Monday, September 14, 2026

ಉಡುಪಿಯಲ್ಲಿ ರಾಸಾಯನಿಕ ಬಳಸಿ ಬಾಳೆಹಣ್ಣು ಹಣ್ಣಾಗಿಸುವ ದಂಧೆ : ಮತ್ತೆ ಮೂರು ಪ್ರಕರಣ ದಾಖಲು

ಉಡುಪಿ : ಕುಂದಾಪುರ ಉಪವಿಭಾಗೀಯ ಅಧಿಕಾರಿ ರಶ್ಮಿ ಮಾರ್ಗದರ್ಶನದಲ್ಲಿ ಆಹಾರ ಸುರಕ್ಷತಾ ಅಧಿಕಾರಿ ವಿವೇಕ್ ತ್ರಿಮಲ್ಲೆ ನೇತೃತ್ವದಲ್ಲಿ ಆ.20ರಂದು ರಾಸಾಯನಿಕ ಪದಾರ್ಥ ಬಳಸಿ ಬಾಳೆ ಕಾಯಿಗಳನ್ನು ಹಣ್ಣು ಮಾಡುತ್ತಿರುವ ಗೋದಾಮಿಗೆ ದಾಳಿ ನಡೆಸಿರುವ ಬಗ್ಗೆ ಇದೀಗ ಮಣಿಪಾಲ ಮತ್ತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಒಟ್ಟು ಮೂರು ಪ್ರಕರಣಗಳು ದಾಖಲಾಗಿವೆ. ಈ ಸಂಬಂಧ ಒಟ್ಟು 8,87200ರೂ. ಮೌಲ್ಯದ 10,890 ಕೆಜಿ ತೂಕದ ಬಾಳೆಹಣ್ಣು ಮತ್ತು ಎಂಟು ಗೂಡ್ಸ್ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಆ.20ರಂದು ಪಡುಅಲೆವೂರು ಮಂಚಿಕೆರೆ ಇಳಿಜಾರು ಬಳಿ ನಾಗರಾಜ ಎಂಬಾತ ಗೋದಾಮಿಗೆ ದಾಳಿ ನಡೆಸಿ, ರಾಸಾಯನಿಕ ಬಳಸಿದ 3,27,200 ರೂ. ಮೌಲ್ಯದ 4090 ಕೆಜಿ ಕಾಯಿ ಬಾಳೆಗೊನೆಗಳನ್ನು ಮತ್ತು ಮೂರು ಗೂಡ್ಸ್ ಟೆಂಪೋ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಮ್ತೂರು ವಿಷ್ಣಮೂರ್ತಿ ದೇವಸ್ಥಾನದ ಹತ್ತಿರದ ತಿಮ್ಮರೆಡ್ಡಿ ಎಂಬಾತನ ಗೋದಾಮಿಗೆ ದಾಳಿ ನಡೆಸಿ ರಾಸಾಯನಿಕ ಬಳಸಿದ 1,60,000ರೂ. ಮೌಲ್ಯದ 2000 ಕೆ.ಜಿ. ಬಾಳೆಗೊನೆಗಳನ್ನು ಮತ್ತು ಮೂರು ಗೂಡ್ಸ್ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದೇ ರೀತಿ ಕೆಮ್ತೂರು ಶಾಲೆಯ ಬಳಿಯ ಕಿರಣ್ ಕುಮಾರ್ ಎಂಬಾತ ಗೋದಾಮಿಗೆ ದಾಳಿ ನಡೆಸಿ, ರಾಸಾಯನಿಕ ಪದಾರ್ಥ ಬಳಸಿದ 3,84,000ರೂ. ಮೌಲ್ಯದ 4800 ಕೆಜಿ ಬಾಳೆಕಾಯಿಗಳನ್ನು ಮತ್ತು ಎರಡು ಗೂಡ್ಸ್ ವಾಹನಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಈ ಬಗ್ಗೆ ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

More like this
Related

ಉಡುಪಿ ಉಚ್ಚಿಲ ದಸರಾ-2026 ಆಮಂತ್ರಣ ಪತ್ರಿಕೆ ಬಿಡುಗಡೆ

ಪಡುಬಿದ್ರಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತದಲ್ಲಿರುವ ಉಚ್ಚಿಲ ಶ್ರೀಮಹಾಲಕ್ಷ್ಮೀ...

ಕಡಿಯಾಳಿಯಲ್ಲಿ ವಜ್ರಮಹೋತ್ಸವದ ಸಂಭ್ರಮ: ಸಂಕಷ್ಟ ಹರ ಗಣಪತಿಯ ಅದ್ಧೂರಿ ಮೆರವಣಿಗೆ

ಉಡುಪಿ: ಉಡುಪಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ, ಕಡಿಯಾಳಿ ವತಿಯಿಂದ ಆಯೋಜಿಸಲಾಗಿರುವ 60ನೇ...

ಬಿಜೆಪಿಯಿಂದ ಕೋಮು ಭಾವನೆ ಪ್ರಚೋದನೆ: ಸಮಾಜಘಾತುಕ ಶಕ್ತಿಗಳ ಬಳಕೆ – ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: "ಸಮಾಜದಲ್ಲಿ ಅಶಾಂತಿ ಮೂಡಿಸಲು ಕುತಂತ್ರ ನಡೆಯುತ್ತಿದ್ದು, ಬಿಜೆಪಿ ಸಮಾಜ ಘಾತುಕ...

ಬಳ್ಳಾರಿ ಚಲೋ ನಡೆಸಿದ್ದ ಬಿಜೆಪಿ ನಾಯಕರಿಗೆ ಶಾಕ್; ಸೋಮಶೇಖರ್ ರೆಡ್ಡಿ, ರೇಣುಕಾಚಾರ್ಯ ಸೇರಿ 22 ಬಿಜೆಪಿ ನಾಯಕರ ಮೇಲೆ FIR

ಬಳ್ಳಾರಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಮತ್ತು ಭ್ರಷ್ಟಾಚಾರವನ್ನು ಖಂಡಿಸಿ...

Copying is disabled on Udupi Digital News.