Tuesday, November 17, 2026

ಮಂಗಳೂರು | ವಿಮಾನದಲ್ಲಿ ತಾಂತ್ರಿಕ ದೋಷ: ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ದುರಂತ

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೈಲಟ್​ನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ ಎಂದು ತಿಳಿದು ಬಂದಿದೆ. ವಿಮಾನದಲ್ಲಿದ್ದ 236 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ವಿಮಾನವು ಟೇಕ್ ಆಫ್ ಆಗುವ ವೇಳೆ ಇಂಜಿನ್​ನಲ್ಲಿ ದೋಷ ಕಂಡು ಬಂದಿತ್ತು ಎನ್ನಲಾಗಿದೆ. ತಕ್ಷಣ ಎಚ್ಚೆತ್ತ ವಿಮಾನದ ಪೈಲಟ್​ ಸಮಯ ಪ್ರಜ್ಞೆ ಮೆರೆದ ಪರಿಣಾಮ ಟೇಕ್ ಆಫ್ ಆಗುವ ಕೊನೆ ಕ್ಷಣದಲ್ಲಿ ಬ್ರೇಕ್ ಹಾಕಿದ್ದು, ಭಾರೀ ಅನಾಹುತ ತಪ್ಪಿದೆ.

ಸೋಮವಾರ ಸಂಜೆ ಮಂಗಳೂರಿನಿಂದ ಇಂಡಿಗೋ ವಿಮಾನವು ಬೆಂಗಳೂರಿಗೆ ತೆರಳಲು ಸಿದ್ಧತೆ ನಡೆಸಿತ್ತು. ವಿಮಾನದಲ್ಲಿ 229 ಪ್ರಯಾಣಿಕರು ಮತ್ತು 7 ಮಂದಿ ವಿಮಾನದ ಸಿಬ್ಬಂದಿಗಳಿದ್ದರು. ರನ್ ವೇಯಲ್ಲಿ ಟೇಕ್ ಆಫ್ ಆಗುವ ವೇಳೆ ವಿಮಾನದ ಇಂಜಿನ್​ನಲ್ಲಿ ತಾಂತ್ರಿಕ ದೋಷವಿರುವುದು ಪೈಲಟ್​‌ನ ಗಮನಕ್ಕೆ ಬಂತು ಎನ್ನಲಾಗಿದೆ. ತಕ್ಷಣ ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ನಿಯಂತ್ರಿಸುವಲ್ಲಿ ಯಶಸ್ವಿಯಾದರು ಎಂದು ತಿಳಿದುಬಂದಿದೆ. ಬಳಿಕ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿದ್ದಾರೆ. ಇಂಡಿಗೋ ಸಂಸ್ಥೆಯು ಪ್ರಯಾಣಿಕರಿಗೆ ಬೇರೆ ವಿಮಾನದ ವ್ಯವಸ್ಥೆ ಮಾಡಿದೆ.

More like this
Related

ಬಾಲ್ಯದ ಕ್ರಿಕೆಟ್ ಅಂಗಳದಿಂದ ಉರಿಯುವ ಚಿತೆಯವರೆಗೆ: ಊರ ಮಗನ ಅಗಲಿಕೆಗೆ ಮಿಡಿದ ಪತ್ರಕರ್ತನ ಅಕ್ಷರಗಳು!

ಏಕೈಕ ಪುತ್ರನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಕಂಡು ಮನಕಲಕಿದ ಪತ್ರಕರ್ತನ ಭಾವನಾತ್ಮಕ...

ಹಿಂದಿನ ಸರಕಾರಗಳು ಸ್ಥಾಪಿಸಿದ ಸಂಸ್ಥೆಗಳನ್ನು ಬಿಜೆಪಿ ಮಾರಾಟ ಮಾಡಿ ಯುವಜನರ ಉದ್ಯೋಗ ಕಸಿದುಕೊಂಡಿದೆ : ಜೆ ಪಿ ಹೆಗ್ಡೆ

ಉಡುಪಿ: ಹಿಂದಿನ ಸರಕಾರಗಳು ಸ್ಥಾಪಿಸಿದ ಸಂಸ್ಥೆಗಳು, ಉದ್ದಿಮೆಗಳನ್ನು ಮಾರಾಟ ಮಾಡಿರುವ ಬಿಜೆಪಿ...

ಓಲಾ, ಊಬರ್ ಕ್ಯಾಬ್‌ಗಳಿಗೆ ಮೀಟರ್ ಕಡ್ಡಾಯ: ನಿಯಮ ಉಲ್ಲಂಘಿಸಿದರೆ ವಾಹನ ಸೀಜ್

ಬೆಂಗಳೂರು: ನಗರದಲ್ಲಿ ಓಲಾ ಮತ್ತು ಊಬರ್ ಕ್ಯಾಬ್‌ಗಳ ಸಂಚಾರಕ್ಕೆ ಸಂಬಂಧಿಸಿದಂತೆ ರಾಜ್ಯ...

ಎಸ್‌ಐಆರ್ ವಿವಾದ: ಸುಪ್ರೀಂ ಕೋರ್ಟ್‌ಗೆ ಇಂಡಿಯಾ ಮೈತ್ರಿಕೂಟದ ನಾಯಕರಿಂದ ಹೊಸ ಅಫಿಡವಿಟ್

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಮತ್ತು ಮುಖ್ಯ...

Copying is disabled on Udupi Digital News.