Monday, September 14, 2026

ಜ.17ರಂದು ಪರ್ಯಾಯ ಪ್ರಯುಕ್ತ ಶ್ರೀ ಕೃಷ್ಣ ಗ್ರೂಫ್ ಆಫ್ ಡ್ಯಾನ್ಸ್ ಕಿನ್ನಿಮುಲ್ಕಿ ವತಿಯಿಂದ ವಿಶೇಷ ಕಾರ್ಯಕ್ರಮ

ಉಡುಪಿ: ಪರ್ಯಾಯ ಮಹೋತ್ಸವದ ಪ್ರಯುಕ್ತ ಶ್ರೀ ಕೃಷ್ಣ ಗ್ರೂಫ್ ಆಫ್ ಡ್ಯಾನ್ಸ್ ಕಿನ್ನಿಮುಲ್ಕಿ ವತಿಯಿಂದ ವಿವಿಧ ರೀತಿಯ ಸಮಾಜ ಸೇವಾ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮ ಜನವರಿ 17 ರಂದು ಶನಿವಾರ ಸಂಜೆ 7 ಗಂಟೆಗೆ ಕಿನ್ನಿಮುಲ್ಕಿ ಜಂಕ್ಷನ್ ಬಳಿ ಜರುಗಲಿದೆ ಎಂದು ನಿರ್ದೇಶಕರಾದ ಕೃಷ್ಣಮೂರ್ತಿ ಆಚಾರ್ಯ ಹೇಳಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಪರ್ಯಾಯದ ಸಂದರ್ಭದಲ್ಲಿ ವಿವಿಧ ರೀತಿಯ ಸಮಾಜ ಸೇವಾ ಚಟುವಟಿಕೆಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶ್ರೀ ಕೃಷ್ಣ ಗ್ರೂಫ್ ಆಫ್ ಡ್ಯಾನ್ಸ್ ಕಿನ್ನಿಮುಲ್ಕಿ ವತಿಯಿಂದ ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಶಿರೂರು ಪರ್ಯಾಯ ಮಹೋತ್ಸವದ ಪ್ರಯುಕ್ತ ಹಲವಾರು ಸಮಾಜ ಪರ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಶನಿವಾರ ನಡೆಯುವ ಸಭಾ ಕಾರ್ಯಕ್ರಮದಲ್ಲಿ 150 ಕ್ಕೂ ಅಧಿಕ ಅಂಗನವಾಡಿಗಳಿಗೆ ಕುಕ್ಕರ್, 100 ಶಾಲೆಗಳಿಗೆ ಫ್ಯಾನ್, 100 ಶಾಲೆಗಳಿಗೆ ಕ್ರೀಡಾ ಸಾಮಾಗ್ರಿ, ಕುರ್ಚಿಗಳ ವಿತರಣೆ ಸಹಿತ ಹಲವಾರು ಸಮಾಜ ಪರ ಸೇವಾಕಾರ್ಯಗಳನ್ನು ನಡೆಸಲಾಗುವುದು ಎಂದರು.

ಸಭಾ ಕಾರ್ಯಕ್ರಮವನ್ನು ವಿಧಾನಸಭಾಧ್ಯಕ್ಷರಾದ ಯು ಟಿ ಖಾದರ್ ಉದ್ಘಾಟಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಸಾದ್ ನೇತ್ರಾಲಯದ ನಾಡೋಜ ಡಾ| ಕೃಷ್ಣಪ್ರಸಾದ್ ವಹಿಸಲಿದ್ದಾರೆ. ಅಂಗನವಾಡಿಗಳಿಗೆ ಕುಕ್ಕರ್ ವಿತರಣೆಯನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾಡಲಿದ್ದು, ಶಾಲೆಗಳಿಗೆ ಫ್ಯಾನ್ ವಿತರಣೆಯನ್ನು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಶಾಲೆಗಳಿಗೆ ಸ್ಪೋರ್ಟ್ಸ್ ಕಿಟ್ ನ್ನು ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಅಂಗನವಾಡಿಗಳಿಗೆ ಕುರ್ಚಿಗಳನ್ನು ಪರಿಷತ್ ಸದಸ್ಯ ಐವನ್ ಡಿಸೋಜಾ ವಿತರಿಸಲಿದ್ದಾರೆ. ಬಡಗಬೆಟ್ಟು ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ ಆಯ್ದ ಫಲಾನುಭವಿಗಳಿಗೆ ಆರೋಗ್ಯ ನಿಧಿಯನ್ನು, ಮಾಜಿ ಸಂಸದರಾದ ಕೆ ಜಯಪ್ರಕಾಶ್ ಹೆಗ್ಡೆಯವರು ರಿಕ್ಷಾ ಚಾಲಕರಿಗೆ ಉಚಿತ ವಿಮೆಯನ್ನು, ವಿತರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಮಾಜದ 50ಕ್ಕೂ ಅಧಿಕ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಕನ್ನಡ ಬಿಗ್ ಬಾಸ್ ವಿಜೇತರ ನಟ ಶೈನ್ ಶೆಟ್ಟಿ, ಖ್ಯಾತ ರಂಗಭೂಮಿ, ಚಲನಚಿತ್ರ, ಧಾರವಾಹಿ ನಟಿ ಕೃತಿ ಬಿ ಶೆಟ್ಟಿ ಹಾಗೂ ಬಹುಭಾಷ ನಟಿ ಕಾಜಲ್ ಕುಂದರ್ ಕೂಡ ಭಾಗವಹಿಲಿದ್ದಾರೆ,.

ಸಭಾ ಕಾರ್ಯಕ್ರಮದಲ್ಲಿ ಬಾರಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದ ಸಹ ಧರ್ಮದರ್ಶಿ ಪದ್ಮಶ್ರೀ ಡಾ|ಚಂದ್ರಶೇಖರ ವಿ ಎಸ್, ಸಮಾಜ ಸೇವಕರಾದ ಡಾ|ಜಯಂತ್ ಭಟ್ ಮಣೋಳಿಗುಜ್ಜಿ, ರಕ್ಷಿತ್ (ಮುನ್ನ) ಮಲ್ಪೆ, ಸತೀಶ್ ಸುವರ್ಣ ಪಂದುಬೆಟ್ಟು, ಅಂಗನವಾಡಿ ಸಹಾಯಕಿ ಕಮಲ ಪೂಜಾರ್ತಿ, ಖ್ಯಾತ ಬಹುಭಾಷಾ ಚಲನಚಿತ್ರ ನಡಿ ಕು|ಮೆನ್ಸಿಟಾ ಡಾಯಸ್, ಯೋಗಪಟು ಕು|ಸೋಜಾ ಅಡ್ಕರ್ ಸುಳ್ಯ ಇವರುಗಳನ್ನು ಸನ್ಮಾನಿಸಲಾಗುವುದು.

ಸಭಾ ಕಾರ್ಯಕ್ರಮದ ಬಳಿಕ ಪ್ರಖ್ಯಾತ ಗಿಟಾರ್ ವಾದಕ ರಾಜ್ ಗೋಪಾಲ್ ನೇತೃತ್ವದಲ್ಲಿ ಅಂತರಾಷ್ಟ್ರೀಯ ಕಲಾವಿದರನ್ನೊಳಗೊಂಡ ಜೀ ಟಿವಿ ಸರಿಗಮಪ ಹಾಗೂ ಕಲರ್ಸ್ ಎದೆತುಂಬಿ ಹಾಡುವೆನು ರಿಯಾಲಿಟಿ ಶೋ ಗಾಯಕರನ್ನೊಳಗೊಂಡ ಹಾಗೂ ಖ್ಯಾತ ಚಲನಚಿತ್ರ ತಾರೆಯರ ಸಮ್ಮಿಲನದೊಂದಿಗೆ ಅದ್ದೂರಿಯ ರಸಮಂಜರಿ ಕಾರ್ಯಕ್ರಮ ಹಾಗೂ ನೃತ್ಯ ಕಾರ್ಯಕ್ರಮ ಜರುಗಲಿದೆ. ರಸಮಂಜರಿ ಕಾರ್ಯಕ್ರಮದಲ್ಲಿ ಜೀ ಟಿವಿ ಸರಿಗಮಪ ಖ್ಯಾತಿಯ ಜಸ್ಕರಣ್ ಸಿಂಗ್, ಗಾಯಕರಾದ ವರ್ಣ ಚೌಹಾನ್, ಸುಬ್ರತ್ ಸಾಹೂ, ಐಸಾಕ್ ಹಿನ್ನಲೆಗಾಯಕಿ ಅನನ್ಯ ಪ್ರಕಾಶ್, ಪಲ್ಲವಿ ಸಹಿತ ಹಲವಾರು ಕಲಾವಿದರು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಗರಸಭಾ ಸದಸ್ಯೆ ಅಮೃತಾ ಕೃಷ್ಣ ಮೂರ್ತಿ, ಹರೀಸ್, ಪ್ರಶಾಂತ್ ಆಚಾರ್ಯ ಉಪಸ್ಥಿತರಿದ್ದರು.

More like this
Related

ಉಡುಪಿ ಉಚ್ಚಿಲ ದಸರಾ-2026 ಆಮಂತ್ರಣ ಪತ್ರಿಕೆ ಬಿಡುಗಡೆ

ಪಡುಬಿದ್ರಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತದಲ್ಲಿರುವ ಉಚ್ಚಿಲ ಶ್ರೀಮಹಾಲಕ್ಷ್ಮೀ...

ಕಡಿಯಾಳಿಯಲ್ಲಿ ವಜ್ರಮಹೋತ್ಸವದ ಸಂಭ್ರಮ: ಸಂಕಷ್ಟ ಹರ ಗಣಪತಿಯ ಅದ್ಧೂರಿ ಮೆರವಣಿಗೆ

ಉಡುಪಿ: ಉಡುಪಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ, ಕಡಿಯಾಳಿ ವತಿಯಿಂದ ಆಯೋಜಿಸಲಾಗಿರುವ 60ನೇ...

ಬಿಜೆಪಿಯಿಂದ ಕೋಮು ಭಾವನೆ ಪ್ರಚೋದನೆ: ಸಮಾಜಘಾತುಕ ಶಕ್ತಿಗಳ ಬಳಕೆ – ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: "ಸಮಾಜದಲ್ಲಿ ಅಶಾಂತಿ ಮೂಡಿಸಲು ಕುತಂತ್ರ ನಡೆಯುತ್ತಿದ್ದು, ಬಿಜೆಪಿ ಸಮಾಜ ಘಾತುಕ...

Copying is disabled on Udupi Digital News.