Saturday, May 30, 2026

ಕರ್ನಾಟಕದಲ್ಲಿ ಉಷ್ಣ ಅಲೆ ಎಚ್ಚರಿಕೆ: IMD ಮುನ್ಸೂಚನೆ

ಬೆಂಗಳೂರು: ಈ ಬೇಸಿಗೆಯಲ್ಲಿ ಕರ್ನಾಟಕದ ಕೆಲ ಭಾಗಗಳಲ್ಲಿ 4ರಿಂದ 6 ದಿನಗಳವರೆಗೆ ಉಷ್ಣ ಅಲೆ (ಹೀಟ್ ವೇವ್) ತಾಪಮಾನ ಗೋಚರಿಸಬಹುದೆಂದು India Meteorological Department (IMD) ಮುನ್ಸೂಚನೆ ನೀಡಿದೆ. ಉತ್ತರ ಒಳನಾಡು ಕರ್ನಾಟಕ ಮತ್ತು ಕರಾವಳಿ ಜಿಲ್ಲೆಗಳು ಹೆಚ್ಚಿನ ಪರಿಣಾಮಕ್ಕೊಳಗಾಗುವ ಸಾಧ್ಯತೆ ಇದೆ.

ಸಾಮಾನ್ಯಕ್ಕಿಂತ ಹೆಚ್ಚಾದ ತಾಪಮಾನ

IMD ದೀರ್ಘಾವಧಿ ವರದಿ ಪ್ರಕಾರ, ರಾಜ್ಯದಲ್ಲಿ ಈ ಬಾರಿ ಸಾಮಾನ್ಯಕ್ಕಿಂತ 2ರಿಂದ 6 ಡಿಗ್ರಿ ಸೆಲ್ಸಿಯಸ್ ಹೆಚ್ಚಿದ ಬೇಸಿಗೆ ಕಂಡುಬರುವ ಸಾಧ್ಯತೆ ಇದೆ. ಉತ್ತರ ಒಳನಾಡಿನ 15 ಜಿಲ್ಲೆಗಳಲ್ಲಿ ಸರಾಸರಿ ತಾಪಮಾನವು ಸುಮಾರು 4 ಡಿಗ್ರಿವರೆಗೆ ಏರಿಕೆಯಾಗಬಹುದು.

ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಿದ ಆರ್ದ್ರತೆಯಿಂದ ಉಷ್ಣ ಮತ್ತು ಒದ್ದೆಯಾದ ವಾತಾವರಣ (ಸಲ್ಟ್ರಿ ಕಂಡೀಷನ್) ಉಂಟಾಗಲಿದೆ. ದಕ್ಷಿಣ ಒಳನಾಡಿನಲ್ಲಿ ಉಷ್ಣ ಅಲೆ ಸಾಧ್ಯತೆ ಕಡಿಮೆ ಇದ್ದರೂ, ಕಳೆದ ವರ್ಷಕ್ಕಿಂತ 1.5–2 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಾಗುವ ನಿರೀಕ್ಷೆ ಇದೆ.

ಪ್ರಸ್ತುತ ತಾಪಮಾನ ಸ್ಥಿತಿ

ರಾಜ್ಯದ 31 ಜಿಲ್ಲೆಗಳ ಪೈಕಿ 16 ಜಿಲ್ಲೆಗಳಲ್ಲಿ ಈಗಾಗಲೇ 35°C ಗಿಂತ ಹೆಚ್ಚು ತಾಪಮಾನ ದಾಖಲಾಗುತ್ತಿದೆ.

ಹಾವೇರಿ – 36.7°C

ರಾಯಚೂರು – 36.5°C

ಕೊಡಗು – 32.5°C (ತಂಪಾದ ಪ್ರದೇಶ)

ಬೆಂಗಳೂರು ಹವಾಮಾನ ಕೇಂದ್ರದ ಮುಖ್ಯಸ್ಥ ಎನ್. ಪುವಿಯರಸನ್ ಮಾಹಿತಿ ಪ್ರಕಾರ, ಬೀದರ್, ಕಲಬುರಗಿ, ರಾಯಚೂರು ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಮಾರ್ಚ್–ಏಪ್ರಿಲ್‌ನಲ್ಲಿ ಉಷ್ಣ ಅಲೆ ಸಂಭವಿಸುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಮಳೆ ಪ್ರಮಾಣ ಕಡಿಮೆ ಇರುವ ನಿರೀಕ್ಷೆ ಇದ್ದು, ಮೇ ಅಂತ್ಯದ ವೇಳೆಗೆ ಮಾತ್ರ ಮಿಂಚು-ಗುಡುಗಿನೊಂದಿಗೆ ಮುಂಗಾರು ಪೂರ್ವ ಮಳೆಯಾಗಲಿದೆ.

ಉಷ್ಣ ಅಲೆ ಎಂದರೇನು?

World Meteorological Organization (WMO) ಪ್ರಕಾರ, ಸರಾಸರಿ ಗರಿಷ್ಠ ತಾಪಮಾನಕ್ಕಿಂತ 5 ಡಿಗ್ರಿ ಹೆಚ್ಚು ತಾಪಮಾನವು ಐದು ಅಥವಾ ಹೆಚ್ಚು ದಿನಗಳ ಕಾಲ ಮುಂದುವರಿದರೆ ಅದನ್ನು ಉಷ್ಣ ಅಲೆ ಎಂದು ಕರೆಯಲಾಗುತ್ತದೆ.

ಒಟ್ಟು 90 ಬೇಸಿಗೆ ದಿನಗಳಲ್ಲಿ ಗರಿಷ್ಠ 6 ದಿನಗಳು ಮಾತ್ರ ಪ್ರತ್ಯೇಕ ಉಷ್ಣ ಅಲೆ ದಿನಗಳಾಗಬಹುದು. ಆದರೆ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಿದ ತಾಪಮಾನ ಮತ್ತು ಆರ್ದ್ರತೆಯಿಂದ ಜನರ ಮೇಲೆ ಹೆಚ್ಚಿನ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಕಾರಣವೇನು?

IMD ವರದಿ ಪ್ರಕಾರ, ಈ ಬಾರಿ ಹೆಚ್ಚಿದ ಬೇಸಿಗೆಗೆ ಎಲ್‌ನಿನೋ–ಸೌದರ್ನ್ ಆಸಿಲೇಶನ್ (ENSO) ಮತ್ತು ಇಂಡಿಯನ್ ಓಷನ್ ಡೈಪೋಲ್ (IOD) ಪರಿಣಾಮ ಪ್ರಮುಖ ಕಾರಣವಾಗಿದೆ.
ಮುನ್ನೆಚ್ಚರಿಕೆ ಸೂಚನೆಗಳು

.ಮಧ್ಯಾಹ್ನ ಸಮಯದಲ್ಲಿ ಹೊರಗಡೆ ಹೋಗುವುದನ್ನು ತಪ್ಪಿಸುವುದು

.ಹೆಚ್ಚು ನೀರು ಕುಡಿಯುವುದು

.ಹಗುರವಾದ, ಹತ್ತಿ ಬಟ್ಟೆ ಧರಿಸುವುದು

ಹಿರಿಯರು ಮತ್ತು ಮಕ್ಕಳ ಆರೋಗ್ಯದ ಕಡೆ ವಿಶೇಷ ಗಮನ

More like this
Related

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಆಯ್ಕೆ

ಬೆಂಗಳೂರು: ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ...

ಐಪಿಎಲ್ 2026 ಫೈನಲ್: ಗುಜರಾತ್ ಟೈಟನ್ಸ್ ವಿರುದ್ಧ ಆರ್‌ಸಿಬಿ ಕಾದಾಟ ಇಂದು;

ಹಾಲಿ ಚಾಂಪಿಯನ್ ಆರ್‌ಸಿಬಿ ಮತ್ತು 2022ರ ಚಾಂಪಿಯನ್ ಗುಜರಾತ್ ಟೈಟನ್ಸ್ ನಡುವೆ...

ಕೇರಳದಲ್ಲಿ ಭಾರೀ ಡ್ರಗ್ಸ್ ಜಾಲ ಭೇದನೆ; ₹70 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತು ವಶ

ಆಪರೇಷನ್ ಚಕ್ರವ್ಯೂಹ’ ಅಡಿಯಲ್ಲಿ ಡಿಆರ್‌ಐ ಕಾರ್ಯಾಚರಣೆ; 24 ಕೆ.ಜಿ.ಗಿಂತ ಹೆಚ್ಚು ಮಾದಕ...

ಪತ್ನಿಯನ್ನು ಗಂಟೆಗಳ ಕಾಲ ‘ಕೋಳಿ’ ಭಂಗಿಯಲ್ಲಿ ನಿಲ್ಲಿಸಿ ಹಿಂಸೆ; ತಪ್ಪಿಸಿಕೊಂಡ ಬಳಿಕ ಚಾಕುವಿನಿಂದ ಇರಿದ ಪತಿ ಬಂಧನ

ಮುಂಬೈನಲ್ಲಿ ಅಮಾನುಷ ಘಟನೆ; ಪತ್ನಿಗೆ ಕತ್ತಿಯಿಂದ ಬೆದರಿಕೆ, ಆಸಿಡ್ ದಾಳಿ ಮಾಡುವುದಾಗಿ...

Copying is disabled on Udupi Digital News.