ಉಡುಪಿ: ಡಾ. ನವೀನ್ ಅಮಣ್ಣ ಹಾಗೂ ಡಾ. ಅಡಾಲ್ಫ್ ಶೆರ್ವಿನ್ ಅವರ ಮಾರ್ಗದರ್ಶನದಲ್ಲಿ ವಿಷನ್ ಅಕಾಡೆಮಿ ಆಫ್ ಮ್ಯೂಸಿಕ್ ವತಿಯಿಂದ ಆಯೋಜಿಸಲಾಗಿದ್ದ ಬ್ಯಾಡ್ಮಿಂಟನ್ ಲೀಗ್‌ನಲ್ಲಿ ‘ಮೈಟಿ ಇಯಾನ್ ರಾಯಲ್ಸ್’ ತಂಡ ವಿಜೇತರಾಗಿ ಹೊರಹೊಮ್ಮಿದ್ದು, ‘ಬ್ಲ್ಯಾಕ್ ಪ್ಯಾಂಥರ್ಸ್’ ತಂಡ ರನ್ನರ್‌ಅಪ್ ಸ್ಥಾನ ಪಡೆದುಕೊಂಡಿತು.

ಎಂಟು ತಂಡಗಳು ಭಾಗವಹಿಸಿದ್ದ ಈ ಲೀಗ್‌ನಲ್ಲಿ ಒಟ್ಟು ಏಳು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ಅಂಡರ್-16, ಮಹಿಳೆಯರ ಡಬಲ್ಸ್, ಪುರುಷರ ಡಬಲ್ಸ್–1, ಪುರುಷರ ಡಬಲ್ಸ್–2, 50+ ವಿಭಾಗ, ಮಿಕ್ಸ್ಡ್ ಡಬಲ್ಸ್ ಹಾಗೂ ಜಂಬಲ್ಡ್ ಟು 75+ ವಿಭಾಗಗಳಲ್ಲಿ ಪಂದ್ಯಗಳು ನಡೆದವು.

ಕಾರ್ಯಕ್ರಮದ ಮುಖ್ಯ ಸಂಯೋಜಕರಾಗಿ ಸಿಲಿಗುರಿ, ಪಶ್ಚಿಮ ಬಂಗಾಳದ ಮೊಹಿಂದರ್ ಪಾಲ್ ಸಿಂಗ್ ಉಪಸ್ಥಿತರಿದ್ದರು. ಅವರು ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಆಟಗಾರರಾಗಿದ್ದು, 1990ರಿಂದ 2000ರ ದಶಕದಲ್ಲಿ ಉತ್ತರ ಪ್ರದೇಶ ತಂಡವನ್ನು ಪ್ರತಿನಿಧಿಸಿದ್ದರು.
ಲೀಗ್‌ನಲ್ಲಿ ವಿವಿಧ ವಯೋಮಾನದ ಹಾಗೂ ವಿಭಾಗಗಳ ಆಟಗಾರರು ಉತ್ಸಾಹದಿಂದ ಪಾಲ್ಗೊಂಡಿದ್ದು, ಪಂದ್ಯಾವಳಿ ಕ್ರೀಡಾಭಿಮಾನಿಗಳ ಗಮನ ಸೆಳೆಯಿತು.




