Wednesday, October 14, 2026

ಉಚ್ಚಿಲ ದಸರಾ ನೃತ್ಯೋತ್ಸವ: ಉಡುಪಿಯ ಎಕ್ಸ್ಟ್ರೀಮ್ ಡಾನ್ಸ್ ಅಕಾಡೆಮಿಗೆ ಪ್ರಥಮ ಬಹುಮಾನ

ಕಾಪು: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ 5 ನೇ ವರ್ಷದ ಉಡುಪಿ ಉಚ್ಚಿಲ ದಸರಾ-2026 ಅಂಗ ವಾಗಿ ನಡೆದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ “ದಸರಾ ನೃತ್ಯೋತ್ಸವ’ದಲ್ಲಿ ಉಡುಪಿಯ ಎಕ್ಸ್ಟೀಮ್ ಡ್ಯಾನ್ಸ್ ಅಕಾಡೆಮಿ ಪ್ರಥಮ ಪ್ರಶಸ್ತಿಯೊಂದಿಗೆ 1,55,555 ರೂ. ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ಗೆದ್ದುಕೊಂಡಿತು.

ಸಾಸ್ತಾನ ಸ್ಟೆಪ್ ಆ್ಯಂಡ್ ಸ್ಟೈಲ್ ಡಾನ್ಸ್ ಕ್ರೂ ದ್ವಿತೀಯ-ಸ್ಥಾನ (1,05,555 ರೂ.-ಟ್ರೋಫಿ), ಮಂಗಳೂರು ಎಡ ಪದವು ಡ್ಯಾನ್ಸಿಂಗ್ ಸ್ಟಾರ್ಸ್ ಸ್ಟುಡಿಯೋ ತೃತೀಯ (55,555 ರೂ.- ಮತ್ತು ಟ್ರೋಫಿ), ಬೆಂಗಳೂರು ಎ.ಎಂ.ಡಿ.ಎಸ್. ಡ್ಯಾನ್ಸ್ ಸ್ಟುಡಿಯೋ ಚತುರ್ಥ (25,555 ರೂ.-ಟ್ರೋಫಿ) ಸ್ಥಾನ ಗಳಿಸಿತು. ಭಾಗವಹಿಸಿದೆ ಎಲ್ಲ ತಂಡಗಳಿಗೆ 5 ಸಾ. ರೂ. ನೀಡಿ ಪ್ರೋತ್ಸಾಹಿಸಲಾಯಿತು.

ವಿಜೇತರಿಗೆ ಬಹುಮಾನ ವಿತರಿಸಿದ ಉಡುಪಿ ಉಚ್ಚಿಲ ದಸರಾ’ರೂವಾರಿ, ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ| ಜಿ.ಶಂಕರ್, ಉಡುಪಿ ಉಚ್ಚಿಲ ದಸರಾ ಸಂಭ್ರಮೋತ್ಸವಕ್ಕೆ ನಾಡಹಬ್ಬದ ಸ್ಪರ್ಶ ನೀಡಿ, ವಿಶ್ವವ್ಯಾಪಿಯಾಗಿ ವಿಸ್ತರಿಸಲು ದಸರಾ ನೃತ್ಯೋತ್ಸವವನ್ನು ಆಯೋಜಿಸಲಾಗುತ್ತಿದೆ ಎಂದರು.

ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ, ಉಪಾಧ್ಯಕ್ಷ ಮೋಹನ್ ಬೇಂದ್ರೆ, ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕೋಶಾಧಿ ಕಾರಿ ರತ್ನಾಕರ್ಸಾಲ್ಯಾನ್, ಮಹಿಳಾ ವಿಭಾಗದ ಅಧ್ಯಕ್ಷೆ ಕವಿತಾ ಶರತ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ್ ಎಸ್. ಸುವರ್ಣ, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ ಮಲ್ಪೆ, ಪ್ರಧಾನ ಕಾರ್ಯದರ್ಶಿ ಸತೀಶ್ ಕುಂದರ್, ಮಹಿಳಾ ಸಂಚಾಲಕಿ ಸಂಧ್ಯಾದೀಪ ಸುನಿಲ್, ಉದ್ಯಮಿಗಳಾದ ಸುನಿಲ್ ಜೋನಸ್, ಶೇಖರ್ಸಾಲ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ್ ಎಸ್.ಸುವರ್ಣ, ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಗೌತಮ್ ಕೋಡಿಕಲ್, ಯಜ್ಞೆಶ್ ಕರ್ಕೇರ ಮಿತ್ರಪಟ್ಟ, ದಿನೇಶ್ ಎರ್ಮಾಳು, ಪ್ರಮುಖರಾದ ಸುಗುಣಾ ಕರ್ಕೇರ, ಸತೀಶ್ ಅಮೀನ್ ಪಡುಕರೆ, ವಿಶ್ವಾಸ್ ಅಮೀನ್, ಕಿರಣ್ ಕುಮಾರ್ ಉದ್ಯಾವರ ಉಪಸ್ಥಿತರಿದ್ದರು. ರಾಜ್ಯ ಮಟ್ಟದ ಆಹ್ವಾನಿತ 16 ತಂಡಗಳು ಭಾಗವಹಿಸಿದ್ದವು.

More like this
Related

ತ್ರಿವರ್ಣ ಧ್ವಜ ಪ್ರದರ್ಶಿಸಿದ್ದಕ್ಕೆ ಯುವಕರ ಬಂಧನ: ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಕಿಡಿ

ನವದೆಹಲಿ: ಶಾಂತಿಯುತ ಪ್ರತಿಭಟನೆ ನಡೆಸುವ ವೇಳೆ ರಾಷ್ಟ್ರಧ್ವಜ ಪ್ರದರ್ಶಿಸಿದ ಯುವಕರನ್ನು ಜೈಲಿಗೆ...

ಗೃಹಜ್ಯೋತಿ ಯೋಜನೆಯ ದಾಖಲೆ ಮರುಪರಿಶೀಲನಾ ಪ್ರಕ್ರಿಯೆ ಅ. 31 ರ ವರೆಗೆ ವಿಸ್ತರಣೆ: ರಮೇಶ್ ಕಾಂಚನ್

ಉಡುಪಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ...

ಸಂಜೀವಿನಿ ಗೋಧಾಮ ರೈತಪೀಠ ಪ್ರಶಸ್ತಿ : ಸಮಾಲೋಚನಾ ಸಭೆ

ರೈತಪೀಠ ಪ್ರಶಸ್ತಿ ದಕ್ಷಿಣ ಭಾರತಕ್ಕೆ ವಿಸ್ತರಣೆ : 2027ರ ಜನವರಿಯಲ್ಲಿ ಪ್ರಶಸ್ತಿ...

ಗ್ರೋವ್‌ ನಿವ್ವಳ ಲಾಭದಲ್ಲಿ ಶೇ.1.4 ಇಳಿಕೆ: ಷೇರು ಬೆಲೆಯೂ ಕುಸಿತ

ನವದೆಹಲಿ: ಬ್ರೋಕರೇಜ್ ಸೇವೆ ಒದಗಿಸುವ ಗ್ರೋವ್‌ (Groww) ಸಂಸ್ಥೆಯ ಮಾತೃ ಕಂಪನಿ...

Copying is disabled on Udupi Digital News.