Monday, April 27, 2026

ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ ಕಾರು: ಇಬ್ಬರು ಸಾವು

ಯುಡಿ ನ್ಯೂಸ್ ಡಾಟ್ ಕಾಮ್

ಕಾರವಾರ:  ಅತೀ ವೇಗದ ಚಾಲನೆಯಿಂದ ಕಾರೊಂದು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಓರ್ವ ಗಂಭೀರ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಕರ್ಕಾ ಕ್ರಾಸ್–ಅಜಗಾಂವ ಬಳಿ ಸಂಭವಿಸಿದೆ.

ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಧಾರವಾಡದ ಫಾರೂಖ್ ಸಾಬ್ ಮತ್ತು ಹಳಿಯಾಳದ ಮುದಸ್ಸಿರ್ ಇಸ್ಮಾಯಿಲ್ ಮುಲ್ಲಾ ಎಂದು ಗುರುತಿಸಲಾಗಿದೆ.

ಢಿಕ್ಕಿಯ ರಭಸಕ್ಕೆ ಕಾರು ಎರಡು ಮರಗಳ ಮಧ್ಯೆ ಸಿಲುಕಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಕಾರಿನಲ್ಲಿ ಚಾಲಕ ಸೇರಿದಂತೆ ಒಟ್ಟು ಮೂರು ಜನರು ಪ್ರಯಾಣಿಸುತ್ತಿದ್ದರು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ದಾಂಡೇಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ. ಮೃತದೇಹಗಳನ್ನು ಹಳಿಯಾಳದ ತಾಲೂಕು ಆಸ್ಪತ್ರೆಗೆ ಸಾಗಿಸಲಾಗಿದೆ.

More like this
Related

ಹೀಟ್​ ವೇವ್​ ಅಬ್ಬರ: ದೇಶವನ್ನೇ ಸುಡುತ್ತಿದೆ ಬೆಂಕಿ ಬಿಸಿಲು!

ಯುಡಿ ನ್ಯೂಸ್ ಡಾಟ್ ಕಾಮ್ ನವದೆಹಲಿ: ಭಾರತದಲ್ಲಿ ಹೀಟ್​ ವೇವ್​ ಅಬ್ಬರ ದಿನದಿಂದ ದಿನಕ್ಕೆ...

ಇರಾನ್ ದಾಳಿ: ಇಸ್ರೇಲ್ ನೆರವು ಕೋರಿದ UAE!

ಯುಡಿ ನ್ಯೂಸ್ ಡಾಟ್ ಕಾಮ್ ಅಬುದಾಬಿ: ಗಲ್ಫ್ ದೇಶದ ಮೇಲೆ ಇರಾನ್ ದಾಳಿ ಮಾಡಿದ...

ರಿಂಕು, ನರೈನ್‌ ಮಿಂಚು: ಲಖನೌ ಎದುರು ಸೂಪರ್‌ ಓವರ್‌ ನಲ್ಲಿ ಗೆದ್ದು ಬೀಗಿದ ಕೋಲ್ಕತ್ತಾ

ಯುಡಿ ನ್ಯೂಸ್ ಡಾಟ್ ಕಾಮ್ ಲಖನೌ: ಭಾನುವಾರ ನಡೆದ ಲಕ್ನೋ ಸೂಪರ್ ಜೈಂಟ್ಸ್...

ತೊಟ್ಟಂ ಚರ್ಚಿನಿಂದ ವರ್ಗಾವಣೆಗೊಂಡ ವಂ|ಡೆನಿಸ್ ಡೆಸಾ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಉಡುಪಿ: ಜಾತಿ ಧರ್ಮದ ಗೋಡೆಗಳನ್ನು ಕೆಡವಿ ಸರ್ವ ಜನಾಂಗದ ಶಾಂತಿಯ ತೋಟವನ್ನು...

Copying is disabled on Udupi Digital News.