಬಿ. ಮಹೇಶ್ವರಪ್ಪ ಚಟ್ನಳ್ಳಿ (ಚಿಕ್ಕಮಗಳೂರು), ಡಾ. ಕರಿಗೌಡ ಬೀಚನಹಳ್ಳಿ (ತುಮಕೂರು) ಮತ್ತು ಡಾ. ಸಿದ್ಧರಾಮ ಹೊನ್ನಲ್ (ಯಾದಗಿರಿ).

ಶಿಕ್ಷಣ ಕ್ಷೇತ್ರ: ಡಾ. ಫಾ. ಜೋಸೆಫ್ ಸಿ.ಸಿ. (ಕ್ರೈಸ್ಟ್ ವಿಶ್ವವಿದ್ಯಾಲಯದ ಉಪಕುಲಪತಿಗಳು, ಬೆಂಗಳೂರು ನಗರ), ಶಾಂತಪ್ಪ ಪಂ. ದಶವಂತ (ವಿಜಯಪುರ), ಸಂಗೀತಾ ಎನ್. ಕಟ್ಟಿಮನಿ (ಕಲಬುರಗಿ) ಮತ್ತು ಪ್ರೊ. ಎನ್.ಎಸ್. ರಂಗರಾಜು (ಮೈಸೂರು).

ನ್ಯಾಯಾಂಗ ಕ್ಷೇತ್ರ: ಬಿ.ವಿ. ಆಚಾರ್ಯ (ಉಡುಪಿ).

ಹೊರನಾಡು/ಹೊರದೇಶ ಕ್ಷೇತ್ರ: ರಮೇಶ್ ಆರ್. ಗೌಡ (ಅಮೆರಿಕ).

ಕ್ರೀಡಾ ಕ್ಷೇತ್ರ: ಎ.ವಿ. ರವಿ (ಜಿಮ್ ರವಿ) (ಕೋಲಾರ), ಡಾ. ಎ.ಬಿ. ಸುಬ್ಬಯ್ಯ (ಕೊಡಗು) ಮತ್ತು ಎಂ. ಗಿರೀಶ್ (ಬೆಂಗಳೂರು).

More like this
Related

ಅಂಡರ್-19 ಏಷ್ಯಾಕಪ್‌ಗೆ ಭಾರತದ ತಂಡ ಪ್ರಕಟ: ಸೆಹ್ವಾಗ್ ಪುತ್ರ ಆರ್ಯವೀರ್, ದ್ರಾವಿಡ್ ಪುತ್ರ ಅನ್ವಯ್‌ಗೆ ಸ್ಥಾನ

ನವದೆಹಲಿ: ಒಮಾನ್‌ನ ಮಸ್ಕತ್‌ನಲ್ಲಿ ನವೆಂಬರ್ 5ರಿಂದ 14ರವರೆಗೆ ನಡೆಯಲಿರುವ ಎಸಿಸಿ ಪುರುಷರ...

ಟಿ20 ಕ್ರಿಕೆಟ್‌ನಲ್ಲಿ ಇತಿಹಾಸ ಬರೆದ ಅರ್ಷದೀಪ್ ಸಿಂಗ್: 150 ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್

ಆಕ್ಲೆಂಡ್: ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತದ ಎಡಗೈ ವೇಗಿ...

ವಿನೇಶ್ ಫೋಗಟ್‌ಗೆ ಬಿಗ್ ರಿಲೀಫ್: ಎರಡು ವಾರಗಳಲ್ಲಿ ಶೋಕಾಸ್ ನೋಟಿಸ್‌ಗಳ ಬಗ್ಗೆ ನಿರ್ಧಾರ ಕೈಗೊಳ್ಳಲು WFIಗೆ ದೆಹಲಿ ಹೈಕೋರ್ಟ್ ಸೂಚನೆ

ನವದೆಹಲಿ: ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಸಂಬಂಧಿಸಿದ ಶೋಕಾಸ್ ನೋಟಿಸ್‌ಗಳ ಕುರಿತು...

ನ. 15ರೊಳಗೆ ಉಡುಪಿ ಜಿಲ್ಲಾಸ್ಪತ್ರೆ ಲೋಕಾರ್ಪಣೆ ದಿನಾಂಕ ಪ್ರಕಟಿಸಿ: ಆರೋಗ್ಯ ಸಚಿವರಿಗೆ ಶಾಸಕ ಯಶ್ಪಾಲ್ ಸುವರ್ಣ ಆಗ್ರಹ

ಉಡುಪಿ: ಜಿಲ್ಲೆಯ ಜನರ ಬಹುಕಾಲದ ಬೇಡಿಕೆಯಾಗಿರುವ ನೂತನ ಜಿಲ್ಲಾ ಆಸ್ಪತ್ರೆಯನ್ನು ಸಂಪೂರ್ಣ...

Copying is disabled on Udupi Digital News.