Thursday, May 7, 2026

ಉಡುಪಿ ಶೋಕಮಾತಾ ಚರ್ಚಿನ ನೂತನ ಧರ್ಮಗುರುಗಳಾಗಿ ವಂ|ಡೆನಿಸ್ ಡೆಸಾ ಅಧಿಕಾರ ಸ್ವೀಕಾರ

ಉಡುಪಿ : ನಗರದ ಪ್ರತಿಷ್ಠಿತ ಶೋಕಮಾತಾ ಚರ್ಚಿನ ನೂತನ ಧರ್ಮಗುರುಗಳಾಗಿ ಅತೀ ವಂ| ಡೆನಿಸ್ ಡೆಸಾ ಗುರುವಾರ ಅಧಿಕಾರ ಸ್ವೀಕರಿಸಿದರು.

ತೊಟ್ಟಂ ಸಂತ ಅನ್ನಮ್ಮ ಚರ್ಚಿನಿಂದ ವರ್ಗಾವಣೆಗೊಂಡು ಉಡುಪಿ ಚರ್ಚಿಗೆ ಆಗಮಿಸಿ ನೂತನ ಧರ್ಮಗುರುಗಳನ್ನು ಪ್ರಧಾನ ಧರ್ಮಗುರು ವಂ|ಚಾರ್ಲ್ಸ್ ಮಿನೇಜಸ್, ಉಪಾಧ್ಯಕ್ಷರಾದ ಮ್ಯಾಕ್ಷಿಮ್ ಡಿಸೋಜಾ ಆತ್ಮೀಯವಾಗಿ ಸ್ವಾಗತಿಸಿದರು.

ಚರ್ಚಿನಲ್ಲಿ ನಡೆದ ಅಧಿಕಾರ ಸ್ವೀಕಾರ ಸಮಾರಂಭದ ನೇತೃತ್ವನ್ನು ಧರ್ಮಾಧ್ಯಕ್ಷರ ಪ್ರತಿನಿಧಿಯಾಗಿ ಕುಲಪತಿಗಳಾದ ವಂ|ಸ್ಟೀವನ್ ಡಿಸೋಜಾ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪುತ್ತೂರು ಚರ್ಚಿನ ವಂ|ಜೆ ಬಿ ಸಲ್ಡಾನಾ, ಶೋಕಮಾತಾ ಚರ್ಚಿನ ಸಹಾಯಕ ಧರ್ಮಗುರು ವಂ|ಲಿಯೋ ಪ್ರವೀಣ್ ಡಿಸೋಜಾ, ಸಂತ ಮೇರಿ ಶಾಲೆಗಳ ಪ್ರಾಂಶುಪಾಲರಾದ ವಂ|ವಿಜಯ್ ಡಿಸೋಜಾ, ಮೂಡುಬೆಳ್ಳೆ ಚರ್ಚಿನ ವಂ|ಜೋರ್ಜ್ ಡಿಸೋಜಾ, ವಂ|ಸ್ಟೀಫನ್ ರೊಡ್ರಿಗಸ್, ಉದ್ಯಾವರ ಚರ್ಚಿನ ವಂ|ಅನಿಲ್ ಡಿಸೋಜಾ, ಮಿಲಾಗ್ರಿಸ್ ಕ್ಯಾಥೆಡ್ರಲ್ ನ ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್, ಪೆರಂಪಳ್ಳಿ ಚರ್ಚಿನ ವಂ|ವಿಶಾಲ್ ಲೋಬೊ, ತೊಟ್ಟಂ ಚರ್ಚಿನ ವಂ|ಹೆನ್ರಿ ಮಸ್ಕರೇನ್ಹಸ್, ನಿವೃತ್ತ ಧರ್ಮಗುರು ವಂ|ವಿಲಿಯಂ ಮಾರ್ಟಿಸ್, ಉಜ್ವಾಡ್ ಪತ್ರಿಕೆಯ ಸಂಪಾದಕರಾದ ವಂ|ಆಲ್ವಿನ್, ವಂ|ಅಶ್ವಿನ್ ಆರಾನ್ಹಾ ಉಪಸ್ಥಿತರಿದ್ದರು.

ಉಡುಪಿ ಚರ್ಚಿನಲ್ಲಿ ಪ್ರಧಾನ ಧರ್ಮಗುರುಗಳಾಗಿ ಸೇವೆಯಲ್ಲಿದ್ದ ವಂ| ಚಾರ್ಲ್ಸ್ ಮಿನೇಜಸ್ ಅವರನ್ನು ಶಿರ್ವ ಆರೋಗ್ಯ ಮಾತಾ ದೇವಾಲಯದ ಧರ್ಮಗುರುಗಳಾಗಿ ವರ್ಗಾವಣೆಗೊಳಿಸಲಾಗಿದೆ.

More like this
Related

ಕೊಡವೂರು ಮಹಾ ರುದ್ರ ಯಾಗ : ಮಹರ್ಷಿ ಅನಂದ ಗುರೂಜಿಗೆ ಆಹ್ವಾನ

ಬೆಂಗಳೂರು: ಉಡುಪಿ ಜಿಲ್ಲೆಯ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಶ್ರೀ ಪ್ರಸಾದ್...

ಮಣಿಪಾಲ| ಅವಧಿ ಮೀರಿ ರೂಸ್ಟರ್ ಹೋಟೆಲ್‌ ಕಾರ್ಯಾಚರಣೆ : ಪ್ರಕರಣ ದಾಖಲು

ಉಡುಪಿ: ಅವಧಿ ಮೀರಿ ಹೋಟೆಲ್‌ ಕಾರ್ಯಾಚರಣೆ ನಡೆಸಿ ಸಾರ್ವಜನಿಕರಿಗೆ ತೊಂದರೆ ಉಂಟು...

ಲಾಕ್ ಮಾಡಿದ ಮನೆಗಳ ಭದ್ರತೆಗೆ ಉಡುಪಿ ಪೊಲೀಸರಿಂದ ‘ಲಾಕ್ಡ್ ಹೌಸ್ ಬೀಟ್ ಸಿಸ್ಟಮ್’ ಆರಂಭ

ಉಡುಪಿ: ಸಾರ್ವಜನಿಕರು ಕೆಲಸದ ನಿಮಿತ್ತ ಅಥವಾ ಪ್ರವಾಸಕ್ಕಾಗಿ ಮನೆಯನ್ನು ಲಾಕ್ ಮಾಡಿ...

ಉಡುಪಿ ಡಿ.ಎ.ಆರ್ ಎ.ಆರ್.ಎಸ್.ಐ ನಾಗೇಶ್ ಎಂ ನಿಧನ

ಉಡುಪಿ: ಉಡುಪಿ ಜಿಲ್ಲಾ ಡಿಎಆರ್ ವಿಭಾಗದಲ್ಲಿ ಎಆರ್ಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ...

Copying is disabled on Udupi Digital News.