Monday, June 15, 2026

ಭಾರತೀಯರಿಗೆ ವೀಸಾ ನಿರ್ಬಂಧ ವಿಸ್ತರಿಸಿದ ಬಾಂಗ್ಲಾದೇಶ

ಢಾಕಾ: ಬಾಂಗ್ಲಾದೇಶ ಭಾರತೀಯ ಪ್ರಜೆಗಳಿಗೆ ವೀಸಾ ನಿರ್ಬಂಧವನ್ನು ಮತ್ತಷ್ಟು ಬಿಗಿಗೊಳಿಸಿದೆ. ಗುರುವಾರದಿಂದ ವೀಸಾ ಅಮಾನತು ಕೋಲ್ಕತಾ, ಮುಂಬೈ ಮತ್ತು ಚೆನ್ನೈನಲ್ಲಿರುವ ಬಾಂಗ್ಲಾದ ಉಪ ಹೈಕಮಿಷನ್‍ಗಳಿಗೆ ವಿಸ್ತರಿಸುತ್ತದೆ ಎಂದು ಮೂಲಗಳನ್ನು ಉಲ್ಲೇಖಿಸಿ `ಢಾಕಾ ಟ್ರಿಬ್ಯೂನ್’ ವರದಿ ಮಾಡಿದೆ.

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಪ್ರತಿಭಟನೆ ಮತ್ತು ಭದ್ರತಾ ಸ್ಥಿತಿಗಳ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಭಾರತವು ಬಾಂಗ್ಲಾದ ಖುಲ್ನಾ ಮತ್ತು ರಾಜ್‍ಶಾಹಿ ನಗರದಲ್ಲಿನ ಎರಡು ವೀಸಾ ಅರ್ಜಿ ಕೇಂದ್ರಗಳನ್ನು ಮುಚ್ಚಿತ್ತು. ಅದರ ಮರುದಿನವೇ ಬಾಂಗ್ಲಾದೇಶದ ಹೈಕಮಿಷನ್ ಹೊಸದಿಲ್ಲಿಯಲ್ಲಿ ವೀಸಾ ಮತ್ತು ಕಾನ್ಸುಲರ್ ಸೇವೆಗಳನ್ನು ಅಮಾನತುಗೊಳಿಸಿತ್ತು. ಇದೀಗ ಈ ಕ್ರಮವನ್ನು ಕೋಲ್ಕತಾ, ಮುಂಬೈ ಮತ್ತು ಚೆನ್ನೈ ನಗರಗಳಿಗೆ ವಿಸ್ತರಿಸಲಾಗಿದೆ. ಹೊಸ ಕ್ರಮಗಳ ಅಡಿಯಲ್ಲಿ ವ್ಯಾಪಾರ ಮತ್ತು ಉದ್ಯೋಗ ವೀಸಾಗಳನ್ನು ಹೊರತುಪಡಿಸಿ ಎಲ್ಲಾ ವೀಸಾ ವಿಭಾಗಗಳನ್ನು ಅಮಾನತುಗೊಳಿಸಲಾಗಿದೆ ಎಂದು ವರದಿ ಹೇಳಿದೆ.

More like this
Related

ಕೊಡವೂರು: ಶಂಕರನಾರಾಯಣ ದೇವಸ್ಥಾನದ ತಾತ್ಕಾಲಿಕ ಮೇಲುಸ್ತುವಾರಿ ವೆಂಕಟಕೃಷ್ಣ ನಾಪತ್ತೆ

ಮಲ್ಪೆ: ಉಡುಪಿ ತಾಲೂಕಿನ ಕೊಡವೂರು ಗ್ರಾಮದ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ತಾತ್ಕಾಲಿಕ...

ಜೂನ್ 17: ಕುಂದಾಪುರ ತಾಲೂಕು ಕಾರ್ಯನಿರತ‌ ಪತ್ರಕರ್ತರ ಸಂಘದಿಂದ‌ ‘ವಿಶ್ವ ಪರಿಸರ ದಿನಾಚರಣೆ’

ಕುಂದಾಪುರ: ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅರಣ್ಯ ಇಲಾಖೆ...

ಮೋಸದಾಟಗಳಿಂದ ಚುನಾವಣೆ ಸೋಲು: ಕೆ. ಜಯಪ್ರಕಾಶ್ ಹೆಗ್ಡೆ

ವಂಡ್ಸೆಯಲ್ಲಿ ಕಾಂಗ್ರೆಸ್‌ನಿಂದ ಎಸ್‌ಐಆರ್ ಮತದಾರ ಪರಿಷ್ಕರಣೆ ತರಬೇತಿ ಕಾರ್ಯಕ್ರಮ ಕುಂದಾಪುರ: ದೇಶದ ವಿವಿಧ...

ಕುಂದಾಪುರ: ಬೈಕ್ ಕಳವು ಆರೋಪಿ ಬಂಧನ

ಕುಂದಾಪುರ: ಕಳೆದ ಮಾರ್ಚ್ ತಿಂಗಳಲ್ಲಿ ನಗರದ ಮನೆಯೊಂದಕ್ಕೆ ಕನ್ನ ಹಾಕಿ ನಗದು...

Copying is disabled on Udupi Digital News.