Wednesday, November 11, 2026

ಅನೈತಿಕ ಮಾನವ ಸಾಗಣೆ ತಡೆ ಕಾಯ್ದೆ ಪ್ರಕರಣ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಪಶ್ಚಿಮ ಬಂಗಾಳದ ದಂಪತಿ ಬಂಧನ

ಮಣಿಪಾಲ: ಅನೈತಿಕ ಮಾನವ ಸಾಗಣೆ ತಡೆ ಕಾಯ್ದೆಯಡಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಪಶ್ಚಿಮ ಬಂಗಾಳ ಮೂಲದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಎಸ್ತಾರ್ ಶಾಹ್ ಅಲಿಯಾಸ್ ಕಾಜಲ್ (40) ಹಾಗೂ ಸಂಜಯ್ ಶಾಹ್ (49) ಎಂದು ಗುರುತಿಸಲಾಗಿದೆ. ಇವರು ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ದಮ್ ದಮ್ ಪೊಲೀಸ್ ಠಾಣಾ ವ್ಯಾಪ್ತಿಯ ಅರಬಿಂದ ಸರಾನಿ, ಕಾಳಿದಾಮ್ ಕಾಲೋನಿ ನಿವಾಸಿಗಳಾಗಿದ್ದಾರೆ.

ಮಣಿಪಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪರಾಧ ಸಂಖ್ಯೆ 92/2025ರ ಕಲಂ 143 ಬಿಎನ್‌ಎಸ್ ಹಾಗೂ ಅನೈತಿಕ ಮಾನವ ಸಾಗಣೆ (ತಡೆ) ಕಾಯ್ದೆ 1956ರ ಕಲಂ 3, 4, 5 ಮತ್ತು 6ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ತನಿಖೆ ಮುಂದುವರಿದಿತ್ತು.

ತಲೆಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗಾಗಿ ಠಾಣೆಯ ಪಿಎಸ್‌ಐ ತಿಮ್ಮೇಶ್ ಬಿ.ಎನ್. ಅವರನ್ನು ಸಹಾಯಕ ತನಿಖಾಧಿಕಾರಿಯಾಗಿ ನೇಮಿಸಲಾಗಿತ್ತು. ಅದರಂತೆ ಅವರು ಠಾಣೆಯ ಸಿಬ್ಬಂದಿಗಳಾದ ಎಚ್‌ಸಿ ಸುರೇಶ್ ಶೆಟ್ಟಿ, ಎಚ್‌ಸಿ ಚೇತನ್, ಪಿಸಿ ರವಿರಾಜ್, ಮಹಿಳಾ ಎಚ್‌ಸಿ ಜ್ಯೋತಿ ನಾಯಕ್ ಹಾಗೂ ಮಹಿಳಾ ಪಿಸಿ ಸುಮಲತಾ ಅವರೊಂದಿಗೆ ವಿಶೇಷ ಕಾರ್ಯಾಚರಣೆ ನಡೆಸಿದರು.

ಆರೋಪಿಗಳು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ಸಿಲಿಗುರಿಯ ನೇತಾಜಿ ನಗರದಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ನ.3ರಂದು ಬೆಳಗ್ಗೆ 11 ಗಂಟೆಗೆ ಅಲ್ಲಿಗೆ ತೆರಳಿ ಎಸ್ತಾರ್ ಶಾಹ್ ಅಲಿಯಾಸ್ ಕಾಜಲ್ ಹಾಗೂ ಸಂಜಯ್ ಶಾಹ್ ಅವರನ್ನು ವಶಕ್ಕೆ ಪಡೆದು ಬಂಧಿಸಿದರು.

ಬಳಿಕ ಆರೋಪಿಗಳನ್ನು ಪಶ್ಚಿಮ ಬಂಗಾಳದ ಎಲ್‌ಡಿ ಎಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅಲ್ಲಿಂದ ಕರೆತಂದ ಪೊಲೀಸರು ನ.7ರಂದು ಉಡುಪಿಯ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಎಸಿಜೆಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ನ್ಯಾಯಾಲಯವು ಆರೋಪಿಗಳಿಗೆ ನ.11ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

More like this
Related

ನ.13: ಬೆಂಗಳೂರು – ಮಂಗಳೂರು – ಉಡುಪಿ – ಮಡಂಗಾವ್ ವಂದೇಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

ಉಡುಪಿ: ರಾಜ್ಯದ ರಾಜಧಾನಿ ಬೆಂಗಳೂರನ್ನು ಮಂಗಳೂರು, ಉಡುಪಿ, ಕಾರವಾರ ಮೂಲಕ ಮಡಂಗಾವ್‌ನ್ನು...

ಮಣಿಪಾಲದಲ್ಲಿ ಸಾರ್ವಜನಿಕರ ಮೇಲೆ ಪಟಾಕಿ ಎಸೆದು ಉಪಟಳ: ಪ್ರಕರಣ ದಾಖಲು

ಮಣಿಪಾಲ: ಸಾರ್ವಜನಿಕ ರಸ್ತೆಯಲ್ಲಿ ಪಟಾಕಿ ಸಿಡಿಸಿ, ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು ಹಾಗೂ...

ʼಮೆಟ್ರೋʼ ನೇರಳೆ ಮಾರ್ಗದಲ್ಲಿ ಟ್ರ್ಯಾಕ್​ಗೆ ಇಳಿದ ವ್ಯಕ್ತಿ; ಸಂಚಾರದಲ್ಲಿ ಕೆಲಕಾಲ ವಿಳಂಬ

ಬೆಂಗಳೂರು : ನಮ್ಮ ಮೆಟ್ರೋ ರೈಲ್ವೆಯ ನೇರಳೆ ಮಾರ್ಗದಲ್ಲಿ ವ್ಯಕ್ತಿಯೊಬ್ಬ ಟ್ರ್ಯಾಕ್​ಗೆ...

ಎಡ್ಮೇರು: ರಸ್ತೆ ಬದಿಯ ಗೋಡೆಗೆ ಬೈಕ್ ಡಿಕ್ಕಿ ಹೊಡೆದು ಯುವಕ ಮೃತ್ಯು

ಉಡುಪಿ: ಕಾರ್ಕಳ- ಮೂಡುಬೆಳ್ಳೆ-ಉಡುಪಿ ರಾಜ್ಯ ಹೆದ್ದಾರಿಯ ಎಡೇರು ಬಳಿ ಬೈಕೊಂದು ವಾಹನ...

Copying is disabled on Udupi Digital News.