ಕುಂದಾಪುರ: ದುಡಿಮೆಯ ಒಂದು ಭಾಗವನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಶಿಕ್ಷಣ, ಆರೋಗ್ಯ, ಕಲೆ, ಸಾಹಿತ್ಯ, ಕ್ರೀಡೆ, ಧಾರ್ಮಿಕತೆಗಳಿಗೆ ನೀಡುತ್ತಿರುವ ನಾಡೋಜ ಜಿ. ಶಂಕರ್ ರವರ ಸಮಾಜ ಸೇವೆಯನ್ನು ಗುರುತಿಸಿ ಅವರಿಗೆ ವಿಧಾನ ಪರಿಷತ್ ನಾಮನಿರ್ದೇಶನ ಸದಸ್ಯರನ್ನಾಗಿ ಸರ್ಕಾರ ಮಾಡಬೇಕೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಮನವಿ ಮಾಡಿದ್ದಾರೆ.
ಮೊಗವೀರ ಯುವ ಸಂಘಟನೆ ಮೂಲಕ ರಕ್ತದಾನದ ಕ್ರಾಂತಿಯನ್ನು ಮಾಡುವುದರ ಮೂಲಕ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಮೂಲಕ ಮಣಿಪಾಲ ಆರೋಗ್ಯ ಕಾರ್ಡ್ ಮೂಲಕ ಆರ್ಥಿಕ ಅಶಕ್ತರಿಗೆ ಆರೋಗ್ಯ ಸಮಸ್ಯೆಗೆ ಸಹಾಯ, ಉಚ್ಚಿಲ ದಸರಾ ಮೂಲಕ ಧಾರ್ಮಿಕ ಕಾರ್ಯಕ್ರಮ, ಮೊಗವೀರ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ, ಮೀನುಗಾರಿಕ ಜಟ್ಟಿ, ಬಂದರುಗಳ ಅಭಿವೃದ್ಧಿ, ಧರ್ಮ, ಜಾತಿ ಯಾವುದನ್ನೂ ನೋಡದೆ ಎಲ್ಲಾ ಆರ್ಥಿಕ ಅಶಕ್ತರಿಗೆ ಆರ್ಥಿಕ ಸಹಾಯ, ದೈಹಿಕ ವಿಕಲಾಂಗರಿಗೆ ಸಹಾಯ, ಕರಾವಳಿಯ ಸರ್ವ ಜಾತಿ, ಸರ್ವ ಸಮುದಾಯದ ದೇವಸ್ಥಾನ, ದೈವಸ್ಥಾನಗಳ ಅಭಿವೃದ್ಧಿಗೆ ಸಹಾಯ ಇಂತಹ ಅದೆಷ್ಟೋ ಸಮಾಜಮುಖಿ ಕಾರ್ಯಕ್ರಮಗಳನ್ನು ಯಾವುದೇ ಸ್ವಾರ್ಥವಿಲ್ಲದೆ ನಡೆಸುತ್ತಿರುವ ನಾಡೋಜ ಜಿ. ಶಂಕರ್ ರವರನ್ನು ಈ ಭಾರಿ ರಾಜ್ಯ ಸರ್ಕಾರ ವಿಧಾನ ಪರಿಷತ್ತಿನ ನಾಮನಿರ್ದೇಶನ ಸದಸ್ಯರನ್ನಾಗಿ ಮಾಡಬೇಕೆಂದು ಅವರು ಪತ್ರಿಕಾ ಹೇಳಿಕೆ ಮೂಲಕ ಮನವಿ ಮಾಡಿದ್ದಾರೆ.




