Friday, May 1, 2026

ಮೇ 3 ರಂದು ಉಡುಪಿ ತಾಲೂಕು ಹದಿನಾರನೇ ಕನ್ನಡ ಸಾಹಿತ್ಯ ಸಮ್ಮೇಳನ ‘ಭೀಷ್ಮೋತ್ಸವ’

ಉಡುಪಿ: ಉಡುಪಿ ತಾಲೂಕು ಹದಿನಾರನೇ ಕನ್ನಡ ಸಾಹಿತ್ಯ ಸಮ್ಮೇಳನ ‘ಭೀಷ್ಮೋತ್ಸವ’ ಸಾಹಿತ್ಯ -ಸಂಸ್ಕೃತಿ -ಕಲೋತ್ಸವವು ಇದೇ ಭಾನುವಾರ ಮೇ 3ರಂದು ಉಡುಪಿಯ ಯಕ್ಷಗಾನ ಕಲಾರಂಗದ ಐ ವೈ ಸಿ ಸಭಾಂಗಣದಲ್ಲಿ ಕೆಮ್ತೂರು ದೊಡ್ಡಣ್ಣ ಶೆಟ್ಟಿ ವೇದಿಕೆಯಲ್ಲಿ ನಡೆಯಲಿದೆ ಎಂದು ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್ಪಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿರುತ್ತಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಾ. ಭಾಸ್ಕರಾನಂದ ಕುಮಾರ್ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆಯುವ ಈ ಸಮ್ಮೇಳನವು ಬೆಳಗ್ಗೆ ಎಂಟು ಮೂವತ್ತಕ್ಕೆ ಮೆರವಣಿಗೆಯೊಂದಿಗೆ ಪ್ರಾರಂಭವಾಗುತ್ತದೆ. ನಂತರ ಧ್ವಜಾರೋಹಣ, ಸಾಹಿತಿ ರಾಮದಾಸ್ ನೆನಪಿನ ಪುಸ್ತಕ ಮಳಿಗೆ, ಗಮಕ ಸೌರಭ, ಚಿತ್ರ ಕಲಾವಿದರಾದ ಆಸ್ಟ್ರೋಮೋಹನ್ ಹಾಗೂ ಜನಾರ್ಧನ ಕೊಡವೂರು ಸಂಪಾದಿತ ‘ಚಿತ್ರಮಯ ಉಡುಪಿ ‘ ಉದ್ಘಾಟನೆ, ನಿತ್ಯಾನಂದ ನಾಯಕ್ ಅವರ ಮುರಲ್ ಕಲಾಕೃತಿಗಳ ಪ್ರದರ್ಶನದ ಉದ್ಘಾಟನೆ ನಡೆಯಲಿದೆ.
ನಂತರ 10 ಗಂಟೆಗೆ ಸರಿಯಾಗಿ ಸಮ್ಮೇಳನ ಅಧ್ಯಕ್ಷರ ಪರಿಚಯದ ನುಡಿ ಚಿತ್ರ ಬಿಡುಗಡೆಯೊಂದಿಗೆ ಸಮ್ಮೇಳನದ ಉದ್ಘಾಟನಾ ಸಮಾರಂಭ ನೆರವೇರುತ್ತದೆ.

ಸಮ್ಮೇಳನದ ಉದ್ಘಾಟನೆಯನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಮೋಹನ್ ಆಳ್ವ ಅವರು ನಡೆಸಲಿದ್ದು, ಗಣ್ಯರು ಭಾಗವಹಿಸಲಿದ್ದಾರೆ. ಇದೇ ಸಮಯದಲ್ಲಿ ಕಸಾಪ ಉಡುಪಿ ತಾಲೂಕು ಗೌರವ ಪುರಸ್ಕಾರವನ್ನು ವಿವಿಧ ಕ್ಷೇತ್ರದ ಸಾಧಕರಾದ ತಿಲಕನಾಥ್ ಮಂಜೇಶ್ವರ , ಗೋಪಾಲ್ ಭಟ್ ಎಂ, ವಿಮಲಾ ಚಂದ್ರಶೇಖರ್, ಮರವಂತೆ ನಾಗರಾಜ್ ಹೆಬ್ಬಾರ್, ಕೆ ರಂಜನ್ , ಲಕ್ಷ್ಮಿ ಹರಿಶ್ಚಂದ್ರ, ಅ. ರಾ. ಪ್ರಭಾಕರ್ ಪೂಜಾರಿ, ವಿಘ್ನೇಶ್ವರ ಅಡಿಗ, ಪಿ.ಎಂ. ವೇಣು ಗೋಪಾಲ್ ಹೆಬ್ಬಾರ್, ಶ್ರೀಕಾಂತ್ ಭಟ್ ವಿದ್ಯಾಲತಾ ಯು. ಶೆಟ್ಟಿ ಇವರಿಗೆ ನೀಡಿ ಗೌರವಿಸಲಾಗುವುದು.

ನಂತರ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯಾಯ ಅವರಿಂದ ಗೀತ ಗಾಯನ ನಡೆದು , ಉಡುಪಿ ತಾಲೂಕಿನ ಎಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದ ಸುಮಾರು 50 ಮಂದಿ ವಿದ್ಯಾಥಿ೯ಗಳನ್ನು ಗೌರವಿಸಲಾಗುವುದು. 12 ಗಂಟೆಗೆ ಬಹುಮುಖಿ ಕನ್ನಡ ಕವಿ ಗೋಷ್ಠಿ ನಡೆಯಲಿದ್ದು ಇದರ ಆಶಯ ನುಡಿಯನ್ನು ಡಾ. ರಶ್ಮಿ ಅಮ್ಮೆಂಬಳ ಹಾಗೂ ಸಮನ್ವಯವನ್ನು ಶ್ರೀಮತಿ ಸುಧಾ ಆಡುಕಳ ನಡೆಸಿಕೊಡಲಿದ್ದಾರೆ.

ಮದ್ಯಾಹ್ನ 1: 15 ರಿಂದ ಹೆಜ್ಜೆಗೆಜ್ಜೆ (ರಿ ) ಉಡುಪಿ – ಮಣಿಪಾಲ ಇವರಿಂದ ‘ನೃತ್ಯ ಸಿಂಚನ ‘ ಕಾರ್ಯಕ್ರಮ ನಡೆಯಲಿದೆ. ನಂತರ ಸುಹಾಸಂ ಉಡುಪಿ ಇದರ ಅಧ್ಯಕ್ಷರಾದ ಶ್ರೀಮತಿ ಸಂಧ್ಯಾ ಶೆಣೈ ಉಡುಪಿ ಇವರಿಂದ ಹಾಸ್ಯ ಸಮಯ ‘ಆಪ್ತಮಿತ್ರರ ಕಚಗುಳಿ ‘ ನಡೆಯಲಿದೆ. ಮಧ್ಯಾಹ್ನ ಎರಡು ಇಪ್ಪತ್ತಕ್ಕೆ ವಿಚಾರಗೋಷ್ಠಿಯಲ್ಲಿ ನಿತ್ಯಾನಂದ ಪಡ್ರೆ , ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ, ಗುರುರಾಜ್ ಸನಿಲ್ ಅವರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 3:35 ಕ್ಕೆ ಸಮ್ಮೇಳನಾಧ್ಯಕ್ಷರಾದ ಡಾ.ಭಾಸ್ಕರಾನಂದ ಕುಮಾರ್ ಅವರೊಂದಿಗೆ ಮುಖಾಮುಖಿ ನಡೆಯಲಿದ್ದು, ಬನ್ನಂಜೆ ಸಂಜೀವ ಸುವರ್ಣ,ಮುರಳಿ ಕಡೆಕಾರ್ ಉದ್ಯಾವರ ನಾಗೇಶ್, ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಭಾಗವಹಿಸಲಿದ್ದಾರೆ.

ಸಂಜೆ 4:30 ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು ಡಾ. ಗಣನಾಥ್ ಶೆಟ್ಟಿ ಎಕ್ಕಾರ್ ಸಮಾರೋಪ ಭಾಷಣ ಮಾಡಲಿದ್ದಾರೆ, ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 23 ಮಂದಿ ಗಣ್ಯರನ್ನು ಮತ್ತು 5 ಸಂಘ ಸಂಸ್ಥೆಗಳನ್ನು ಗುರುತಿಸಿ ಗೌರವಿಸಲಾಗುವುದು. ಸಂಜೆ 6 ಗಂಟೆಗೆ ಸರಿಯಾಗಿ ರಾಜೇಶ್ ಭಟ್ ಪಣಿಯಾಡಿ ಅವರ ನಿರ್ದೇಶನದ ‘ಕತ್ತಲೆ ರಾಜ್ಯದ ಮರ್ಕಟ ರಾಜ ‘ ಎಂಬ ಮಕ್ಕಳ ನಾಟಕ ಪ್ರದರ್ಶನಕೊಳ್ಳುವುದು ಸುಮಾರು 12 ಗಂಟೆಗಳ ಕಾಲ ನಿರಂತರವಾಗಿ ನಡೆಯುವ ಈ ಸಮ್ಮೇಳನಕ್ಕೆ ಎಲ್ಲಾ ಸಾಹಿತ್ಯ ಅಭಿಮಾನಿಗಳು ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಕ ಸಾ ಪ ಉಡುಪಿ ತಾಲೂಕು ಗೌರವ ಸಲಹೆಗಾರರಾದ ವಿಶ್ವನಾಥ್ ಶೆಣೈ, ಭವನಪ್ರಸಾದ್ ಹೆಗ್ಡೆ, ಗೌರವ ಕಾರ್ಯದರ್ಶಿ ರಂಜಿನಿ ವಸಂತ್, ಸ್ವಾಗತ ಸಮಿತಿ ಕಾರ್ಯದರ್ಶಿ ಸತೀಶ್ ಕೊಡವೂರು, ಕಾನೂನು ಸಲಹೆಗಾರ ವಿನಯ್ ಆಚಾರ್ಯ ಮುಂಡ್ಕೂರು, ಸಾಂಸ್ಕೃತಿಕ ಕಾರ್ಯದರ್ಶಿ ವಸಂತ್ ಉಪಸ್ಥಿತರಿದ್ದರು.

More like this
Related

ವಿಕೆಟ್ ಪಡೆಯುವುದರಲ್ಲೇ ಗೆಲುವಿನ ಅವಕಾಶ ಇತ್ತು: ಭುವನೇಶ್ವರ್ ಕುಮಾರ್

ಅಹಮದಾಬಾದ್, : ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ರನ್‌ಗಳನ್ನು ಕಾಪಾಡುವುದಕ್ಕಿಂತ ವಿಕೆಟ್‌ಗಳನ್ನು...

ವಿಕೆಟ್‌ಗಳನ್ನು ಸರಣಿಯಾಗಿ ಕಳೆದುಕೊಂಡದ್ದು ಸೋಲಿಗೆ ಕಾರಣ: ಆರ್‌ಸಿಬಿ ಬಗ್ಗೆ ದಿನೇಶ್ ಕಾರ್ತಿಕ್ ವಿಶ್ಲೇಷಣೆ

ಅಹಮದಾಬಾದ್, : ಗುಜರಾತ್ ಟೈಟನ್ಸ್ ವಿರುದ್ಧದ ಸೋಲಿನ ಬಳಿಕ ರಾಯಲ್ ಚಾಲೆಂಜರ್ಸ್...

ಹೋರ್ಮುಜ್ ಜಲಸಂಧಿ ಬಂದ್ ಪರಿಣಾಮ: ಪಾಕಿಸ್ತಾನದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ

ಇಸ್ಲಾಮಾಬಾದ್, : ಇರಾನ್-ಅಮೆರಿಕಾ ಸಂಘರ್ಷದ ನಡುವೆ ಹೋರ್ಮುಜ್ ಜಲಸಂಧಿ ಬಂದ್ ಆಗಿರುವ...

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಏರಿಕೆಗೆ ಕೇಂದ್ರವೇ ಹೊಣೆ: ಡಿಕೆ ಶಿವಕುಮಾರ್

ಬೆಂಗಳೂರು,: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ...

Copying is disabled on Udupi Digital News.