Wednesday, April 29, 2026

ಇರಾನ್ ದಾಳಿ: ಇಸ್ರೇಲ್ ನೆರವು ಕೋರಿದ UAE!

ಯುಡಿ ನ್ಯೂಸ್ ಡಾಟ್ ಕಾಮ್

ಅಬುದಾಬಿ: ಗಲ್ಫ್ ದೇಶದ ಮೇಲೆ ಇರಾನ್ ದಾಳಿ ಮಾಡಿದ ಬೆನ್ನಲ್ಲೆ ಇಸ್ರೇಲ್ ತನ್ನ ಐಕಾನಿಕ್ ಐರನ್ ಡೋಮ್ ವಾಯು ರಕ್ಷಣಾ ವ್ಯವಸ್ಥೆಯನ್ನು UAE ಗೆ ಕಳುಹಿಸಿದೆ ಎಂದು ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ, ಸುದ್ದಿಸಂಸ್ಥೆ ಆಕ್ಸಿಯೋಸ್ ವರದಿ ಮಾಡಿದೆ. ಐರನ್ ಡೋಮ್ ಮಾತ್ರವಲ್ಲ, ರಾಕೆಟ್‌ಗಳು, ಕ್ಷಿಪಣಿಗಳು ಮತ್ತು ಡ್ರೋನ್‌ ತಡೆಗೆ ಬಳಸಲಾಗುವ ವಾಯು ರಕ್ಷಣಾ ವ್ಯವಸ್ಥೆಯನ್ನು ನಿರ್ವಹಿಸಲು ಸೈನ್ಯವನ್ನು ಕಳುಹಿಸಿದೆ.

ಯುಎಸ್ ಮತ್ತು ಇಸ್ರೇಲ್‌ ಜೊತೆಗಿನ ಯುದ್ಧದ ವೇಳೆ ದೇಶದ ಮೂಲಸೌಕರ್ಯದ ಮೇಲೆ ಇರಾನ್ ನಿರಂತರ ದಾಳಿಯ ನಡುವೆ ಯುಎಇ ತನ್ನ ಮಿತ್ರರಾಷ್ಟ್ರಗಳಿಂದ ನೆರವನ್ನು ಕೋರಿತ್ತು. ಹೆಚ್ಚಿನ ಸ್ಪೋಟಕಗಳನ್ನು ತಡೆಹಿಡಿಯಲಾಗಿದ್ದರೂ, ಕೆಲವು ನಾಗರಿಕ ಮತ್ತು ಮಿಲಿಟರಿ ಕಟ್ಟಡಗಳ ಮೇಲೆ ದಾಳಿಯಾಗಿದೆ. ಹೀಗಾಗಿ ಯುಎಇ ನಾಯಕರು ನೆರವನ್ನು ಕೋರಿದ್ದಾರೆ ಎಂದು ವರದಿಯಾಗಿದೆ.

ನೆತನ್ಯಾಹುಗೆ ಕರೆ ಮಾಡಿದ ಯುಎಇ ಅಧ್ಯಕ್ಷರು: ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯದ್ ಕರೆ ಮಾಡಿದಾಗ ಡಜನ್ ಅಧಿಕಾರಿಗಳೊಂದಿಗೆ ಐರಾನ್ ಡೋಮ್ ಬ್ಯಾಟರಿಯನ್ನು ಕಳುಹಿಸಲು ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆದೇಶಿಸಿದ್ದಾರೆ ಎಂದು ಇಸ್ರೇಲಿ ಅಧಿಕಾರಿಗಳು ಆಕ್ಸಿಯೋಸ್ ಗೆ ತಿಳಿಸಿದ್ದಾರೆ.

ಈ ಕ್ರಮವು ಇರಾನಿನ ದಾಳಿಯ ಕೇಂದ್ರಬಿಂದುವಾಗಿದ್ದ ಅಬುಧಾಬಿಗೆ ಪ್ರಯೋಜನಕಾರಿಯಾಗಿದೆ. ಮತ್ತೊಬ್ಬ ಇಸ್ರೇಲಿ ಅಧಿಕಾರಿಯ ಪ್ರಕಾರ, ಯುಎಇ ವಾಯು ರಕ್ಷಣಾ ವ್ಯವಸ್ಥೆಯನ್ನು ಬಳಸಿಕೊಂಡು ಡಜನ್ ಗಟ್ಟಲೇ ಇರಾನಿನ ಕ್ಷಿಪಣಿಗಳನ್ನು ತಡೆಹಿಡಿಯಿತು. ಇರಾನ್ 550 ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳು ಮತ್ತು 2,200 ಕ್ಕೂ ಹೆಚ್ಚು ಡ್ರೋನ್‌ಗಳೊಂದಿಗೆ ಯುಎಇ ಮೇಲೆ ದಾಳಿ ಮಾಡಿದೆ ಎಂದು ಅಬುಧಾಬಿಯ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.

ಬಿಕ್ಕಟ್ಟಿನ ಸಮಯದಲ್ಲಿ ಐರನ್ ಡೋಮ್‌ನ ವಿತರಣೆ ಯುಎಇ-ಇಸ್ರೇಲ್ ಸಂಬಂಧವನ್ನು ಗಾಢವಾಗಿಸಿದೆ ಎಂದು ವರದಿ ತಿಳಿಸಿದೆ. ಇಸ್ರೇಲ್ ಐರಾನ್ ಡೋಮ್ ನ್ನು ವಿದೇಶಕ್ಕೆ ಕಳುಹಿಸಿದ್ದು ಇದೇ ಮೊದಲು. ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ಹೊರತುಪಡಿಸಿ ಐರನ್ ಡೋಮ್ ಬ್ಯಾಟರಿಯನ್ನು ಬಳಸಿದ ಏಕೈಕ ದೇಶ ಈಗ ಯುಎಇ. ಇರಾನ್ ಜೊತೆಗಿನ ಯುದ್ಧದ ಸಮಯದಲ್ಲಿ ಯುಎಇ ಮತ್ತು ಇಸ್ರೇಲ್ ಪರಸ್ಪರ ನಿಕಟ ಸಮನ್ವಯದಲ್ಲಿವೆ ಎಂದು ಉಭಯ ದೇಶಗಳ ಅಧಿಕಾರಿಗಳು ತಿಳಿಸಿದ್ದಾರೆ.

ಅರಬ್ ಗಲ್ಫ್ ಸ್ಟೇಟ್ಸ್ ಇನ್ಸ್ಟಿಟ್ಯೂಟ್ (ಎಜಿಎಸ್ಐ) ಗಾಗಿ ಬರೆದ ಲೇಖನದಲ್ಲಿ, ಯುಎಇಯ ಮಾಜಿ ಭದ್ರತಾ ಅಧಿಕಾರಿ ತಾರೆಕ್ ಅಲ್-ಒಟೈಬಾ ಇಸ್ರೇಲ್ ಅನ್ನು ಶ್ಲಾಘಿಸಿದ್ದಾರೆ. ದೇಶವು ಅಬುಧಾಬಿಗೆ ನಿಜವಾದ ನೆರವು ನೀಡಲು ಮುಂದಾಗಿದೆ ಎಂದು ಹೇಳಿದ್ದಾರೆ.

More like this
Related

ವರಾಹಿ ಒಡಲು ಬರಿದಾಗಿಸಬೇಡಿ – ಕೆ ವಿಕಾಸ್ ಹೆಗ್ಡೆ

ಉಡುಪಿ: ವರಾಹಿ ನದಿ ನೀರನ್ನು ನಂಬಿದ್ದ ಕುಂದಾಪುರ ಪುರಸಭೆ ಹಾಗೂ ಕುಂದಾಪುರ...

ಎಸ್‌ಸಿ ಒಳ ಮೀಸಲಾತಿ ಅಧಿಕೃತ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್

ಯುಡಿ ನ್ಯೂಸ್ ಡಾಟ್ ಕಾಮ್ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಒಳ...

ಪಂದ್ಯದ ವೇಳೆ ಇ-ಸಿಗರೇಟ್ ಸೇದಿದ ರಾಜಸ್ಥಾನ್‌ ನಾಯಕ: ಜೈಲು ಶಿಕ್ಷೆಯ ಭೀತಿ!

ಯುಡಿ ನ್ಯೂಸ್ ಡಾಟ್ ಕಾಮ್ಚಂಡೀಗಢ: ಇಂಡಿಯನ್ ಪ್ರೀಮಿಯರ್ ನಲ್ಲಿ ಪಂಜಾಬ್ ಕಿಂಗ್ಸ್...

ಕೊಲ್ಲೂರು: ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಯುಡಿ ನ್ಯೂಸ್ ಡಾಟ್ ಕಾಮ್ ಕುಂದಾಪುರ: ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲಾ...

Copying is disabled on Udupi Digital News.