Sunday, October 25, 2026

ಅರಾಟೆ ಸೇತುವೆ ಬಳಿ ಎರಡು ಖಾಸಗಿ ಬಸ್ಸುಗಳ ನಡುವೆ ಭೀಕರ ಅಪಘಾತ: ಹಲವರಿಗೆ ಗಾಯ

ಕುಂದಾಪುರ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಅರಾಟೆ ಸೇತುವೆ ಸಮೀಪ ಭಾನುವಾರ (ಅ. 25) ಬೆಳಗ್ಗೆ ಎರಡು ಖಾಸಗಿ ಬಸ್ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 26 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಗಂಭೀರವಾಗಿ ಗಾಯಗೊಂಡ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭಾನುವಾರ ಬೆಳಗ್ಗೆ ಸುಮಾರು 7 ಗಂಟೆಗೆ ಬೈಂದೂರಿನಿಂದ ಮಂಗಳೂರಿನತ್ತ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಕುಂದಾಪುರದಿಂದ ಸಾಗರದ ಕಡೆಗೆ ಸಂಚರಿಸುತ್ತಿದ್ದ ಮತ್ತೊಂದು ಖಾಸಗಿ ಬಸ್ ಅರಾಟೆ ಸೇತುವೆ ಸಮೀಪ ಪರಸ್ಪರ ಡಿಕ್ಕಿಯಾಗಿವೆ. ಎರಡೂ ಬಸ್ಗಳಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದು, ಅಪಘಾತದಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಅಪಘಾತದಲ್ಲಿ ಗಾಯಗೊಂಡ 26 ಮಂದಿಯ ಪೈಕಿ 23 ಜನರನ್ನು ಕುಂದಾಪುರದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸ್ಥಳೀಯರು ಹಾಗೂ ಆಪತ್ಬಾಂಧವ ತಂಡಗಳ ನೆರವಿನಿಂದ ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು.

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಗಂಗೊಳ್ಳಿಯ ಟೀಮ್ ಎಂ.ಎಚ್.ಐ ಆಪತ್ಬಾಂಧವ ಆಂಬುಲೆನ್ಸ್ ತಂಡದ ಇಬ್ರಾಹಿಂ ಗಂಗೊಳ್ಳಿ, ಅಬ್ರಾರ್ ಹಾಗೂ ಸ್ವಯಂಸೇವಕ ವಿಕಾಸ್ ಎರಡು ಆಂಬುಲೆನ್ಸ್ಗಳ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು.

ಹೆಮ್ಮಾಡಿಯ ರಿಕ್ಷಾ ಚಾಲಕರಾದ ಶರತ್, ಕೃಷ್ಣ ಹಾಗೂ ಪ್ರಶಾಂತ್ ಕೂಡ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ತುರ್ತು ನೆರವು ನೀಡಿದರು.

More like this
Related

ಕೆಮ್ಮಣ್ಣು ಚರ್ಚಿನ ನವೀಕೃತ ಲಿಟಲ್ ಫ್ಲವರ್ ಸಭಾಭವನ ಉದ್ಘಾಟನೆ

ಉಡುಪಿ: ಸಮುದಾಯ ಭವನಗಳು ಸಮಾಜದಲ್ಲಿ ಸೌಹಾರ್ದತೆ, ಒಗ್ಗಟ್ಟು ಮತ್ತು ಸಾಮರಸ್ಯವನ್ನು ಬೆಳೆಸುವಲ್ಲಿ...

ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ 114 ಪದಕಗಳ ದಾಖಲೆ: ಭಾರತೀಯ ಕ್ರೀಡಾಪಟುಗಳಿಗೆ ಪ್ರಧಾನಿ ಮೋದಿ ಅಭಿನಂದನೆ

ನವದೆಹಲಿ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆದ 2026ರ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ದಾಖಲೆಯ...

ನ. 7ರವರೆಗೆ ರಿಯಾದ್, ದಮ್ಮಾಮ್‌ಗೆ ಏರ್ ಇಂಡಿಯಾ ವಿಮಾನ ಸೇವೆ ಸ್ಥಗಿತ

ರಿಯಾದ್: ಸೌದಿ ಅರೇಬಿಯಾದ ರಿಯಾದ್ ಮತ್ತು ದಮ್ಮಾಮ್‌ಗೆ ತೆರಳುವ ಹಾಗೂ ಅಲ್ಲಿಂದ...

ಪೋಸ್ಟರ್‌ಗಳ ಬದಲು ಅಭಿವೃದ್ಧಿ ಕಾರ್ಯಗಳನ್ನು ತೋರಿಸುವ ರಾಜಕೀಯ ಸಂಸ್ಕೃತಿ ಬರಲಿ: ಅಣ್ಣಾಮಲೈ

ಉಡುಪಿ: ಪಕ್ಷದ ಕಾರ್ಯಕರ್ತರು ‘ಮುಖ್ಯಮಂತ್ರಿ ಬರುತ್ತಿದ್ದಾರೆ’ ಎಂಬ ಪೋಸ್ಟರ್‌ಗಳನ್ನು ಹಾಕುವುದಕ್ಕಿಂತ, ತಮ್ಮ...

Copying is disabled on Udupi Digital News.