ನವದೆಹಲಿ : ಸೆಪ್ಟೆಂಬರ್ ತಿಂಗಳ ಮೊದಲ ದಿನವೇ ತೈಲ ಮಾರುಕಟ್ಟೆ ಕಂಪನಿಗಳು ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿವೆ. 19 ಕೆಜಿ ತೂಕದ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರವನ್ನು ಪ್ರತಿ ಸಿಲಿಂಡರ್ಗೆ 9.50 ರೂ.ನಷ್ಟು ಹೆಚ್ಚಳ ಮಾಡಲಾಗಿದೆ. ಇದೇ ವೇಳೆ, 5 ಕೆಜಿ ಗೃಹಬಳಕೆಯೇತರ ಸಿಲಿಂಡರ್ ಬೆಲೆಯನ್ನು 2 ರೂ. ರಷ್ಟು ಹೆಚ್ಚಿಸಲಾಗಿದ್ದು , 14.2 ಕೆಜಿ ತೂಕದ ಸಾಮಾನ್ಯ ಗೃಹಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಪ್ರಮುಖ ನಗರಗಳಲ್ಲಿ ಹೊಸ ದರಪಟ್ಟಿ ನವದೆಹಲಿ: 2,738 ರೂ. ಗಳಿಂದ 2,747.50 ರೂ.ಗೆ ಏರಿಕೆಯಾಗಿದೆ. ಮುಂಬೈ: 2691.50 ರೂ.ನಿಂದ 2701 ರೂ.ಗೆ ಏರಿಕೆಯಾಗಿದೆ. ಚೆನ್ನೈ: 2,906 ರೂ.ನಿಂದ 2,916.50 ರೂ.ಗೆ ಏರಿಕೆಯಾಗಿದೆ. ಗುರುಗ್ರಾಮ : 2,764 ರೂ.ಗೆ ಲಭ್ಯವಿದೆ. ನೋಯ್ಡಾ: 2,747.50 ರೂ.ಗೆ ಲಭ್ಯವಿದೆ. ಲಕ್ನೋ: 2,870 ರೂ.ಗೆ ಏರಿಕೆಯಾಗಿದೆ. ಪಾಟ್ನಾ: 3,044 ರೂ.ಗೆ ಏರಿಕೆಯಾಗಿದೆ.ಬೆಂಗಳೂರಿನಲ್ಲಿ 3,021 ರೂ.ನಷ್ಟಿತ್ತು.
14.2 ಕೆಜಿ ಗೃಹಬಳಕೆ ಎಲ್ಪಿಜಿ ಸಿಲಿಂಡರ್ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲಾಗಿದ್ದು, ತಿಂಗಳ ಬಜೆಟ್ ಮೇಲೆ ಯಾವುದೇ ತಕ್ಷಣದ ಪರಿಣಾಮ ಬೀರುವುದಿಲ್ಲ.




