Friday, October 2, 2026

ಎಂ.ಆರ್.ಪಿ.ಎಲ್. ಸ್ಪೋಟ ಪ್ರಕರಣ: ಒರ್ವ ಗುತ್ತಿಗೆ ನೌಕರ ಮೃತ್ಯು

ಮಂಗಳೂರು: ಎಂ.ಆರ್.ಪಿ.ಎಲ್.ನಲ್ಲಿ ಬುಧವಾರ ಮಧ್ಯಾಹ್ನದ ವೇಳೆ ಸಂಭವಿಸಿದ ಭಾರೀ ಸ್ಫೋಟ – ಬೆಂಕಿ ಅವಘಡ ಪ್ರಕರಣಕ್ಕೆ ಸಂಬಂಧಿಸಿ ಓರ್ವ ವ್ಯಕ್ತಿಯ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಮೃತರನ್ನು ಮುಲ್ಕಿ ಮೂಲದ ಮನೀಶ್ ಕರ್ಕಡ (23) ಎಂದು ಗುರುತಿಸಲಾಗಿದೆ. ಅವರು ಅವಘಡ ನಡೆದ ಪ್ರದೇಶದಲ್ಲಿ ಕಣ್ಮರೆಯಾಗಿದ್ದು, ಮನೀಶ್ ಕರ್ಕಡ ಅವರು ಅಲ್ಲಿ ಗುತ್ತಿಗೆಯಾಧಾರದಡಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.

ಪ್ರಕರಣದಲ್ಲಿ ಓರ್ವ ಮೃತಪಟ್ಟಿದ್ದು, ಒಬ್ಬರಿಗೆ ಸುಟ್ಟ ಗಾಯಗಳು ಹಾಗೂ 8 ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

More like this
Related

ನಕಲಿ ಪ್ರವೇಶ ಪತ್ರ ಸೃಷ್ಟಿಸಿ ಪೊಲೀಸ್ ನೇಮಕಾತಿ ದೈಹಿಕ ಪರೀಕ್ಷೆಗೆ ಹಾಜರಾಗಲು ಯತ್ನಿಸಿದ ಯುವಕನ ಬಂಧನ

ಕಡಬ: ಪೊಲೀಸ್‌ ಇಲಾಖೆಯ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ (CPC) ನೇಮಕಾತಿಯ ದೈಹಿಕ...

ಫಾರಂ 7 ಮೂಲಕ ಅರ್ಹ ಮತದಾರ ಹೆಸರು ಅಳಿಸಿ ಹಾಕಿದ ಪ್ರಕರಣ; ತನಿಖೆಗೆ ಆಗ್ರಹಿಸಿ ಸಿಎಂ ಧರಣಿ

ಬೆಂಗಳೂರು: ರಾಜ್ಯದಲ್ಲಿ ಫಾರಂ 7 ಮೂಲಕ ಅರ್ಹ ಮತದಾರರ ಹೆಸರು ಅಳಿಸಿ...

ನಿಟ್ಟೆ ಫ್ಯೂಚರ್ ಸ್ಪೇಸ್ನಲ್ಲಿ ಸೆಂಟರ್ಸ್ ಆಫ್ ಎಕ್ಸಲೆನ್ಸ್ ಉದ್ಘಾಟನೆ

ಕಾರ್ಕಳ: ಜಪಾನ್ನ ತಂತ್ರಜ್ಞಾನ ಹಾಗೂ ಕೈಗಾರಿಕಾ ಅನುಭವಕ್ಕೆ ಭಾರತದ ಯುವಶಕ್ತಿ ಮತ್ತು...

ಅ. 2: ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ 125 ನೇ ವರ್ಷದ ಆಚರಣೆಗೆ ಚಾಲನೆ

ಉಡುಪಿ: ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ತಾಂಗದಗಡಿ ಪ್ರಸಕ್ತ ವರ್ಷ...

Copying is disabled on Udupi Digital News.