Saturday, April 18, 2026

ಬಹುಮತ ಪಡೆಯುವಲ್ಲಿ NDA ವಿಫಲ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಸೋಲು

ಯುಡಿ ನ್ಯೂಸ್ ಡಾಟ್ ಕಾಮ್


ನವದೆಹಲಿ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮತ್ತು ಕ್ಷೇತ್ರ ಮರುವಿಂಗಡಣೆ ಮಸೂದೆ ಸೇರಿದಂತೆ ಸಂವಿಧಾನ ತಿದ್ದುಪಡಿ ಮಸೂದೆಗೆ ಹಿನ್ನಡೆಯಾಗಿದ್ದು, 2/3ರಷ್ಟು ಮತಬಲವನ್ನು ಪಡೆಯಲು ವಿಫಲವಾದ ಕಾರಣ ಮಸೂದೆಗಳಿಗೆ ಸೋಲುಂಟಾಗಿದೆ.

ಮಸೂದೆಗಳ ಅಂಗೀಕಾರವಾಗಲು ಮೂರನೇ ಎರಡರಷ್ಟು ಅಂದರೆ 360 ಮತಗಳ ಅಗತ್ಯವಿತ್ತು. ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಬಳಿ 297 ಸದಸ್ಯರ ಬಲವಿದ್ದರೆ, ವಿಪಕ್ಷಗಳ ಒಕ್ಕೂಟ ಇಂಡಿಯಾ ಮೈತ್ರಿಕೂಟದ ಬಲ 234 ಆಗಿತ್ತು. ಮತ ವಿಭಜನೆಯಾಗಿ ಒಟ್ಟು 489 ಸದಸ್ಯರು ಉಪಸ್ಥಿತರಿದ್ದರು.

ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ 298-230 ಮತಗಳಿಂದ ಸೋಲುಂಟಾಗಿದೆ. ಕ್ಷೇತ್ರ ಮರುವಿಂಗಡಣೆ ಮಸೂದೆಗೆ 489 ಮತಗಳಲ್ಲಿ 278 ಮತಗಳು ಚಲಾವಣೆಯಾಗಿದೆ. ಆದರೆ 211 ಮತಗಳು ಅದರ ವಿರುದ್ಧವಾಗಿ ಚಲಾವಣೆಯಾಗಿದೆ.

2023ರಲ್ಲೇ ಮಹಿಳಾ ಮೀಸಲಾತಿ ಸಂಸತ್ತಿನ ಎರಡೂ ಸದನಗಳಲ್ಲಿ ಅಂಗೀಕಾರಗೊಂಡಿದೆ. ಆದರೆ ಜನಗಣತಿ, ಕ್ಷೇತ್ರ ಮರುವಿಂಗಡಣೆ ಬಳಿಕವೇ ಈ ಕಾಯ್ದೆ ಜಾರಿಗೆ ಬರಲಿದೆ ಎಂದು ಮೋದಿ ಸರ್ಕಾರ ಹೇಳಿತ್ತು. ಆದರೆ ವಿಧಾನಸಭೆ ಚುನಾವಣೆಗಳ ನಡುವೆ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ವಿಶೇಷ ಅಧಿವೇಶನ ನಡೆಸಿದೆ.

2023ರ ಕಾಯ್ದೆಗೆ ತಿದ್ದುಪಡಿ ತಂದು 2011ರ ಜನಗಣತಿ ಆಧರಿಸಿ ಕ್ಷೇತ್ರ ಪುನರ್‌ ವಿಂಗಡಣೆ ಮಾಡಿ ಮಹಿಳಾ ಮೀಸಲಾತಿ ನೀಡುವ ವಿಧೇಯಕ ಮಂಡನೆ ಮಾಡಿದೆ. ಆದ್ದರಿಂದ ಮಹಿಳಾ ಮೀಸಲಾತಿಗೆ ಮತ ಹಾಕಿದರೆ ಕ್ಷೇತ್ರ ಪುನರ್‌ ವಿಂಗಡಣೆಗೂ ಮತ ಹಾಕಿದಂತಾಗುತ್ತದೆ. ಆದ್ದರಿಂದಾಗಿ ವಿಪಕ್ಷಗಳು ತಿದ್ದುಪಡಿ ಮಾಡಿದ ಮಹಿಳಾ ಮೀಸಲಾತಿ ಮಸೂದೆಗೂ ವಿರೋಧ ವ್ಯಕ್ತಪಡಿಸಿದೆ.

More like this
Related

ಮೇ 14-19 ರವರೆಗೆ ಕೊಡವೂರು ಶ್ರೀ ಶಂಕರನಾರಾಯಣ ಸನ್ನಿಧಾನದಲ್ಲಿ ಮಹಾ ರುದ್ರಯಾಗ

ಯುಡಿ ನ್ಯೂಸ್ ಡಾಟ್ ಕಾಮ್ಉಡುಪಿ: ಮಹತೋಭಾರ ಶ್ರೀ ಶಂಕರನಾರಾಯಣ ಸನ್ನಿಧಾನದ ಕೊಡವೂರಿನಲ್ಲಿ...

ವಿದ್ಯಾರ್ಥಿಗಳ ಸಾಧನೆ ಮಾರುಕಟ್ಟೆಯ ಸರಕಾಗಬಾರದು: ಬಿ.ಎಂ.ಸುಕುಮಾರ ಶೆಟ್ಟಿ

50 ವರ್ಷದ ಕುಂದಾಪುರ ಎಜುಕೇಷನ್ ಸೊಸೈಟಿ ಸಾಧನೆ. ಸಾಮಾನ್ಯರಿಗೂ ಪ್ರವೇಶ |...

ನೌಕಾ ದಿಗ್ಬಂಧನ ತೆಗೆಯದಿದ್ದರೆ ಹಾರ್ಮುಜ್‌ ಜಲಸಂಧಿಯನ್ನ ಮತ್ತೆ ಮುಚ್ಚುತ್ತೇವೆ: ಅಮೆರಿಕಾಗೆ ಇರಾನ್‌ ಎಚ್ಚರಿಕೆ

ಯುಡಿ ನ್ಯೂಸ್ ಡಾಟ್ ಕಾಮ್ಟೆಹ್ರಾನ್: ಅಮೆರಿಕ ತನ್ನ ನೌಕಾ ದಿಗ್ಬಂಧನವನ್ನು ಮುಂದುವರಿಸಿದರೆ ಇರಾನ್...

ಗುಜರಾತ್ ಮೇಲುಗೈ: ಸತತ 6ನೇ ಪಂದ್ಯದಲ್ಲೂ ಕೆಕೆಆರ್​ಗೆ ದಕ್ಕದ ಜಯ

ಯುಡಿ ನ್ಯೂಸ್ ಡಾಟ್ ಕಾಮ್ಅಹ್ಮದಾಬಾದ್: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಗುಜರಾತ್...

Copying is disabled on Udupi Digital News.