Thursday, June 18, 2026

ಜೂನ್ 19 : ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ರಾಹುಲ್ ಗಾಂಧಿ ಜನ್ಮದಿನಾಚರಣೆ         

ಉಡುಪಿ:  ‌ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರಾದ  ರಾಹುಲ್ ಗಾಂಧಿಯವರ ಜನ್ಮದಿನದ ಅಂಗವಾಗಿ ವಿಶೇಷ ಚೇತನರಿಗೆ ಸಹಾಯಕ ಸಾಧನಗಳು ಹಾಗೂ ಪೌಷ್ಟಿಕ ಆಹಾರ ಕಿಟ್ ಗಳ ವಿತರಣಾ ಕಾರ್ಯಕ್ರಮವು ಜೂನ್ 19 ರಂದು ಬೆಳಿಗ್ಗೆ ಗಂಟೆ 10.00ಕ್ಕೆ ಉಡುಪಿಯ ಕಾಂಗ್ರೆಸ್ ಭವನದಲ್ಲಿ ಜರುಗಲಿದೆ.                                                 ‌                                 ‌‌ 

 ‌ನಿರಂತರ ಜನರ ನೋವಿಗೆ ಸ್ಪಂದಿಸುವ, ಸಾಮಾಜಿಕ ನ್ಯಾಯದ  ಪರ ಹೋರಾಡುವ, ಮಾನವೀಯ ಹೃದಯದ ನಾಯಕ ರಾಹುಲ್ ಗಾಂಧಿಯವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ 75 ಮಂದಿ ವಿಶೇಷ ಚೇತನರಿಗೆ ಸಹಾಯಕ ಸಾಧನಗಳಾದ ಶ್ರವಣ ಸಾಧನ, ಕಂಬೋಡ್ ವೀಲ್ ಚೇರ್, ವಾಟರ್ ಬೆಡ್, ವಾಕರ್, ವಾಕಿಂಗ್ ಸ್ಟಿಕ್, ಕ್ರಚ್ಸ್ ಹಾಗೂ ಪೌಷ್ಟಿಕ ಆಹಾರ ಕಿಟ್ ಗಳನ್ನು ನೀಡಲಾಗುವುದೆಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

More like this
Related

ಹಿರಿಯ ಛಾಯಾ ಪತ್ರಕರ್ತ ಅಸ್ಟ್ರೋ ಮೋಹನ್ ಅವರಿಗೆ ಅಮೆರಿಕದ ಪ್ರತಿಷ್ಠಿತ ಪಿಪಿಎಸ್ಎ ಗೌರವ

ಉಡುಪಿ: ಹಿರಿಯ ಛಾಯಾ ಚಿತ್ರ ಪತ್ರಕರ್ತ ಹಾಗೂ ಅಂತರರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ...

ಸಹಶಿಕ್ಷಕರು-ಅಡುಗೆ ಸಿಬ್ಬಂದಿಯೊಂದಿಗೆ ಕಲಹ; ವಿಷ ಸೇವಿಸಿದ್ದ ಮುಖ್ಯ ಶಿಕ್ಷಕ ಚಿಕಿತ್ಸೆ ಫಲಕಾರಿಯಾಗದೆ ಸಾವು

ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಕೊಕ್ಕನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ...

ಗಿಲ್‌ರ 154, ಇಶಾನ್ ಕಿಶನ್‌ರ 125 ರನ್‌ಗಳ ಸಿಡಿಲಾಟ; ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ 402 ರನ್‌ಗಳ ಬೃಹತ್ ಮೊತ್ತ

ಲಖ್ನೋ: ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ...

ಕಲಬುರಗಿಯಲ್ಲಿ ಪಿಎಸ್‌ಐ ಆತ್ಮಹತ್ಯೆ; ಕೌಟುಂಬಿಕ ಕಲಹ ಶಂಕೆ

ಕಲಬುರಗಿ: ಕಳೆದ ಎರಡು ವರ್ಷಗಳಿಂದ ಕಲಬುರಗಿ ಡಿಸಿಆರ್‌ಬಿ (ಜಿಲ್ಲಾ ಅಪರಾಧ ದಾಖಲೆ...

Copying is disabled on Udupi Digital News.