Saturday, June 13, 2026

ನಟಿ ಶುಭಾ ಪೂಂಜಾ ದಾಂಪತ್ಯದಲ್ಲಿ ಬಿರುಕು: ವಿಚ್ಛೇದನಕ್ಕೆ ಮೊರೆ ಹೋದ ದಂಪತಿ

ಯುಡಿ ನ್ಯೂಸ್ ಡಾಟ್ ಕಾಮ್

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟಿ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಶುಭಾ ಪೂಂಜಾ ಅವರ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, ದಾಂಪತ್ಯ ಜೀವನಕ್ಕೆ ಮುಕ್ತಾಯ ಹಾಡಲು ದಂಪತಿ ನಿರ್ಧರಿಸಿದ್ದಾರೆ. ಮದುವೆಯಾಗಿ ನಾಲ್ಕೇ ವರ್ಷಕ್ಕೆ ನಟಿ ಶುಭಾ ಪೂಂಜಾ ಹಾಗೂ ಅವರ ಪತಿ ಸುಮಂತ್ ಬಿಲ್ಲವ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಕೋರಿ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದಾರೆ.

ಕನ್ನಡಪರ ಹೋರಾಟಗಾರ ಹಾಗೂ ಉದ್ಯಮಿಯಾಗಿರುವ ಉಡುಪಿ ಮೂಲದ ಸುಮಂತ್ ಬಿಲ್ಲವ ಮತ್ತು ನಟಿ ಶುಭಾ ಪೂಂಜಾ ಅವರು ಕೆಲವು ವರ್ಷಗಳ ಕಾಲ ಪ್ರೀತಿಸುತ್ತಿದ್ದರು. ನಂತರ 2022ರ ಜನವರಿ 5 ರಂದು ಶುಭಾ ಪೂಂಜಾ ಅವರ ಸ್ವಂತ ಊರಿನಲ್ಲಿ ಅತ್ಯಂತ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಈಗ ಇವರಿಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ಪ್ರಕ್ರಿಯೆಯ ಭಾಗವಾಗಿ ಇಂದು ಅಥವಾ ಮುಂದಿನ ವಿಚಾರಣೆಯ ದಿನದಂದು ಶುಭಾ ಪೂಂಜಾ ಮತ್ತು ಸುಮಂತ್ ಬಿಲ್ಲವ ಫ್ಯಾಮಿಲಿ ಕೋರ್ಟ್‌ನಲ್ಲಿ ವಿಚಾರಣೆಗೆ ಖುದ್ದಾಗಿ ಹಾಜರಾಗುವ ಸಾಧ್ಯತೆಯಿದೆ. 

More like this
Related

ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ತಮಿಳುನಾಡು ಸಿಎಂ ವಿಜಯ್ ಭೇಟಿ, ವಿಶೇಷ ಪೂಜೆ ಸಲ್ಲಿಕೆ

ಉಡುಪಿ: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಶುಕ್ರವಾರ ಕೊಲ್ಲೂರು ಶ್ರೀ ಮೂಕಾಂಬಿಕಾ...

ಭಾರತದಲ್ಲಿ ಭೀತಿ ಸೃಷ್ಟಿಸಲು ದಾವೂದ್ ಗ್ಯಾಂಗ್‌ನಿಂದ ಟಾರ್ಗೆಟ್ ಹತ್ಯೆಗಳ ಸಂಚು; ಗುಪ್ತಚರ ಸಂಸ್ಥೆಗಳ ಎಚ್ಚರಿಕೆ

ನವದೆಹಲಿ: ದಾವೂದ್ ಇಬ್ರಾಹಿಂ ಸಿಂಡಿಕೇಟ್ ಭಾರತದಲ್ಲಿ ಭೀತಿ ಮತ್ತು ಆತಂಕದ ವಾತಾವರಣ...

ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ತಮಿಳುನಾಡು ಸಿಎಂ ವಿಜಯ್ ಭೇಟಿ; ಭದ್ರತೆ ಕಟ್ಟು ನಿಟ್ಟಿನದು

ಮಂಗಳೂರು: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಶುಕ್ರವಾರ ಕರ್ನಾಟಕದ ಉಡುಪಿ...

ಅಹಮದಾಬಾದ್ ವಿಮಾನ ದುರಂತ: 72 ಗಂಟೆಗಳ ತುರ್ತು ಕಾರ್ಯಾಚರಣೆ, ವಾರಗಳ ಕಾಲ ನಡೆದ ಡಿಎನ್‌ಎ ಗುರುತಿನ ಪ್ರಕ್ರಿಯೆ

ಅಹಮದಾಬಾದ್: ಏರ್ ಇಂಡಿಯಾ ವಿಮಾನ ದುರಂತದ ಮೊದಲ ವರ್ಷದ ಹಿನ್ನೆಲೆಯಲ್ಲಿ, ಅಹಮದಾಬಾದ್...

Copying is disabled on Udupi Digital News.