Tuesday, November 3, 2026

ಬೈಂದೂರು ಶಾಸಕರ ರೈತ ವಿರೋಧಿ ನಡೆ : ಕೆ. ವಿಕಾಸ್ ಹೆಗ್ಡೆ

ರಾಜ್ಯದಲ್ಲಿ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸದಸ್ಯರು ಇಲ್ಲದೆ ಅವರ ಅಧಿಕಾರವನ್ನು ಅನುಭವಿಸುತ್ತಿರುವ ರಾಜ್ಯದ ಶಾಸಕರುಗಳು ಕೇವಲ ಅಧಿಕಾರ ವೀಕೆಂದ್ರಿಕರಣದ ಬಗ್ಗೆ ಮಾತನಾಡುತ್ತಾರೆ ಬಿಟ್ಟರೆ ಅಧಿಕಾರ ಹಂಚಿಕೆಗೆ ಯಾವೊಬ್ಬ ಶಾಸಕರು ತಯಾರು ಇಲ್ಲಾ. ಇದರ ಇನ್ನೊಂದು ಭಾಗವೆ ಬೈಂದೂರು ವಿಧಾನ ಸಭಾ ಕ್ಷೇತ್ರದ ಅಕ್ರಮ-ಸಕ್ರಮ ಹೆಚ್ಚುವರಿ ಸಮಿತಿ ವಿರುದ್ಧ ಬೈಂದೂರು ಶಾಸಕರು ನ್ಯಾಯಾಲಯದ ಮೊರೆ ಹೋದದ್ದು ಎಂದು ಕೆಪಿಸಿಸಿ ಸಂಯೋಜಕ ಕೆ. ವಿಕಾಸ್ ಹೆಗ್ಡೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಅಕ್ರಮ-ಸಕ್ರಮ ಯೋಜನೆ ಜಾರಿಗೆ ತಂದದ್ದು ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪನವರು. ಈ ಯೋಜನೆಯನ್ನು ಸಮರ್ಪಕವಾಗಿ ತಮ್ಮ ಕ್ಷೇತ್ರದಲ್ಲಿ ಅನುಷ್ಠಾನ ಮಾಡಿ ಸಾವಿರಾರು ರೈತರಿಗೆ ಭೂಮಿಯ ಹಕ್ಕು ನೀಡಿದವರು ಹಿಂದಿನ ಬೈಂದೂರು ಶಾಸಕರಾದ ಕೆ. ಗೋಪಾಲ ಪೂಜಾರರು. ಅದೆಷ್ಟೋ ರೈತರಿಗೆ ಭೂಮಿಯ ಹಕ್ಕು ನೀಡಿದ ಮಾಜಿ ಶಾಸಕರು ಹೆಚ್ಚುವರಿ ಅಕ್ರಮ-ಸಕ್ರಮ ಸಮಿತಿ ರಚನೆ ಮಾಡಿದ್ದನ್ನು ಹಾಲಿ ಬೈಂದೂರು ಶಾಸಕರು ವಿರೋಧಿಸಿದ್ದು ಅವರ ಅಧಿಕಾರ ವೀಕೆಂದ್ರಿಕರಣದ ವಿರೋಧಿ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಅದೆಷ್ಟೋ ವರ್ಷಗಳಿಂದ ಅರ್ಜಿ ನಮೂನೆ: 50, 53 ಮತ್ತು 57 ರ ಅಡಿ ಭೂ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿ ಇಂದಿಗೂ ಭೂ ಮಂಜೂರಾತಿ ಆಗದೆ ಇರುವ ಸಾವಿರಾರು ಅರ್ಜಿದಾರರಿಗೆ ನ್ಯಾಯ ಕೊಡಬೇಕಾದ ಹಾಲಿ ಶಾಸಕರು ಅಧಿಕಾರದಾಸೆಗೆ ಹೆಚ್ಚುವರಿ ಸಮಿತಿ ವಿರುದ್ಧದ ನಡೆ ಅವರ ರೈತ ವಿರೋಧಿ ಕ್ರಮವಾಗಿದೆ. ಶಾಸಕರಿಗೆ ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿದ ಫಲಾನುಭವಿಗಳ ಬಗ್ಗೆ ಕಾಳಜಿ ಇದ್ದರೆ ಹೆಚ್ಚುವರಿ ಸಮಿತಿ ವಿರುದ್ಧದ ತಮ್ಮ ಹೋರಾಟ ಕೈಬಿಟ್ಟು ರೈತರ ಪರ ನಿಲ್ಲಬೇಕು ಎಂದು ಅವರು ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.

More like this
Related

‘ಭಿನ್ನಾಭಿಪ್ರಾಯ ಸಾರ್ವಜನಿಕವಾಗಿ ಹೊರಬರಬಾರದು’: ಟಾಟಾ ಮಂಡಳಿ ಸಂಘರ್ಷದ ಕುರಿತು ನಿರ್ಮಲಾ ಸೀತಾರಾಮನ್

ಟಾಟಾ ಸನ್ಸ್ ಮತ್ತು ಅದರ ಅತಿದೊಡ್ಡ ಷೇರುದಾರರಾದ ಟಾಟಾ ಟ್ರಸ್ಟ್ಸ್ ನಡುವಿನ...

ಬೈಂದೂರು ಎಂಸಿಸಿ ಬ್ಯಾಂಕ್‌ಗೆ ನಕಲಿ ದಾಖಲೆ ನೀಡಿ ₹75 ಲಕ್ಷಕ್ಕೂ ಅಧಿಕ ಸಾಲ ವಂಚನೆ: ಮೂರು ಪ್ರತ್ಯೇಕ ಪ್ರಕರಣ ದಾಖಲು

ಬೈಂದೂರು: ನಕಲಿ ವಾಹನ ದಾಖಲೆಗಳು, ವಿಮಾ ಪಾಲಿಸಿಗಳು ಹಾಗೂ ಇತರ ದಾಖಲೆಗಳನ್ನು...

ನ. 29ರಂದು ಸೋದೆ ಮಠದ ಬಾಳೆ ಮುಹೂರ್ತ: ಪೂರ್ವಸಿದ್ಧತೆ ಕುರಿತು ಶಿಷ್ಯವರ್ಗದ ಸಭೆ

ಉಡುಪಿ: ಸೋದೆ ಶ್ರೀ ವಾದಿರಾಜ ಮಠದ ಮುಂಬರುವ ಪರ್ಯಾಯದ ಪೂರ್ವಭಾವಿ ಧಾರ್ಮಿಕ...

Copying is disabled on Udupi Digital News.