Thursday, October 1, 2026

ಉಡುಪಿಯ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿದ್ದ ಶ್ರೀ ದುರ್ಗಾಂಬಾ ಬಸ್ ಕಳವು

ಉಡುಪಿ: ನಗರದ ಹನುಮಾನ್ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ ನಿಲ್ಲಿಸಲಾಗಿದ್ದ ಶ್ರೀ ದುರ್ಗಾಂಬಾ ಬಸ್ವೊಂದು ಕಳುವಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಟ್ಬೆಲ್ತೂರಿನ ಕೃಷ್ಣ (51) ಎಂಬವರು ಶ್ರೀ ದುರ್ಗಾಂಬಾ ಬಸ್ನ ನಿರ್ವಾಹಕರಾಗಿದ್ದು, ರಾಯಿನ್ ಉಚ್ಚಿಲ ಅವರು ಚಾಲಕರಾಗಿದ್ದಾರೆ. ಸೆಪ್ಟೆಂಬರ್ 28ರಂದು ರಾತ್ರಿ ಸುಮಾರು 9.48ಕ್ಕೆ KA-20-AD-1931 ನೋಂದಣಿ ಸಂಖ್ಯೆಯ ಬಸ್ನ್ನು ಹನುಮಾನ್ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ ನಿಲ್ಲಿಸಲಾಗಿತ್ತು

ರಾತ್ರಿ 10 ಗಂಟೆ ಸುಮಾರಿಗೆ ಕೃಷ್ಣ ಅವರು ಚಾಲಕ ರಾಯಿನ್ ಅವರೊಂದಿಗೆ ಸ್ಕೂಟರ್ನಲ್ಲಿ ಅಲ್ಲಿಂದ ತೆರಳಿದ್ದರು. ಸೆಪ್ಟೆಂಬರ್ 29ರಂದು ಬೆಳಗ್ಗೆ ಎಂದಿನಂತೆ ಬಸ್ ನಿಲ್ಲಿಸಿದ್ದ ಸ್ಥಳಕ್ಕೆ ಬಂದಾಗ ಬಸ್ ಕಾಣಿಸದಿರುವುದು ಗಮನಕ್ಕೆ ಬಂದಿದೆ.

ಅಪರಿಚಿತ ಇಬ್ಬರು ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಬಂದು ನಿಲ್ಲಿಸಿದ್ದ ಬಸ್ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ಕೃಷ್ಣ ಅವರು ನೀಡಿದ ದೂರಿನ ಆಧಾರದ ಮೇಲೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

More like this
Related

ಫ್ಲೈದುಬೈ ಹೈಡ್ರಾಮಾ; ಇರಿತಕ್ಕೊಳಗಾದರೂ 180 ಪ್ರಯಾಣಿಕರ ಪ್ರಾಣ ಉಳಿಸಿದ ಹೀರೋ ಭಾರತೀಯ ಮೂಲದ ಪೈಲಟ್

ದುಬೈ: ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌‌ಗೆ ಪ್ರಯಾಣಿಸುತ್ತಿದ್ದ ಫ್ಲೈದುಬೈ ವಿಮಾನವನ್ನು ಪತನಗೊಳಿಸಿ...

ಎಂ.ಆರ್‌‌.ಪಿ.ಎಲ್ ಸ್ಫೋಟದ ತೀವ್ರತೆಗೆ ಸುತ್ತಲಿನ 3 ಹಳ್ಳಿಗಳಲ್ಲಿ ನಡುಕ: 54 ಮನೆಗಳು, 8 ಧಾರ್ಮಿಕ ಕ್ಷೇತ್ರಗಳಿಗೆ ಹಾನಿ; ಎಫ್​ಐಆರ್​ ದಾಖಲು

ಮಂಗಳೂರು: ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಸಂಕೀರ್ಣದ ಒಳಗೆ...

ಎಂ.ಆರ್.ಪಿ.ಎಲ್. ಸ್ಪೋಟ ಪ್ರಕರಣ: ಒರ್ವ ಗುತ್ತಿಗೆ ನೌಕರ ಮೃತ್ಯು

ಮಂಗಳೂರು: ಎಂ.ಆರ್.ಪಿ.ಎಲ್.ನಲ್ಲಿ ಬುಧವಾರ ಮಧ್ಯಾಹ್ನದ ವೇಳೆ ಸಂಭವಿಸಿದ ಭಾರೀ ಸ್ಫೋಟ -...

ಕುಂದಾಪುರ – ಬಸ್ರೂರು ಭಾಗಕ್ಕೆ ಹೆಚ್ಚುವರಿ ಸರ್ಕಾರಿ ಬಸ್ಸು ಸೇವೆಗೆ ವಿಕಾಸ್ ಹೆಗ್ಡೆ ಆಗ್ರಹ

ಕುಂದಾಪುರ: ಕುಂದಾಪುರ ಕುಂದಾಪುರ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಾದ ಮೂಡ್ಲಕಟ್ಟೆ ಹಾಗೂ ಬಸ್ರೂರು...

Copying is disabled on Udupi Digital News.