Wednesday, October 28, 2026

1.07 ಕೋಟಿ ರೂ. ಮೌಲ್ಯದ 537 ಕಳುವಾದ ಮೊಬೈಲ್ ಪತ್ತೆ: ವಾರಸುದಾರರಿಗೆ ಮರಳಿಸಿದ ವಿಜಯಪುರ ಪೊಲೀಸರು

ವಿಜಯಪುರ : ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರ ನಿತ್ಯಜೀವನದಲ್ಲಿ ಅತ್ಯಾವಶ್ಯಕವಾಗಿರುವ ಮೊಬೈಲ್ ಫೋನ್‌ಗಳು ಕಳೆದುಹೋದಾಗ ಅಥವಾ ಕಳ್ಳತನವಾದಾಗ ಅವುಗಳನ್ನು ಪತ್ತೆ ಹಚ್ಚಲು ಕೇಂದ್ರ ಸರಕಾರದ ಸಿ.ಇ.ಐ.ಆರ್. ಪೋರ್ಟಲ್ ಅತ್ಯಂತ ಪರಿಣಾಮಕಾರಿಯಾಗಿ ನೆರವಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

ನಗರದ ಪೊಲೀಸ್ ಸಮುದಾಯ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲೆಯಾದ್ಯಂತ ಪರಿಣಾಮಕಾರಿ ಕಾರ್ಯಾಚರಣೆ ನಡೆಸಿ 1.07 ಕೋಟಿ ರೂ. ಮೌಲ್ಯದ ಒಟ್ಟು 537 ಮೊಬೈಲ್ ಫೋನ್‌ಗಳನ್ನು ಪತ್ತೆ ಹಚ್ಚಿ, ಅವುಗಳನ್ನು ಮೂಲ ವಾರಸುದಾರರಿಗೆ ಯಶಸ್ವಿಯಾಗಿ ಹಸ್ತಾಂತರಿಸಲಾಗುತ್ತಿದೆ ಎಂದು ನೀಡಿದರು.

ವಿಜಯಪುರ ಜಿಲ್ಲೆಯ ಎಲ್ಲಾ 28 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರಿಂದ ಸ್ವೀಕೃತವಾದ ಮೊಬೈಲ್ ಕಳೆದುಹೋದ, ಕಳ್ಳತನವಾದ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸಿ.ಇ.ಐ.ಆರ್. ಪೋರ್ಟಲ್ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ನಿರಂತರ ಶೋಧ ಕಾರ್ಯ ನಡೆಸಿದ ಪರಿಣಾಮವಾಗಿ ಇಷ್ಟೊಂದು ಬೃಹತ್ ಪ್ರಮಾಣದ ಮೊಬೈಲ್‌ಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ. ಈವರೆಗೆ ಒಟ್ಟು 537 ಮೊಬೈಲ್‌ಗಳನ್ನು ಪತ್ತೆಹಚ್ಚಲಾಗಿದ್ದು, ಅವುಗಳ ಅಂದಾಜು ಮೌಲ್ಯ 1,07,40,000 ಆಗಿದೆ ಎಂದು ನಿಂಬರಗಿ ವಿವರಿಸಿದರು.

ಸಿ.ಇ.ಐ.ಆರ್. (ಸೆಂಟ್ರಲ್ ಇಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್) ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯು (ಡಿ.ಒ.ಟಿ.) ಅಭಿವೃದ್ಧಿಪಡಿಸಿದ ಉಚಿತ ಡಿಜಿಟಲ್ ತಂತ್ರಜ್ಞಾನವಾಗಿದೆ. ಮೊಬೈಲ್ ಫೋನ್‌ನ ಐ.ಎಂ.ಇ.ಐ. ಸಂಖ್ಯೆಯ ಸಹಾಯದಿಂದ ಫೋನ್ ಎಲ್ಲಿದೆ ಎಂಬುದನ್ನು ಶೋಧಿಸಲು, ಅದನ್ನು ಬೇರೆಯವರು ಬಳಸದಂತೆ ತಡೆಯಲು ಮತ್ತು ಮರಳಿ ಪಡೆಯಲು ಇದು ನೆರವಾಗುತ್ತದೆ ಎಂದರು.

ಒಮ್ಮೆ ಈ ಪೋರ್ಟಲ್‌ನಲ್ಲಿ ಮೊಬೈಲ್ ಬ್ಲಾಕ್ ಮಾಡಿದರೆ, ಕಳ್ಳರು ಅದರಲ್ಲಿ ಬೇರೆ ಯಾವುದೇ ಸಿಮ್ ಕಾರ್ಡ್ ಹಾಕಿದರೂ ಫೋನ್ ಕೆಲಸ ಮಾಡುವುದಿಲ್ಲ. ಇದರಿಂದ ಅಪರಾಧ ಹಾಗೂ ದುರುಪಯೋಗವನ್ನು ಪರಿಣಾಮಕಾರಿಯಾಗಿ ತಡೆಯಬಹುದು ಎಂದು ಹೇಳಿದರು.

More like this
Related

ಎಸ್‌.ಐ.ಆರ್ ಬಳಿಕ ಉಡುಪಿ ಜಿಲ್ಲೆಯಲ್ಲಿ 10.14 ಲಕ್ಷ ಮತದಾರರು; ರಾಜ್ಯದಲ್ಲೇ ಅತಿ ಕಡಿಮೆ ಇಳಿಕೆ ದಾಖಲು

ಉಡುಪಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಪೂರ್ಣಗೊಂಡು...

ಕರ್ನಾಟಕ S I R | ಅಂತಿಮ ಮತದಾರರ ಪಟ್ಟಿ ಪ್ರಕಟ: ರಾಜ್ಯದಲ್ಲಿ ಒಟ್ಟು 4 ಕೋಟಿ, 55 ಲಕ್ಷದ 11 ಮತದಾರರು: ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್‌

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ಸಮಗ್ರ ತೀವ್ರ ಪರಿಷ್ಕರಣೆ (ಎಸ್‍ಐಆರ್) ಪ್ರಕ್ರಿಯೆ...

ಬಾರ್ಕೂರಿನಲ್ಲಿ ನ. 1ರಂದು ಸುಜ್ಞಾನ ವಿದ್ಯಾರ್ಥಿ ವೇತನ ಪರೀಕ್ಷೆ

ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಅವಕಾಶ ಬಾರ್ಕೂರು: ಗ್ರಾಮೀಣ ಪ್ರದೇಶದ ಪ್ರತಿಭಾವಂತ ಹಾಗೂ...

ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸುವುದಾಗಿ ಪತ್ನಿ ಬೆದರಿಕೆ: ಮದುವೆಯಾದ 6 ತಿಂಗಳಲ್ಲೇ ಯುವಕ ಆತ್ಮಹತ್ಯೆಗೆ ಶರಣು

ರಾಮನಗರ: ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸುವುದಾಗಿ...

Copying is disabled on Udupi Digital News.