Saturday, June 13, 2026

ಧಾರಾವಾಹಿ ಚಿತ್ರೀಕರಣದ ಹೆಸರಿನಲ್ಲಿ ವಂಚನೆ ಆರೋಪ; ನಟ ಕಿಚ್ಚ ಸುದೀಪ್ ವಿರುದ್ಧ ದೂರು

ಬೆಂಗಳೂರು: ಧಾರಾವಾಹಿಯೊಂದರ ಚಿತ್ರೀಕರಣಕ್ಕಾಗಿ ಅಗ್ರಿಮೆಂಟ್ ಮಾಡಿಕೊಂಡು ಹಣ ಪಾವತಿಸದೇ ವಂಚಿಸಿದ್ದಾರೆ ಎಂದು ಆರೋಪಿಸಿ ನಟ ಕಿಚ್ಚ ಸುದೀಪ್ ಹಾಗೂ ಅವರ ಮ್ಯಾನೇಜರ್ ಚಂದ್ರಚೂಡ್ ವಿರುದ್ಧ ಕಾಫಿ ತೋಟದ ಇಬ್ಬರು ಮಾಲೀಕರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

ದೂರುದಾರ ದೀಪಕ್ ಅವರ ಹೇಳಿಕೆಯಂತೆ, ‘ವಾರಸ್ದಾರ’ ಎಂಬ ಧಾರಾವಾಹಿಗಾಗಿ ತಮ್ಮ ಮನೆ ಮತ್ತು ಕಾಫಿ ತೋಟದಲ್ಲಿ ಚಿತ್ರೀಕರಣ ನಡೆಸಲು ಎರಡು ವರ್ಷಗಳ ಅವಧಿಯ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಚಿತ್ರೀಕರಣ ಆರಂಭವಾದ ಕೆಲವೇ ದಿನಗಳಲ್ಲಿ ಅದನ್ನು ಸ್ಥಗಿತಗೊಳಿಸಲಾಯಿತು. ಜೊತೆಗೆ ಚಿತ್ರೀಕರಣದ ವೇಳೆ ಕಾಫಿ ತೋಟ ಮತ್ತು ಮರಗಳಿಗೆ ಹಾನಿ ಉಂಟಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಒಪ್ಪಂದದ ಪ್ರಕಾರ ರೂ.95 ಲಕ್ಷ ಪರಿಹಾರ ನೀಡಬೇಕಾಗಿದ್ದು, ಈ ಕುರಿತು ಈ ಹಿಂದೆ ಕಿಚ್ಚ ಸುದೀಪ್ ಹಾಗೂ ಚಂದ್ರಚೂಡ್ ವಿರುದ್ಧ ದೂರು ದಾಖಲಿಸಲಾಗಿತ್ತು. ಆ ಸಂದರ್ಭದಲ್ಲಿ ಸುದೀಪ್ ಅವರು ರೂ.60 ಲಕ್ಷ ಪಾವತಿಸುವ ಭರವಸೆ ನೀಡಿದ್ದರಿಂದ ದೂರು ಹಿಂಪಡೆಯಲಾಗಿತ್ತು ಎಂದು ದೀಪಕ್ ತಿಳಿಸಿದ್ದಾರೆ.

ಆದರೆ ನಂತರ ಕೇವಲ ರೂ.10 ಲಕ್ಷದ ಚೆಕ್ ನೀಡಲಾಗಿದ್ದು, ಉಳಿದ ಮೊತ್ತವನ್ನು ಪಾವತಿಸದೇ ವಂಚನೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೆ ನಟ ಕಿಚ್ಚ ಸುದೀಪ್ ಹಾಗೂ ಅವರ ಮ್ಯಾನೇಜರ್ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ.

ಈ ದೂರು ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

More like this
Related

ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ತಮಿಳುನಾಡು ಸಿಎಂ ವಿಜಯ್ ಭೇಟಿ, ವಿಶೇಷ ಪೂಜೆ ಸಲ್ಲಿಕೆ

ಉಡುಪಿ: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಶುಕ್ರವಾರ ಕೊಲ್ಲೂರು ಶ್ರೀ ಮೂಕಾಂಬಿಕಾ...

ಭಾರತದಲ್ಲಿ ಭೀತಿ ಸೃಷ್ಟಿಸಲು ದಾವೂದ್ ಗ್ಯಾಂಗ್‌ನಿಂದ ಟಾರ್ಗೆಟ್ ಹತ್ಯೆಗಳ ಸಂಚು; ಗುಪ್ತಚರ ಸಂಸ್ಥೆಗಳ ಎಚ್ಚರಿಕೆ

ನವದೆಹಲಿ: ದಾವೂದ್ ಇಬ್ರಾಹಿಂ ಸಿಂಡಿಕೇಟ್ ಭಾರತದಲ್ಲಿ ಭೀತಿ ಮತ್ತು ಆತಂಕದ ವಾತಾವರಣ...

ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ತಮಿಳುನಾಡು ಸಿಎಂ ವಿಜಯ್ ಭೇಟಿ; ಭದ್ರತೆ ಕಟ್ಟು ನಿಟ್ಟಿನದು

ಮಂಗಳೂರು: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಶುಕ್ರವಾರ ಕರ್ನಾಟಕದ ಉಡುಪಿ...

ಅಹಮದಾಬಾದ್ ವಿಮಾನ ದುರಂತ: 72 ಗಂಟೆಗಳ ತುರ್ತು ಕಾರ್ಯಾಚರಣೆ, ವಾರಗಳ ಕಾಲ ನಡೆದ ಡಿಎನ್‌ಎ ಗುರುತಿನ ಪ್ರಕ್ರಿಯೆ

ಅಹಮದಾಬಾದ್: ಏರ್ ಇಂಡಿಯಾ ವಿಮಾನ ದುರಂತದ ಮೊದಲ ವರ್ಷದ ಹಿನ್ನೆಲೆಯಲ್ಲಿ, ಅಹಮದಾಬಾದ್...

Copying is disabled on Udupi Digital News.