Wednesday, September 16, 2026

ಪಾನಮತ್ತ ಪೈಲಟ್ ವಿರುದ್ಧ ಜ.26ರೊಳಗೆ ಕ್ರಮ ಕೈಗೊಳ್ಳಿ: ಏರ್ ಇಂಡಿಯಾಗೆ ಕೆನಡಾ ಸೂಚನೆ

ಹೊಸದಿಲ್ಲಿ: ದೇಶದ ಕಾನೂನನ್ನು ಉಲ್ಲಂಘಿಸಿ 2025ರ ಡಿಸೆಂಬರ್ 23ರಂದು ವಿಮಾನ ಚಲಾವಣೆಗೆ ಮುನ್ನ ಮದ್ಯಪಾನ ಮಾಡಿದ್ದ ಪೈಲಟ್ ವಿರುದ್ಧ ಈ ತಿಂಗಳ 26ರೊಳಗೆ ಕ್ರಮ ಕೈಗೊಂಡು ಮಾಹಿತಿ ನೀಡುವಂತೆ ಕೆನಡಾ ಸರ್ಕಾರ ಏರ್ ಇಂಡಿಯಾಗೆ ಸೂಚನೆ ನೀಡಿದೆ.

ಉಸಿರಾಟ ವಿಶ್ಲೇಷಕ ( breathalyser) ಪರೀಕ್ಷೆಯಲ್ಲಿ ಪೈಲಟ್ ಮದ್ಯಪಾನ ಮಾಡಿರುವುದು ದೃಢಪಟ್ಟ ಮರುದಿನವೇ ಟ್ರಾನ್ಸ್ ಪೋರ್ಟ್ ಕೆನಡಾ ಈ ಬಗ್ಗೆ ಏರ್ ಇಂಡಿಯಾಗೆ ಮಾಹಿತಿ ನೀಡಿದ್ದು, ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ತಡೆಯಲು ಇಲಾಖೆಯ ಸುರಕ್ಷಾ ನಿರ್ವಹಣಾ ವ್ಯವಸ್ಥೆಯಡಿ “ಪರಿಹಾರಾತ್ಮಕ ಕ್ರಮ” ಕೈಗೊಳ್ಳುವಂತೆ ಆದೇಶ ನೀಡಿದೆ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಏರ್ ಇಂಡಿಯಾ, ಪರೀಕ್ಷೆಯಲ್ಲಿ ಪತ್ತೆಯಾದ ಆಲ್ಕೋಹಾಲ್ ಮಟ್ಟ ಸೇರಿದಂತೆ ಕೆನಡಾದಿಂದ ಬ್ರೀಥಲೈಸರ್ ಪರೀಕ್ಷೆಯ ವಿವರಗಳನ್ನು ಕೋರಿದೆ ಎಂದು ಡಿಜಿಸಿಎಗೆ ತಿಳಿಸಿದೆ.

“ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (ಆರ್ಸಿಎಂಪಿ) ನೀಡಿದ ಮಾಹಿತಿಯಂತೆ ಕ್ಯಾಪ್ಟನ್ ಅವರು ಏರ್ ಇಂಡಿಯಾ ವಿಮಾನ ಎಐ 186ಗೆ ಡಿಸೆಂಬರ್ 23ರಂದು ಕರ್ತವ್ಯಕ್ಕೆ ಹಾಜರಾಗುವ ಮುನ್ನ ಆಲ್ಕೋಹಾಲ್ ಸೇವಿಸಿರುವುದು ಪತ್ತೆಯಾಗಿದ್ದು, ಕರ್ತವ್ಯಕ್ಕೆ ಸೂಕ್ತವಲ್ಲ ಎಂದು ನಿರ್ಧರಿಸಲಾಗಿತ್ತು. ವ್ಯಾಂಕೋವರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಸಿದ ಬಿಎ ಪರೀಕ್ಷೆಯಲ್ಲಿ ಇದು ದೃಢಪಟ್ಟಿದ್ದು, ವಿಮಾನದಿಂದ ಹೊರ ತೆರಳುವಂತೆ ಸೂಚಿಸಲಾಗಿತ್ತು. ಇದು ಕೆನಡಾದ ವೈಮಾನಿಕ ನಿಬಂಧನೆಗಳಿಗೆ ವಿರುದ್ಧ ಎಂದು ನಿರ್ಧರಿಸಲಾಗಿದ್ದು, ಇದು ಟಿಸಿಸಿಎ ನೀಡುವ ಏರ್ ಇಂಡಿಯಾದ ವಿದೇಶಿ ವಿಮಾನ ಆಪರೇಟರ್ ಸರ್ಟಿಫಿಕೆಟ್ ಗೆ ಕೂಡಾ ವಿರುದ್ಧ ಎಂದು ನಿರ್ಧರಿಸಲಾಗಿದೆ” ಎಂದು ಏರ್ ಇಂಡಿಯಾಗೆ ಬರೆದ ಪತ್ರದಲ್ಲಿ ಹೇಳಲಾಗಿದೆ.

More like this
Related

ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ : ಕರಾವಳಿಯ ಅಭಿವೃದ್ಧಿಗೆ ಹೊಸ ದಿಕ್ಕು – ರಮೇಶ್ ಕಾಂಚನ್

ಉಡುಪಿ: ಕಡಲನಗರಿ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಿ ಸರ್ಕಾರದ ಆಡಳಿತವನ್ನು...

ಸೆ. 18 ರಂದು ಹೆಬ್ರಿಗೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭೇಟಿ, ಕಸ್ತೂರಿ ರಂಗನ್ ವರದಿ ಕುರಿತು ಸಭೆ

ಉಡುಪಿ: ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರು ಸೆಪ್ಟಂಬರ್ 18 ರಂದು ಜಿಲ್ಲೆಯ...

ಸೆ. 17ರಂದು ಉಡುಪಿ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಕೊಳ್ಕೆಬೈಲು ಕಿಶನ್ ಹೆಗ್ಡೆ ಅಧಿಕಾರ ಸ್ವೀಕಾರ

ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ನ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಕೊಳ್ಕೆಬೈಲು ಕಿಶನ್...

ದ್ವಿಚಕ್ರ ವಾಹನಕ್ಕೆ ಹಾಲು ಸಾಗಾಟದ ಟ್ಯಾಂಕರ್ ಢಿಕ್ಕಿ: ಒಂದೇ ಕುಟುಂಬದ ಮೂವರು ಮೃತ್ಯು

ಸ್ವಗ್ರಾಮದಲ್ಲಿ ಚೌತಿ ಹಬ್ಬ ಮುಗಿಸಿ ಊರಿಗೆ ಮರಳುತ್ತಿದ್ದ ವೇಳೆ ದುರ್ಘಟನೆ ಮಂಡ್ಯ: ದ್ವಿಚಕ್ರ...

Copying is disabled on Udupi Digital News.