Saturday, April 18, 2026

ಗುಜರಾತ್ ಮೇಲುಗೈ: ಸತತ 6ನೇ ಪಂದ್ಯದಲ್ಲೂ ಕೆಕೆಆರ್​ಗೆ ದಕ್ಕದ ಜಯ

ಯುಡಿ ನ್ಯೂಸ್ ಡಾಟ್ ಕಾಮ್


ಅಹ್ಮದಾಬಾದ್: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಗುಜರಾತ್ ಟೈಟನ್ಸ್ ತಂಡ 5 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಇತ್ತ ಲೀಗ್​ನಲ್ಲಿ ತನ್ನ ಮೊದಲ ಗೆಲುವಿಗಾಗಿ ಹಂಬಲಿಸುತ್ತಿರುವ ಕೆಕೆಆರ್ ತಂಡಕ್ಕೆ ಗೆಲುವು ಎಂಬುದು ಗಗನ ಕುಸುಮವಾದಂತ್ತಾಗಿದೆ. ತಂಡ ಇದುವರೆಗೆ ಆಡಿರುವ 6 ಪಂದ್ಯಗಳಲ್ಲಿ 5 ರಲ್ಲಿ ಸೋತಿದೆ. ಉಳಿದಂತೆ ಒಂದು ಪಂದ್ಯ ಮಳೆಯಿಂದ ರದ್ದಾಗಿದೆ.

ಶುಕ್ರವಾರ ಗುಜರಾತ್ ನ ಅಹ್ಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತಾ ನೀಡಿದ 181 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಗುಜರಾತ್ 19.4 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 181 ರನ್ ಗಳನ್ನು ಗಳಿಸಿ 5 ವಿಕೆಟ್ ಅಂತರದಲ್ಲಿ ಗೆಲುವು ಸಾಧಿಸಿತು.

ಗುಜರಾತ್ ಪರ ನಾಯಕ ಶುಭ್ ಮನ್ ಗಿಲ್ 86 ರನ್ ಗಳಿಸಿ ಗೆಲುವಿನ ರೂವಾರಿಯಾದರು.

ಉಳಿದಂತೆ ಗುಜರಾತ್ ಪರ ಸಾಯಿ ಸುದರ್ಶನ್ 22, ಜಾಸ್ ಬಟ್ಲರ್ 25, ವಾಷಿಂಗ್ಟನ್ ಸುಂದರ್ 13, ಗ್ಲೇನ್ ಫಿಲಿಪ್ಸ್ 19 ಗಳಿಸಿ ಔಟಾದರು. ರಾಹುಲ್ ತೇವಾಟಿಯಾ (7) ಮತ್ತು ಶಾರುಖ್ ಖಾನ್ (3) ಗೆಲುವಿವ ಔಪಚಾರಿಕತೆ ಮುಕ್ತಾಯಗೊಳಿಸಿದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತಾ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಆರಂಭಿಕರಾಗಿ ಕಣಕ್ಕಿಳಿದ ಅಜಿಂಕ್ಯ ರಹಾನೆ ಶೂನ್ಯ ಸುತ್ತಿ ನಿರಾಶೆ ಮೂಡಿಸಿದರು. ಟಿಮ್ ಸೈಫಿರಟ್ 19 ರನ್ ಗಳಿಸಿದರೆ, ರಘುವಂಶಿ 8, ರೋಮನ್ ಪವೆಲ್ 27, ಅನುಕುಲ್ ರಾಯ್ 9, ರಿಂಕು ಸಿಂಗ್ 1, ರಮನ್ ದೀಪ್ 17, ಸುನಿಲ್ ನರೇನ್ 0, ಕಾರ್ತಿಕ್ ತ್ಯಾಗಿ 6 ರನ್ ಗಳಿಸಿದರು. ಕೆಮರಾನ್ ಗ್ರೀನ್ 55 ಎಸೆತಗಳಲ್ಲಿ 7 ಬೌಂಡರಿ 4 ಸಿಕ್ಸರ್ ಸಹಿತ 79 ಕಲೆಹಾಕಿದರು.

More like this
Related

ಮೇ 14-19 ರವರೆಗೆ ಕೊಡವೂರು ಶ್ರೀ ಶಂಕರನಾರಾಯಣ ಸನ್ನಿಧಾನದಲ್ಲಿ ಮಹಾ ರುದ್ರಯಾಗ

ಯುಡಿ ನ್ಯೂಸ್ ಡಾಟ್ ಕಾಮ್ಉಡುಪಿ: ಮಹತೋಭಾರ ಶ್ರೀ ಶಂಕರನಾರಾಯಣ ಸನ್ನಿಧಾನದ ಕೊಡವೂರಿನಲ್ಲಿ...

ವಿದ್ಯಾರ್ಥಿಗಳ ಸಾಧನೆ ಮಾರುಕಟ್ಟೆಯ ಸರಕಾಗಬಾರದು: ಬಿ.ಎಂ.ಸುಕುಮಾರ ಶೆಟ್ಟಿ

50 ವರ್ಷದ ಕುಂದಾಪುರ ಎಜುಕೇಷನ್ ಸೊಸೈಟಿ ಸಾಧನೆ. ಸಾಮಾನ್ಯರಿಗೂ ಪ್ರವೇಶ |...

ನೌಕಾ ದಿಗ್ಬಂಧನ ತೆಗೆಯದಿದ್ದರೆ ಹಾರ್ಮುಜ್‌ ಜಲಸಂಧಿಯನ್ನ ಮತ್ತೆ ಮುಚ್ಚುತ್ತೇವೆ: ಅಮೆರಿಕಾಗೆ ಇರಾನ್‌ ಎಚ್ಚರಿಕೆ

ಯುಡಿ ನ್ಯೂಸ್ ಡಾಟ್ ಕಾಮ್ಟೆಹ್ರಾನ್: ಅಮೆರಿಕ ತನ್ನ ನೌಕಾ ದಿಗ್ಬಂಧನವನ್ನು ಮುಂದುವರಿಸಿದರೆ ಇರಾನ್...

ಬಹುಮತ ಪಡೆಯುವಲ್ಲಿ NDA ವಿಫಲ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಸೋಲು

ಯುಡಿ ನ್ಯೂಸ್ ಡಾಟ್ ಕಾಮ್ನವದೆಹಲಿ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮತ್ತು ಕ್ಷೇತ್ರ...

Copying is disabled on Udupi Digital News.