Tuesday, July 7, 2026

ಬ್ರಹ್ಮಾವರ: ಗಾಳಿ-ಮಳೆಗೆ ಶಾಲೆಯ ಹೆಂಚು ಕುಸಿದು ವಿದ್ಯಾರ್ಥಿನಿಗೆ ಗಾಯ

ಬ್ರಹ್ಮಾವರ: ಭಾರೀ ಗಾಳಿ-ಮಳೆಗೆ ಬ್ರಹ್ಮಾವರದ ಬೋರ್ಡ್ ಪ್ರೈಮರಿ ಶಾಲೆಯಲ್ಲಿ ಹೆಂಚು ಕುಸಿದು ವಿದ್ಯಾರ್ಥಿನಿ ಗಾಯಗೊಂಡ ಘಟನೆ ನಡೆದಿದೆ.

ಇಂದು ಬೆಳಗ್ಗೆ ಭಾರೀ ಗಾಳಿ ಮಳೆ ಸುರಿದು, ಬ್ರಹ್ಮಾವರ ಬೋರ್ಡ್ ಪ್ರೈಮರಿ ಶಾಲೆಯ ಹೆಂಚು ಏಕಾಏಕಿ ಕುಸಿದಿದೆ. ವಿದ್ಯಾರ್ಥಿನಿಯೊಬ್ಬಳ ಕಾಲಿಗೆ ಗಾಯಗಳಾಗಿದ್ದು, ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸ್ಥಳಕ್ಕೆ ಸಂಬಂಧಿತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.

ಭಾರೀ ಮಳೆಯ ಹಿನ್ನೆಲೆಯಲ್ಲಿ ಹಳೆಯ ಶಾಲಾ ಕಟ್ಟಡಗಳ ಸುರಕ್ಷತೆ ಬಗ್ಗೆ ಪೋಷಕರು ಹಾಗೂ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದು, ಶಾಲಾ ಕಟ್ಟಡಗಳ ಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ದುರಸ್ತಿ ಕಾರ್ಯಗಳನ್ನು ಶೀಘ್ರ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

More like this
Related

‘ವಾಲ್ಬೆಲ್ಲ’ ಸಮಾರೋಪ: ಸುಜ್ಞಾನ ಅಂಗಳದಲ್ಲಿ ಸಾಂಸ್ಕೃತಿಕ ವೈಭವ

ಕುಂದಾಪುರ: ಕೇರಳದ ತ್ರಿಶೂರ್ ನನ್ನ ಹುಟ್ಟೂರಾದರೂ, ಕುಂದಾಪುರದ ಜನರು ನನ್ನನ್ನು ತಮ್ಮವನಾಗಿ...

ರೆಡ್ ಅಲರ್ಟ್ ಹಿನ್ನೆಲೆ: ಜು. 8ರಂದು ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಮಂಗಳೂರು: ಭಾರತೀಯ ಹವಾಮಾನ ಇಲಾಖೆ (IMD) ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ...

ಉಡುಪಿ ಜಿಲ್ಲೆಯಲ್ಲಿ ಶಾಲಾ ವಾಹನಗಳ ವಿಶೇಷ ತಪಾಸಣೆ: 203 ಪ್ರಕರಣ ದಾಖಲು; ₹71 ಸಾವಿರ ದಂಡ ವಸೂಲಿ

ಉಡುಪಿ: ಶಾಲಾ ಮಕ್ಕಳ ಸುರಕ್ಷತೆ ಹಾಗೂ ರಸ್ತೆ ಸುರಕ್ಷತಾ ನಿಯಮಗಳ ಪರಿಣಾಮಕಾರಿ...

ಕರ್ನಾಟಕ SIR ವಿವಾದ: ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಶಾಲಾ ಮಕ್ಕಳ ಬಳಕೆ ಆರೋಪ; ತನಿಖೆಗೆ ಬೆಳಗಾವಿ ಡಿಸಿ ಆದೇಶ

ಬೆಳಗಾವಿ: ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (Special...

Copying is disabled on Udupi Digital News.