Friday, May 1, 2026

ಬೆಂಗಳೂರು: ಭಾರೀ ಮಳೆಗೆ ಕುಸಿದ ಬೌರಿಂಗ್‌ ಆಸ್ಪತ್ರೆಯ ತಡೆಗೋಡೆ; 7 ಮಂದಿ ಸಾವು ಶಂಕೆ

ಬೆಂಗಳೂರು: ನಗರದಾದ್ಯಂತ ಸಂಜೆಯಾಗುತ್ತಿದ್ದಂತೆ ಬಿರುಗಾಳಿ, ಗುಡುಗು ಸಹಿತ ಧಾರಾಕಾರವಾಗಿ ಆಲಿಕಲ್ಲು ಮಳೆ ಸುರಿದಿದೆ. ಈ ಮ‍ಧ್ಯೆ ತೀವ್ರ ಮಳೆಗೆ ಬೌರಿಂಗ್‌ ಆಸ್ಪತ್ರೆ ತಡೆಗೋಡೆ ಕುಸಿದು 7 ಜನ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಮೃತಪಟ್ಟವರ ಪೈಕಿ ಕೆಲವರು ಫುಟ್‌ಪಾತ್‌ ಬಳಿ ತಳ್ಳುಗಾಡಿಯಲ್ಲಿ ವ್ಯಾಪಾರ ಮಾಡುತ್ತಿದ್ದರು ಎನ್ನಲಾಗಿದೆ. ಖಚಿತ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಸಂಜೆಯ ವೇಳೆಗೆ ಶುರುವಾದ ಈ ಮಳೆಯು ತೀವ್ರ ಸ್ವರೂಪ ಪಡೆದುಕೊಂಡಿದ್ದು, ರಸ್ತೆಯಲ್ಲಿ ಸಾಗುತ್ತಿದ್ದ ವಾಹನ ಸವಾರರು ಮತ್ತು ಪಾದಚಾರಿಗಳು ತೊಂದರೆಗೊಳಗಾಗಿದ್ದಾರೆ. ಬಿರುಗಾಳಿಯ ರಭಸಕ್ಕೆ ಹಲವು ಕಡೆಗಳಲ್ಲಿ ಮರದ ರೆಂಬೆ ಕೊಂಬೆಗಳು ಮುರಿದು ಬಿದ್ದಿವೆ. ನಿರ್ದಿಷ್ಟವಾಗಿ ಕಮಿಷನರ್ ಕಚೇರಿ ಸಮೀಪದ ಪ್ರದೇಶಗಳಲ್ಲಿ ದೊಡ್ಡ ಕೊಂಬೆಗಳು ನೆಲಕ್ಕುರುಳಿವೆ. ಈ ಸಂದರ್ಭದಲ್ಲಿ, ಗಾಳಿಯ ತೀವ್ರತೆಗೆ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರೊಂದಕ್ಕೆ ಹಾನಿಯಾಗಿದೆ.

More like this
Related

ಮ್ಯಾಡ್ರಿಡ್ ಓಪನ್‌ನಲ್ಲಿ ಜ್ವೆರೆವ್ ಸೆಮಿಫೈನಲ್‌ಗೆ; ಫೆಡರರ್, ನಡಾಲ್ ದಾಖಲೆ ಸಾಲಿಗೆ ಸೇರ್ಪಡೆ

ಮ್ಯಾಡ್ರಿಡ್, : ಜರ್ಮನಿಯ ಟೆನಿಸ್ ತಾರೆ ಅಲೆಕ್ಸಾಂಡರ್ ಜ್ವೆರೆವ್ ಮ್ಯಾಡ್ರಿಡ್ ಓಪನ್...

ಸ್ಥಳೀಯ ಉದ್ಯೋಗ, ಕಾರ್ಮಿಕರ ಗೌರವಯುತ ಬದುಕಿಗೆ ಆದ್ಯತೆ: ಅದಾನಿ ಗ್ರೂಪ್ ಹೊಸ ಬೆಳವಣಿಗೆ ತಂತ್ರ

ಅಹಮದಾಬಾದ್, : ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು ಸಂಸ್ಥೆಯ...

ಏಪ್ರಿಲ್‌ನಲ್ಲಿ ಜಿಎಸ್‌ಟಿ ಸಂಗ್ರಹಣೆ ಸಾರ್ವಕಾಲಿಕ ದಾಖಲೆ; ₹2.43 ಲಕ್ಷ ಕೋಟಿ ವಸೂಲಿ

ನವದೆಹಲಿ, : ದೇಶದ ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹಣೆ...

ದುರ್ಬಲ ಮಧ್ಯಕ್ರಮದ ಬಗ್ಗೆ ಯೋಚಿಸಿದರೆ ಗಮನ ಬೇರೆಡೆ ಹೋಗುತ್ತದೆ: ರಶೀದ್ ಖಾನ್

ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (IPL)ನಲ್ಲಿ ಗುಜರಾತ್ ಟೈಟನ್ಸ್ (GT) ತಂಡದ...

Copying is disabled on Udupi Digital News.