ಕುಂದಾಪುರ : ಉಡುಪಿ ಧರ್ಮಪ್ರಾಂತ್ಯದ ಐತಿಹಾಸಿಕ ಹಿನ್ನೆಲೆಯುಳ್ಳ ಕುಂದಾಪುರ ರೋಜರಿ ಮಾತೆಯ ಚರ್ಚ್ನ 456ನೇ ವಾರ್ಷಿಕ ಹಬ್ಬವನ್ನು ಬುಧವಾರ ಭಕ್ತಿಭಾವದಿಂದ ಆಚರಿಸಲಾಯಿತು.
ಹಬ್ಬದ ಅಂಗವಾಗಿ ನಡೆದ ವಿಶೇಷ ಬಲಿಪೂಜೆಯಲ್ಲಿ ಚರ್ಚ್ನ ಧರ್ಮಗುರು ಅ.ವ. ಪೌಲ್ ರೇಗೊ ಹಾಗೂ ಸಹಾಯಕ ಧರ್ಮಗುರು ರೋಲ್ವಿನ್ ಫೆರ್ನಾಂಡಿಸ್ ಭಾಗವಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಧರ್ಮಗುರುಗಳು, ಕುಟುಂಬದ ಪ್ರಾರ್ಥನೆಯಲ್ಲಿ ರೋಜಾರಿ ಮಾತೆಗೆ ವಿಶೇಷ ಸ್ಥಾನವಿದೆ. ಜೀವನದಲ್ಲಿ ಯಾವುದೇ ಸಂಕಷ್ಟಗಳು ಎದುರಾದರೂ ರೋಜಾರಿ ಮಾತೆ ನಮ್ಮನ್ನು ಕಾಪಾಡುತ್ತಾಳೆ ಎಂಬ ನಂಬಿಕೆಯಿಂದ ಭಕ್ತರು ಪ್ರಾರ್ಥಿಸುತ್ತಾರೆ. ಮುಂದೆಯೂ ಕುಟುಂಬದ ಪ್ರಾರ್ಥನೆಯಲ್ಲಿ ರೋಜಾರಿ ಮಾತೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಕರೆ ನೀಡಿದರು.
ಬಲಿಪೂಜೆಯ ಬಳಿಕ ಭಕ್ತರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.




