Tuesday, September 15, 2026

ಗಲ್ಲಾಪೆಟ್ಟಿಗೆಯಲ್ಲಿ ‘ಧುರಂಧರ್’ ಅಬ್ಬರ; ‘ಜವಾನ್’, ‘ಪಠಾಣ್’, ‘ಕೆಜಿಎಫ್: ಅಧ್ಯಾಯ 2’ ಹಿಂದಿಕ್ಕಿದ ರಣವೀರ್ ಸಿಂಗ್ ನಟನೆಯ ಚಿತ್ರ!

ಆದಿತ್ಯ ಧಾರ್ ನಿರ್ದೇಶನದ, ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಚಿತ್ರ ಪ್ರತಿದಿನ ಒಂದಲ್ಲ ಒಂದು ದಾಖಲೆಗಳನ್ನು ಮುರಿಯುತ್ತಿದೆ. ಈ ಚಿತ್ರವು ಇದೀಗ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ₹800 ಕೋಟಿ ಗಳಿಕೆ ಮಾಡಿದ ಮೊದಲ ಹಿಂದಿ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಜಿಯೋ ಸ್ಟುಡಿಯೋಸ್, ‘ಧುರಂಧರ್ ದಿನಚರಿ: ಎದ್ದೇಳಿ. ದಾಖಲೆಗಳನ್ನು ಬರೆಯಿರಿ. ಪುನರಾವರ್ತಿಸಿ’ ಎಂದು ಬರೆದಿದೆ. ಭಾರತದಲ್ಲಿ ₹806.80 ಕೋಟಿ ಗಳಿಸುವ ಮೂಲಕ ಈ ಚಿತ್ರವು ಹಿಂದಿ ಸಿನಿಮಾ ರಂಗದಲ್ಲಿ ಹೊಸ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದೆ ಎಂದು ನಿರ್ಮಾಣ ಸಂಸ್ಥೆ ಭಾನುವಾರ ಘೋಷಿಸಿದೆ.

ಚಿತ್ರವು 1ನೇ ವಾರದಲ್ಲಿ ₹218 ಕೋಟಿ ಗಳಿಸಿತು. ನಂತರ 2ನೇ ವಾರದಲ್ಲಿ ₹261.5 ಕೋಟಿ ರೂ., 3ನೇ ವಾರದಲ್ಲಿ ₹189.3 ಕೋಟಿ ಮತ್ತು 4ನೇ ವಾರದಲ್ಲಿ ₹115.70 ಕೋಟಿ ಗಳಿಸಿತು. 29ನೇ ದಿನ, ಚಿತ್ರವು ₹9.70 ಕೋಟಿ ಗಳಿಸಿದರೆ, 30ನೇ ದಿನ ಇನ್ನೂ ₹12.60 ಕೋಟಿ ಗಳಿಸಿದೆ.

ಆದಾಗ್ಯೂ, ಫಿಲ್ಮ್ ಟ್ರೇಡ್ ಪೋರ್ಟಲ್ Sacnilk ಪ್ರಕಾರ, ಈ ಚಿತ್ರದ ದೇಶೀಯ ಕಲೆಕ್ಷನ್ ಇನ್ನೂ ₹759 ಕೋಟಿ ಆಗಿದೆ.

ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ₹ 1240 ಕೋಟಿ ಗಳಿಸಿದೆ. ಭಾರತದಲ್ಲಿ ₹968 ಕೋಟಿ ಗಳಿಸಿದೆ ಎಂದು ನಿರ್ಮಾಣ ಸಂಸ್ಥೆ ಇಂದು ಮತ್ತೊಂದು ಪೋಸ್ಟ್ ಹಂಚಿಕೊಂಡಿದೆ. ಧುರಂಧರ್ ಈಗಾಗಲೇ ಶಾರುಖ್ ಖಾನ್ ಅವರ ಜವಾನ್ (₹1,163.62 ಕೋಟಿ), ಪಠಾಣ್ (₹1,069.85 ಕೋಟಿ) ಮತ್ತು ಯಶ್ ನಟನೆಯ ಕೆಜಿಎಫ್: ಅಧ್ಯಾಯ 2 (₹1,215 ಕೋಟಿ) ಚಿತ್ರಗಳನ್ನು ಹಿಂದಿಕ್ಕಿದ್ದು, ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಕಂಡ ಐದನೇ ಚಿತ್ರವಾಗಿದೆ.

Ranveer Singh in Dhurandhar

ಕಾರ್ತಿಕ್ ಆರ್ಯನ್ ಮತ್ತು ಅನನ್ಯ ಪಾಂಡೆ ನಟನೆಯ ತು ಮೇರಿ ಮೈ ತೇರಾ ಮೈ ತೇರಾ ತು ಮೇರಿ, ಹಾಲಿವುಡ್ ಚಿತ್ರ ಅವತಾರ್: ಫೈರ್ ಅಂಡ್ ಆಶ್ ಮತ್ತು ಅಗಸ್ತ್ಯ ನಂದ ಅವರ ಇಕ್ಕಿಸ್ ನಂತಹ ಹೊಸ ಚಿತ್ರಗಳ ಬಿಡುಗಡೆ ಹೊರತಾಗಿಯೂ ಗಲ್ಲಾಪೆಟ್ಟಿಗೆಯಲ್ಲಿ ಧುರಂಧರ್ ಓಟ ಇನ್ನೂ ಮುಂದುವರೆದಿದೆ. ತು ಮೇರಿ ಮೈ ತೇರಾ ಮೈ ತೇರಾ ತು ಮೇರಿ ಬಿಡುಗಡೆಯಾದ 10 ದಿನಗಳಲ್ಲಿ ₹40 ಕೋಟಿ ಗಳಿಸಿದರೆ, ಜನವರಿ 1 ರಂದು ಬಿಡುಗಡೆಯಾದ ಇಕ್ಕಿಸ್ ಮೂರು ದಿನಗಳಲ್ಲಿ ₹13 ಕೋಟಿ ಗಳಿಸಿದೆ. ಅವತಾರ್: ಆಶ್ ಅಂಡ್ ಫೈರ್ ಬಿಡುಗಡೆಯಾದ 16 ದಿನಗಳಲ್ಲಿ ₹165.9 ಕೋಟಿ ಗಳಿಸಿದೆ.

More like this
Related

ಕಂಡ್ಲೂರು ಹಳೆ ಸೇತುವೆ ನೆಲಸಮದ ಹುನ್ನಾರದ ಹಿಂದೆ ಭ್ರಷ್ಟಾಚಾರದ ಅನುಮಾನ : ಕೆ. ವಿಕಾಸ್ ಹೆಗ್ಡೆ

ಕುಂದಾಪುರ ತೀರ್ಥಹಳ್ಳಿ ಸಂಪರ್ಕ ಮಾಡುವ ರಾಜ್ಯ ಹೆದ್ದಾರಿ ಹಾದು ಹೋಗುವ ವರಾಹಿ...

 ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದ ಪವಿತ್ರ ಪಾಣಿಯಾಗಿ ಜನಾರ್ದನ್ ಕೊಡವೂರು ನೇಮಕ

ಉಡುಪಿ: ಇತಿಹಾಸ ಪ್ರಸಿದ್ಧ ಮಹತೊಬಾರ ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದ...

ಇತರರಿಗೆ ಸಹಾಯ ಮಾಡುವ ಪ್ರತಿಯೊಬ್ಬರಲ್ಲಿ ದೇವರನ್ನು ಕಾಣಬಹುದು : ಬಿಷಪ್ ಲೆಸ್ಲಿ ಸಿ ಡಿಸೋಜಾ

ಉಡುಪಿ: ನಾವು ಕಣ್ಣಿನಿಂದ ದೇವರನ್ನು ನೋಡದೇ ಇದ್ದರೂ, ಕಷ್ಟಕಾಲದಲ್ಲಿ ನಮಗೆ ಸಹಾಯ...

ಬಿಜೆಪಿ ಅಭ್ಯರ್ಥಿಗೆ ಕೇವಲ 1 ಮತ, ಆಘಾತಕಾರಿ ಫಲಿತಾಂಶ: ಹೆಂಡತಿ, ಅಪ್ಪ, ಅಮ್ಮನ ವೋಟ್ ಯಾರಿಗೆ?

ಜೈಪುರ: ರಾಜಸ್ಥಾನ ನಾಗರಿಕ ಚುನಾವಣೆಯ ಫಲಿತಾಂಶದ ನಡುವೆ ಆಘಾತಕಾರಿ ಮತ್ತು ಆಸಕ್ತಿದಾಯಕ...

Copying is disabled on Udupi Digital News.