Tuesday, April 21, 2026

ಮುಂಬೈಗೆ ವಿಜಯದ ‘ತಿಲಕ’: ತವರಿನಲ್ಲೇ ರನ್ ಗಳಿಸಲು ತಿಣುಕಾಡಿದ ಗಿಲ್ ಪಡೆ!

ಯುಡಿ ನ್ಯೂಸ್ ಡಾಟ್ ಕಾಮ್

ಅಹ್ಮದಾಬಾದ್
:  ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ತಿಲಕ್‌ ವರ್ಮಾ ಅವರ ಸ್ಫೋಟಕ ಶತಕ ಹಾಗೂ ಬೌಲರ್‌ಗಳ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ತವರಿನಲ್ಲೇ ಗುಜರಾತ್‌ ಜೈಂಟ್ಸ್‌ ತಂಡವನ್ನು ಸೋಲಿಸಿ ಮುಂಬೈ ಇಂಡಿಯನ್ಸ್‌99 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.

ಮುಂಬೈ ನೀಡಿದ್ದ 200 ರನ್ ಗಳ ಬೃಹತ್ ಗುರಿ ಬೆನ್ನು ಹತ್ತಿದ ಗುಜರಾತ್ ತಂಡ 15.5 ಓವರ್ ನಲ್ಲಿ ಕೇವಲ 100 ರನ್ ಗಳಿಸಿ ಆಲೌಟ್ ಆಯಿತು. ಮುಂಬೈ ನೀಡಿದ 200 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಗುಜರಾತ್ ಆರಂಭದಿಂದಲೇ ರನ್ ಗಳಿಸಲು ತಿಣುಕಾಡಿತು. ಆರಂಭಿಕ ಆಟಗಾರ ಸಾಯಿ ಸುದರ್ಶನ್ ಶೂನ್ಯಕ್ಕೆ ಔಟಾಗಿ ಗುಜರಾತ್ ಗೆ ಆರಂಭಿಕ ಆಘಾತ ನೀಡಿದರು. ಬಳಿಕ ಗುಜರಾತ್ ಯಾವೊಬ್ಬ ಆಟಗಾರ ಕೂಡ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲಲಿಲ್ಲ.

ಗುಜರಾತ್ ಬ್ಯಾಟಿಂಗ್ ಎಷ್ಟು ಕಳಪೆಯಾಗಿತ್ತು ಎಂದರೆ ವಾಷಿಂಗ್ಟನ್ ಸುಂದರ್ ಗಳಿಸಿದ 26 ರನ್ ಗಳೇ ಗುಜರಾತ್ ಪರ ಆಟಗಾರನೊಬ್ಬ ಗಳಿಸಿದ ವೈಯುಕ್ತಿಕ ಗರಿಷ್ಠ ಸ್ಕೋರ್ ಆಗಿತ್ತು.

ನಾಯಕ ಶುಭ್ ಮನ್ ಗಿಲ್ (14), ಜಾಸ್ ಬಟ್ಲರ್ (5), ಗ್ಲೇನ್ ಫಿಲಿಪ್ಸ್ (6), ರಾಹುಲ್ ತೆವಾಟಿಯಾ (8), ರಷೀದ್ ಖಾನ್ (4), ಶಾರುಖ್ ಖಾನ್ (17), ಕಗಿಸೋ ರಬಾಡಾ (12) ಮತ್ತು ಮಹಮದ್ ಸಿರಾಜ್ (0) ರನ್ ಗಳಿಸುವಲ್ಲಿ ಸಂಪೂರ್ಣ ವಿಫಲರಾದರು. ಪರಿಣಾಮ ಮುಂಬೈ ಎದುರು 99 ರನ್ ಗಳ ಹೀನಾಯ ಸೋಲು ಕಂಡಿತು.

ಮುಂಬೈ ಪರ ಅಶ್ವನಿ ಕುಮಾರ್ 4 ವಿಕೆಟ್ ಕಬಳಿಸಿದರೆ, ಘಜನ್ಱರ್, ಮಿಚೆಲ್ ಸ್ಯಾಂಥ್ನರ್ ತಲಾ 2 ವಿಕೆಟ್ ಪಡೆದರು. ಮುಂಬೈಗೆ ಸಕಾರಾತ್ಮಕ ಅಂಶ ಎಂದರೆ ಇಷ್ಟು ದಿನ ವಿಕೆಟ್ ಇಲ್ಲದೇ ಬಳಲುತ್ತಿದ್ದ ಜಸ್ ಪ್ರೀತ್ ಬುಮ್ರಾ ಇಂದು ಸಾಯಿ ಸುದರ್ಶನ್ ರ ವಿಕೆಟ್ ಪಡೆದು ತಮ್ಮ ವಿಕೆಟ್ ಕೊರತೆ ನೀಗಿಸಿಕೊಂಡರು. ನಾಯಕ ಹಾರ್ದಿಕ್ ಪಾಂಡ್ಯಾ ಕೂಡ 1 ವಿಕೆಟ್ ಪಡೆದರು.

More like this
Related

ಶಾಂತಿ ಒಪ್ಪಂದಕ್ಕೆ ಸಹಿ ಹಾಕುವವರೆಗೂ ದಿಗ್ಬಂಧನ ತೆರವುಗೊಳಿಸಲ್ಲ: ಇರಾನ್ ಗೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ಯುಡಿ ನ್ಯೂಸ್ ಡಾಟ್ ಕಾಮ್ ವಾಷಿಂಗ್ಟನ್: ಶಾಂತಿ ಒಪ್ಪಂದಕ್ಕೆ ಸಹಿ ಹಾಕುವವರೆಗೆ ಅಮೆರಿಕ ಇರಾನ್...

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಪೊಲೀಸರಿಂದ ಸುಳ್ಳು ಸಾಕ್ಷ್ಯ: ವಿಶೇಷ ಕೋರ್ಟ್

ಯುಡಿ ನ್ಯೂಸ್ ಡಾಟ್ ಕಾಮ್ ಬೆಂಗಳೂರು: ಜಿ.ಪಂ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ...

ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ ಕಾರು: ಇಬ್ಬರು ಸಾವು

ಯುಡಿ ನ್ಯೂಸ್ ಡಾಟ್ ಕಾಮ್ ಕಾರವಾರ:  ಅತೀ ವೇಗದ ಚಾಲನೆಯಿಂದ ಕಾರೊಂದು ನಿಯಂತ್ರಣ...

ಪಿಎಸ್‌ಎಲ್‌ನಿಂದ ಹಿಂದೆ ಸರಿದ ದಸುನ್ ಶನಕಾಗೆ ಒಂದು ವರ್ಷದ ನಿಷೇಧ

ಕರಾಚಿ: ಶ್ರೀಲಂಕಾದ ಆಲ್‌ರೌಂಡರ್ Dasun Shanaka ಅವರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ...

Copying is disabled on Udupi Digital News.