Tuesday, November 17, 2026

ಸಿನಿಮಾ ನಟರು ಸಿಗರೇಟ್ ಹಿಡಿದು ಪೋಸ್ ಕೊಡುವುದನ್ನು ನೋಡಿ ಯುವ ಜನತೆ ಹಾಳಾಗಬೇಡಿ: ಯು.ಟಿ ಖಾದರ್ ಕಿವಿಮಾತು

ಬೆಂಗಳೂರು: ಸಿನಿಮಾಗಳಲ್ಲಿ ನಟರು ಸಿಗರೇಟ್ ಹಿಡಿದು ಪೋಸ್ ಕೊಡುವುದನ್ನು ನೋಡಿ ಯುವಜನತೆ ಪ್ರೇರಣೆಗೊಂಡು ದಾರಿ ತಪ್ಪಬಾರದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಆಯೋಜಿಸಲಾಗಿದ್ದ ತಂಬಾಕು ಮುಕ್ತ ಯುವ ಅಭಿಯಾನ 4.0 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಯುವಜನತೆಗೆ ಕಿವಿಮಾತು ಹೇಳಿದ ಯು.ಟಿ. ಖಾದರ್, ಟಿವಿ ಮತ್ತು ಸಿನಿಮಾಗಳಲ್ಲಿ ನಟರು ಕೇವಲ ಸಿಗರೇಟ್ ಹಿಡಿದುಕೊಂಡು ಪೋಸ್ ಕೊಡುತ್ತಾರೆ.

ಅದನ್ನು ನೋಡಿ ಯುವಜನತೆ ಹಾಳಾಗಬೇಡಿ. ನಟರು ತೆರೆಯ ಮೇಲೆ ಪೋಸ್ ಕೊಟ್ಟರು ಅಂತ ನೀವು ಸಿಗರೇಟ್ ಸೇದಲು ಶುರು ಮಾಡಿದರೆ, ಮುಂದೆ ನೀವು ಆಸ್ಪತ್ರೆಯ ಐಸಿಯು (ICU) ಸೇರಬೇಕಾಗುತ್ತದೆ. ಅಂತಹ ದುಶ್ಚಟಗಳ ವಿಚಾರದಲ್ಲಿ ಸಿನಿಮಾ ನಟರನ್ನು ಎಂದಿಗೂ ಮಾದರಿಯಾಗಿ ತೆಗೆದುಕೊಳ್ಳಬೇಡಿ” ಎಂದು ಎಚ್ಚರಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಅವರು, ನಾನು ಯಾವುದೇ ನಿರ್ದಿಷ್ಟ ಸಿನಿಮಾ ನಟರ ಬಗ್ಗೆ ಮಾತನಾಡಿಲ್ಲ. ಇಲ್ಲಿನ ಯಾವ ನಟರೂ ಆ ರೀತಿ ಮಾಡುತ್ತಿಲ್ಲ, ಕಾಣಿಸುತ್ತಲೂ ಇಲ್ಲ. ಆದರೆ, ಹಿಂದಿ ಅಥವಾ ಇಂಗ್ಲಿಷ್ ಸಿನಿಮಾಗಳು, ನಾಟಕ ಹಾಗೂ ಇತರ ಮಾಧ್ಯಮಗಳಲ್ಲಿ ಕೆಲವೊಮ್ಮೆ ಸೆಲೆಬ್ರಿಟಿಗಳು ತಂಬಾಕು ಬಳಸುವ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ಯುವಜನತೆ ಅದನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡು, ಅದು ಅಭ್ಯಾಸವಾಗಿ ಆಸ್ಪತ್ರೆ ಸೇರಿದರೆ ಅವರ ಕುಟುಂಬಕ್ಕೆ ಯಾರು ದಿಕ್ಕಾಗುತ್ತಾರೆ? ಸೆಲೆಬ್ರಿಟಿಗಳ ಪ್ರಭಾವದಿಂದ ಯುವಕರು ಹಾಳಾಗಬಾರದು ಎಂಬುದಷ್ಟೇ ನನ್ನ ಕಾಳಜಿ ಎಂದು ಸ್ಪಷ್ಟಪಡಿಸಿದರು.

ಐಟಿ-ಬಿಟಿ ಕಂಪನಿಗಳಲ್ಲಿ ಸ್ಮೋಕಿಂಗ್ ಝೋನ್‌ಗಳಿಗೆ ಕಡಿವಾಣ ಹಾಕುವ ಕುರಿತು ಪ್ರತಿಕ್ರಿಯಿಸಿದ ಅವರು, ಎಷ್ಟೇ ಜಾಗೃತಿ ಮೂಡಿಸಿದರೂ ಕೆಲವರು ಹಳೆಯ ಅಭ್ಯಾಸದಿಂದ ಧೂಮಪಾನ ಮಾಡುತ್ತಿರುತ್ತಾರೆ. ಲಕ್ಷಾಂತರ ಉದ್ಯೋಗಿಗಳು ಇರುವ ಕಡೆ ಸಂಪೂರ್ಣ ನಿಯಂತ್ರಣ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಪ್ರತ್ಯೇಕ ಝೋನ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಆದರೂ ಸ್ಮೋಕಿಂಗ್ ಝೋನ್‌ಗಳಿಗೆ ಕಡಿವಾಣ ಹಾಕುವ ಬಗ್ಗೆ ಸಲಹೆ ಬಂದಿದ್ದು, ಈ ಕುರಿತು ಪರಿಶೀಲಿಸಲಾಗುವುದು ಎಂದರು.

More like this
Related

ಐಪಿಎಲ್‌ ಗೆ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ: 2027ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೆಂಟರ್ ಆಗಿ ಹೊಸ ಜವಾಬ್ದಾರಿ

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ದಿಗ್ಗಜ ಆಟಗಾರ, ಚೆನ್ನೈ ಸೂಪರ್...

ದೆಹಲಿಯಲ್ಲಿ ಭೀಕರ ದುರಂತ: ಮನೆಯ ಮೇಲ್ಛಾವಣಿ ಕುಸಿದು ಮಗು ಸೇರಿ ಇಬ್ಬರು ಸಾವು

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಂಗಳವಾರ ಮುಂಜಾನೆ ಭೀಕರ ಅವಘಡ ಸಂಭವಿಸಿದೆ....

ವಿದೇಶಿ ನೆಲದಲ್ಲಿ ಸಿಖ್ ಸಂಪ್ರದಾಯಕ್ಕೆ ಗೌರವ: ಐತಿಹಾಸಿಕ ಗುರುದ್ವಾರಕ್ಕೆ ಮೋದಿ ಭೇಟಿ

ಫಿಲಿಪೈನ್ಸ್: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಫಿಲಿಪೈನ್ಸ್ ಪ್ರವಾಸದ ವೇಳೆ...

ಮಂಗಳೂರು | ವಿಮಾನದಲ್ಲಿ ತಾಂತ್ರಿಕ ದೋಷ: ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ದುರಂತ

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೈಲಟ್​ನ ಸಮಯ ಪ್ರಜ್ಞೆಯಿಂದ ಭಾರೀ...

Copying is disabled on Udupi Digital News.