Monday, April 27, 2026

ರಿಂಕು, ನರೈನ್‌ ಮಿಂಚು: ಲಖನೌ ಎದುರು ಸೂಪರ್‌ ಓವರ್‌ ನಲ್ಲಿ ಗೆದ್ದು ಬೀಗಿದ ಕೋಲ್ಕತ್ತಾ

ಯುಡಿ ನ್ಯೂಸ್ ಡಾಟ್ ಕಾಮ್

ಲಖನೌ: ಭಾನುವಾರ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಸೂಪರ್​ ಓವರ್ ನಲ್ಲಿ ರೋಚಕ ಗೆಲುವು ಸಾಧಿಸಿದೆ.

ಲಖನೌನ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್‌ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ, ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತು.

ಕೆಕೆಆರ್ ಆರಂಭದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಆದರೆ, ಇನಿಂಗ್ಸ್‌ ಕೊನೆಯ ಓವರ್‌ವೊಂದರಲ್ಲೇ ರಿಂಕು ಸಿಂಗ್‌ ಅವರು 4 ಸಿಕ್ಸರ್‌ ಬಾರಿಸುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.

ಲಖನೌ ಪರ ಉತ್ತಮ ಬೌಲಿಂಗ್‌ ಮಾಡಿದ ಮೊಹ್ಸಿನ್‌ ಖಾನ್‌, 26 ರನ್‌ ನೀಡಿ ಐದು ವಿಕೆಟ್‌ ಪಡೆದರು. ಜಾರ್ಜ್‌ ಲಿಂಡೆ ಇನ್ನೊಂದು ವಿಕೆಟ್‌ ಪಡೆದರು.

ಗೆಲುವಿಗೆ 156 ರನ್ ಗಳ ಸಾಧಾರಣ ಗುರಿ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್, ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್ ಗಳಿಸುವ ಮೂಲಕ ಪಂದ್ಯ ಡ್ರಾನಲ್ಲಿ ಕೊನೆಗೊಂಡಿತು.

ನಂತರ ಸೂಪರ್ ಓವರ್ ನಲ್ಲಿ ಮೂರು ಎಸೆತೆಗಳಲ್ಲಿ ಲಕ್ನೋ ಎರಡು ವಿಕೆಟ್ ಕಳೆದುಕೊಂಡು ಕೇವಲ 1 ರನ್ ಮಾತ್ರ ಗಳಿಸಿತು. ಬಳಿಕ ಬ್ಯಾಟಿಂಗ್ ಮಾಡಿದ ಕೋಲ್ಕತಾ 4 ರನ್ ಗಳಿಸುವ ಮೂಲಕ ರೋಚಕ ಗೆಲುವು ಸಾಧಿಸಿತು.

More like this
Related

ಹೀಟ್​ ವೇವ್​ ಅಬ್ಬರ: ದೇಶವನ್ನೇ ಸುಡುತ್ತಿದೆ ಬೆಂಕಿ ಬಿಸಿಲು!

ಯುಡಿ ನ್ಯೂಸ್ ಡಾಟ್ ಕಾಮ್ ನವದೆಹಲಿ: ಭಾರತದಲ್ಲಿ ಹೀಟ್​ ವೇವ್​ ಅಬ್ಬರ ದಿನದಿಂದ ದಿನಕ್ಕೆ...

ಇರಾನ್ ದಾಳಿ: ಇಸ್ರೇಲ್ ನೆರವು ಕೋರಿದ UAE!

ಯುಡಿ ನ್ಯೂಸ್ ಡಾಟ್ ಕಾಮ್ ಅಬುದಾಬಿ: ಗಲ್ಫ್ ದೇಶದ ಮೇಲೆ ಇರಾನ್ ದಾಳಿ ಮಾಡಿದ...

ತೊಟ್ಟಂ ಚರ್ಚಿನಿಂದ ವರ್ಗಾವಣೆಗೊಂಡ ವಂ|ಡೆನಿಸ್ ಡೆಸಾ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಉಡುಪಿ: ಜಾತಿ ಧರ್ಮದ ಗೋಡೆಗಳನ್ನು ಕೆಡವಿ ಸರ್ವ ಜನಾಂಗದ ಶಾಂತಿಯ ತೋಟವನ್ನು...

ಮರಳು ಓವರ್ಲೋಡಿಂಗ್ ವಿರುದ್ಧ ಉಡುಪಿ ಪೊಲೀಸರ ವಿಶೇಷ ಕಾರ್ಯಾಚರಣೆ; 13 ವಾಹನ ವಶ

ಉಡುಪಿ: ಜಿಲ್ಲೆಯಲ್ಲಿ ಮರಳು ಸಾಗಾಣಿಕೆಯಲ್ಲಿ ಹೆಚ್ಚುವರಿ ಬಾರ (ಓವರ್ಲೋಡಿಂಗ್) ಮಾಡಿ ಅಕ್ರಮವಾಗಿ...

Copying is disabled on Udupi Digital News.